ಕೆ.ಆರ್.ಜಿ. ಸ್ಟುಡಿಯೋಸ್ (KRG Studios) ಮತ್ತು ಫ್ರೈಡೇ ಫಿಲಂ ಹೌಸ್‌ನ ಪ್ರಥಮ ಸಹಯೋಗ ಮತ್ತು ಕೆ.ಆರ್.ಜಿ. ಬ್ಯಾನರ್‌ನ ಮೊದಲ ಮಲಯಾಳಂ ಚಿತ್ರ ‘ಪಡಕ್ಕಳಂ’ ಚಿತ್ರಕ್ಕೆ ಮುಹೂರ್ತದ ಮೂಲಕ ಚಾಲನೆ ಸಿಕ್ಕಿದೆ. ಚಿತ್ರತಂಡ ಇಂದು ಕೊಚ್ಚಿಯಲ್ಲಿ ಮುಹೂರ್ತದ ಮೂಲಕ ಚಾಲನೆ ನೀಡಿದ್ದಾರೆ. ಒಂದು ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರವನ್ನು ಅಧಿಕೃತವಾಗಿ ಆರಂಭಿಸಿದೆ. ಇದನ್ನೂ ಓದಿ:ಬಾಲಿವುಡ್‌ಗೆ ಹಾರಿದ ಕನ್ನಡತಿ ಇತಿ ಆಚಾರ್ಯ
ಸದಾ ಹೊಸತನ ಇಟ್ಟು ಕಥೆ ತೋರಿಸುವ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಈಗ ಹೊಸ ಹೆಜ್ಜೆ ಇಟ್ಟಿದೆ. ಮಲಯಾಳಂ ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ‘ಪಡಕ್ಕಳಂ’ ಎಂಬ ಹಾಸ್ಯಭರಿತ ಫ್ಯಾಂಟಸಿಯ ಚಿತ್ರಕ್ಕೆ ಸಾಥ್ ನೀಡುತ್ತಿದ್ದು, ಚಿತ್ರವನ್ನು ಮನು ಸ್ವರಾಜ್ ನಿರ್ದೇಶಿಸುತ್ತಾರೆ.
ಈ ಚಿತ್ರ ಅವರ ಮೊದಲ ಪ್ರಯತ್ನವಾಗಿದ್ದು, ಇದನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ.ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಖ್ಯಾತ ಮಲಯಾಳಂ ನಟ, ನಿರ್ಮಾಪಕ ವಿಜಯ್ ಬಾಬು ಫ್ರೈಡೇ ಫಿಲಂ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ.