ಮಲಯಾಳಂ ಸ್ಟಾರ್ ನಟಿ ಸಾನಿಯಾ ಐಯ್ಯಪ್ಪನ್ (Saniya Iyappan) ಸದ್ಯ `ಸ್ಯಾಟರ್ಡೆ ನೈಟ್’ (Saturday Night) ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಪ್ರಮೋಷನ್ ವೇಳೆ ನಟಿ ಸಾನಿಯಾ ಬಳಿ ಅನುಚಿತ ವರ್ತನೆ ಮಾಡಿದ್ದಕ್ಕಾಗಿ ಕಪಾಳಮೋಕ್ಷ ಮಾಡಿದ್ದಾರೆ.
View this post on Instagram
Advertisement
ಮಾಲಿವುಡ್‌ನ(Mollywood) ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ಸಾನಿಯಾ ಐಯ್ಯಪ್ಪನ್ ಸದ್ಯ `ಸ್ಯಾಟರ್ಡೆ ನೈಟ್’ ಚಿತ್ರ ಇದೀಗ ರಿಲೀಸ್‌ಗೆ ರೆಡಿಯಿದೆ. ಕೇರಳದ ವಿವಿಧ ಕಡೆ ಚಿತ್ರಕ್ಕೆ ಭರ್ಜರಿ ಪ್ರಚಾರ ಕೊಡಲಾಗುತ್ತಿದೆ. ಚಿತ್ರತಂಡವು ಕ್ಯಾಲಿಕಟ್‌ನ ಮಾಲ್‌ವೊಂದರಲ್ಲಿ ಪ್ರಚಾರಕ್ಕೆ ಬಂದಿದ್ದರು. ಈ ವೇಳೆ ಭಾರಿ ಸಂಖ್ಯೆಯ ಜನ ಜಮಾಯಿಸಿದ್ದರು. ಈ ವೇಳೆ ಸಾನಿಯಾ ಮತ್ತು ಆಕೆಯ ಸಹನಟಿಯ ಜೊತೆ ಅಭಿಮಾನಿಯೊಬ್ಬ ಅನುಚಿತವಾಗಿ ವರ್ತಿಸಿದ್ದಾರೆ. ಇದನ್ನೂ ಓದಿ:ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟ ನಟಿ ಮಯೂರಿ
Advertisement
#SaturdayNight promotion event scenes. From Calicut Hilite Mall???? pic.twitter.com/Zt16hPRTau
— ForumKeralam (@Forumkeralam2) September 27, 2022
Advertisement
ಭಾರಿ ನೂಕಾಟದ ನಡುವೆ ವೇದಿಕೆಯಿಂದ ನಟಿ ಸಾನಿಯಾ ಬರುವಾಗ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ್ದಾನೆ. ಈ ವೇಳೆ ನಟಿಯ ಮೈ ಮುಟ್ಟಿದ್ದಾನೆ. ತನ್ನ ಸಹನಟಿಗೂ ಕೂಡ ಇದೇ ಅನುಭವ ಆಗಿದೆ. ಕೂಡಲೇ ಸಾನಿಯಾ ಆತನ ಕಪಾಳಕ್ಕೆ ಹೊಡೆದಿದ್ದಾರೆ. ಇದೀಗ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Advertisement
View this post on Instagram
ಪ್ರಚಾರ ಕಾರ್ಯದಲ್ಲಿರುವಾಗ ನಡೆದಿರುವ ಈ ಘಟನೆಯನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಾನಿಯಾ ಸ್ಪಷ್ಟನೆ ನೀಡಿದ್ದಾರೆ. ಈ ಪೋಸ್ಟ್ ಕೂಡ ಸಖತ್ ವೈರಲ್ ಆಗುತ್ತಿದೆ.