ನವದೆಹಲಿ: ಸಾಕ್ಷ್ಯಾಧಾರಗಳನ್ನು ಒದಗಿಸಿದರೆ ವಿವಾದಿತ ಇಸ್ಲಾಮಿಕ್ ಬೋಧಕ ಝಾಕೀರ್ ನಾಯ್ಕ್ (Zakir Naik) ವಿರುದ್ಧ ಹಸ್ತಾಂತರಿಸಬೇಕೆಂಬ ಭಾರತದ ಮನವಿಯನ್ನು ನಮ್ಮ ಸರ್ಕಾರ ಪರಿಗಣಿಸಬಹುದು ಎಂದು ಮಲೇಷ್ಯಾ (Malaysia) ಪ್ರಧಾನಿ ಅನ್ವರ್ ಇಬ್ರಾಹಿಂ (Anwar Ibrahim) ಹೇಳಿದ್ದಾರೆ.
2022 ರಲ್ಲಿ ಪ್ರಧಾನ ಮಂತ್ರಿ ಹುದ್ದೆ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಅನ್ವರ್ ಇಬ್ರಾಹಿಂ ಮೂರು ದಿನಗಳ ಭಾರತ (India) ಪ್ರವಾಸ ಕೈಗೊಂಡಿದ್ದಾರೆ.
Advertisement
ಮಂಗಳವಾರ ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್‌ನಲ್ಲಿ ನಡೆದ ಅಧಿವೇಶನದಲ್ಲಿ ಝಾಕೀರ್ ನಾಯ್ಕ್ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ಈ ಸಮಸ್ಯೆ ದೇಶದ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರದಿರಲಿ ಎಂದು ತಿಳಿಸಿದರು. ಇದನ್ನೂ ಓದಿ: ಹಣ್ಣುಗಳ ಉತ್ಪಾದನೆ ಹೆಚ್ಚಿಸಲು ಕೇಂದ್ರದ ಮಾಸ್ಟರ್ ಪ್ಲ್ಯಾನ್ – ಏನಿದು ಕ್ಲೀನ್ ಪ್ಲಾಂಟ್ ಪ್ರೋಗ್ರಾಂ?
Advertisement
Advertisement
ಮಂಗಳವಾರದ ಮಾತುಕತೆಯ ಸಂದರ್ಭದಲ್ಲಿ ಈ ವಿಷಯವನ್ನು ಭಾರತದ ಕಡೆಯಿಂದ ಪ್ರಸ್ತಾಪಿಸಲಾಗಿಲ್ಲ ಎಂದು ಅವರು ಹೇಳಿದರು. ಇದನ್ನೂ ಓದಿ: PublicTV Explainer: ಭಾರತಕ್ಕೆ ಕಾಲಿಡುತ್ತಾ ಡೆಡ್ಲಿ ವೈರಸ್ – ಆಫ್ರಿಕಾ ಕಾಡಿದ ‘ಮಂಕಿಪಾಕ್ಸ್’ ಪಾಕ್‌ನಲ್ಲಿ ಪತ್ತೆ; ಭಾರತ ಹೈಅಲರ್ಟ್
Advertisement
ನಾವು ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಈ ಹಲವು ವಿಷಯಗಳಲ್ಲಿ ನಾವು ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಅಕ್ರಮ ಹಣ ವರ್ಗಾವಣೆ ಮತ್ತು ದ್ವೇಷದ ಭಾಷಣಗಳ ಮೂಲಕ ಉಗ್ರವಾದವನ್ನು ಪ್ರಚೋದಿಸುವ ಆರೋಪ ಝಾಕೀರ್ ನಾಯ್ಕ್ ಮೇಲಿದೆ. 2016 ರಲ್ಲಿ ಭಾರತವನ್ನು ತೊರೆದಿರುವ ನಾಯ್ಕ್‌ಗೆ ಈ ಹಿಂದೆ ಮಲೇಷ್ಯಾದಲ್ಲಿದ್ದ ಮಹತೀರ್ ಮೊಹಮ್ಮದ್ ನೇತೃತ್ವದ ಸರ್ಕಾರ ಶಾಶ್ವತ ಪೌರತ್ವ ನೀಡಿದೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಕ್ ಝಾಕೀರ್ ನಾಯ್ಕ್ ಭಾಷಣದ ವಿಡಿಯೋದಿಂದ ಪ್ರಭಾವಿತನಾಗಿದ್ದ.ಈತ ಝಾಕೀರ್ ನಾಯ್ಕ್‌ನನ್ನು ʼದಿ ರಿಯಲ್ ಇನ್ಸ್ಪಿರೇಶನ್ʼ ಎಂದು ಸಂಬೋಧಿಸಿದ್ದ. ತನಿಖೆಯ ವೇಳೆ ಶಾರೀಕ್ ಮೊಬೈಲ್‌ನಲ್ಲಿ 50ಕ್ಕೂ ಹೆಚ್ಚು ಝಾಕೀರ್ ನಾಯ್ಕ್ ಭಾಷಣಗಳು ಲಭ್ಯವಾಗಿದ್ದವು. ಇದನ್ನೂ ಓದಿ: ಮೀನು ಸಂಸ್ಕರಿಸಿ ಯಶಸ್ವಿ ಉದ್ಯಮಿಯಾದ ಕೊಡಗಿನ ಮಹಿಳೆ – PMFME ಯೋಜನೆಯ ಲಾಭ ನೀವೂ ಪಡೆಯಿರಿ!
ದ್ವೇಷ ಭಾಷಣ, ಭಯೋತ್ಪಾದನೆಗೆ ಪ್ರೇರಣೆ, ಹಣಕಾಸು ನೆರವು ಆರೋಪ ಹಿನ್ನೆಲೆಯಲ್ಲಿ ವಿವಾದಿತ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್ ʼಪೀಸ್ ಟಿವಿʼಗೆ ಭಾರತ ನಿರ್ಬಂಧ ಹೇರಿದೆ. ಝಾಕೀರ್ ಭಾಷಣದಿಂದ ಪ್ರಚೋದಿತನಾಗಿದ್ದ ಐಸಿಸ್ ಉಗ್ರನೋರ್ವ 2016ರಲ್ಲಿ ಢಾಕಾದ ಮೇಲೆ ದಾಳಿ ಮಾಡಿದ್ದ. ಈ ಘಟನೆಯಿಂದಾಗಿ ತಕ್ಷಣವೇ ಬಳಿಕ ಝಾಕೀರ್ ಭಾರತ ಬಿಟ್ಟು ಮಲೇಷ್ಯಾಕ್ಕೆ ಹೋಗಿದ್ದ.
ಯುವಕರನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡುವುದಕ್ಕೆ ಪ್ರೋತ್ಸಾಹ, ಭಯೋತ್ಪಾದಕರನ್ನು ಹೊಗಳುವುದು, ಆತ್ಮಹತ್ಯಾ ಬಾಂಬ್ ದಾಳಿ ಸಮರ್ಥನೆ, ಹಿಂದೂಗಳು, ಹಿಂದೂ ದೇವರುಗಳು ಮತ್ತು ಇತರ ಧರ್ಮಗಳ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್, ಇತರ ಧರ್ಮಗಳಿಗೆ ಅವಮಾನ ಈ ಎಲ್ಲಾ ಆರೋಪಗಳು ಝಾಕೀರ್ ನಾಯ್ಕ್ ಮೇಲಿದೆ.