ಕೌಲಾಲಂಪುರ: ಕೋಬ್ರಾ ಕಿಸ್ಸರ್ ಎಂದು ವಿಶ್ವ ಖ್ಯಾತಿ ಪಡೆದಿದ್ದ ಮಲೇಷಿಯಾದ ಅಬು ಝರಿನ್ ಹುಸೇನ್ ಕೋಬ್ರಾ ಕಚ್ಚಿದ ಪರಿಣಾಮ ಸಾವನ್ನಪ್ಪಿದ್ದಾರೆ.
ಪ್ರಪಂಚದಲ್ಲೇ ಅತ್ಯಂತ ವಿಷಪೂರಿತ ಕೋಬ್ರಾ ಹಾವುಗಳಿಗೆ ಕಿಸ್ ಮಾಡುವ ಮೂಲಕ ಅಬು ಹುಸೇನ್ ಪ್ರಸಿದ್ಧಿ ಪಡೆದಿದ್ದರು. ಆದರೆ ಮಲೇಷಿಯಾದ ಬೆಂಟಾಂಗ್ ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಕೋಬ್ರಾ ಕಚ್ಚಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡುವ ಪ್ರಯತ್ನ ನಡೆಸಿದರು, ಚಿಕಿತ್ಸೆ ವಿಫಲವಾಗಿ ಸಾವನ್ನಪ್ಪಿದ್ದಾರೆ.
Advertisement
Advertisement
ಈ ಹಿಂದೆ ಹುಸೇನ್ ಕೋಬ್ರಾವನ್ನೇ ಮದುವೆಯಾಗಿದ್ದಾರೆ ಎಂದು ಸುದ್ದಿಯಾಗುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಪಡೆದಿದ್ದರು. ಬಳಿಕ ಈ ಸುದ್ದಿ ಸುಳ್ಳು ಎಂದು ತಿಳಿಯಿತು. ಹುಸೇನ್ ಮಲೇಷಿಯಾದ ಅಗ್ನಿಶಾಮಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಸ್ನೇಹಿತರ ಮೂಲಕ ಕೋಬ್ರಾ ಹಾವುಗಳನ್ನು ಹಿಡಿಯುವ ಕಲೆ ಕಲಿತ ಬಳಿಕ ಹೆಚ್ಚು ಖ್ಯಾತಿ ಪಡೆದಿದ್ದರು. ಅಲ್ಲದೇ ತಮ್ಮ ಈ ಕೌಶಲ್ಯದ ಮೂಲಕವೇ `ಏಷ್ಯಾ ಗಾಟ್ ಟ್ಯಾಲೆಂಟ್’ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು.
Advertisement
ಹಲವು ಬಾರಿ ರಕ್ಷಣಾ ಕಾರ್ಯಾಚರಣೆ ನಡೆಸುವ ವೇಳೆ ಕೋಬ್ರಾದಿಂದ ಕಚ್ಚಿಸಿಕೊಂಡಿದ್ದರು. 2015 ರಲ್ಲಿ ಕೋಬ್ರಾ ಕಚ್ಚಿದ ಪರಿಣಾಮ ಎರಡು ದಿನಗಳ ಕಾಲ ಕೋಮಾ ಕ್ಕೆ ಜಾರಿದ್ದರು. ಆದರೆ ಈ ಬಾರಿ ಹುಸೇನ್ ಸಾವಿನಿಂದ ಪಾರಾಗಲು ಸಾಧ್ಯವಾಗಿಲ್ಲ ಎಂದು ಮಲೇಷಿಯಾದ ಅಗ್ನಿಶಾಮಕ ಇಲಾಖೆ ಸ್ಪಷ್ಟಪಡಿಸಿದೆ.