ಎಲ್ಲಾ ಭಾಷೆಯಲ್ಲೂ ದೊಡ್ಮನೆ ಆಟಕ್ಕೆ ತಯಾರಿ ನಡೆಯುತ್ತಿದೆ. ಬಿಗ್ ಬಾಸ್ ತೆಲುಗು ಸೀಸನ್ 7 (Bigg Boss Telugu 7) ಇದೇ ಸೆಪ್ಟೆಂಬರ್ನಿಂದ ಶೋ ಶುರುವಾಗಲಿದೆ. ಬಿಗ್ ಬಾಸ್ ಶೋಗಾಗಿ ಕಾದು ಕೂರುವ ಫ್ಯಾನ್ಸ್ ಗುಡ್ ನ್ಯೂಸ್ ಸಿಕ್ಕಿದೆ. ಇದೀಗ ಬಿಗ್ ಬಾಸ್ ಮನೆಗೆ ಮಲಯಾಳಂ ನಟಿ ಶಕೀಲಾ(Shakeela) ಕಾಲಿಡುತ್ತಿದ್ದಾರೆ.
ನಾಗರ್ಜುನ ಅಕ್ಕಿನೇನಿ(Nagarjuna Akkineni) ನಿರೂಪಣೆಯ ಬಿಗ್ ಬಾಸ್ (Bigg Boss) ಪ್ರೋಮೋ ಈಗಾಗಲೇ ರಿವೀಲ್ ಆಗಿದೆ. ಸಾಕಷ್ಟು ಫನ್ ಈ ಸೀಸನ್ನಲ್ಲಿ ಇರಲಿದೆ ಕಾದುನೋಡಿ ಎಂದು ಫ್ಯಾನ್ಸ್ಗೆ ತಲೆಗೆ ಹುಳಬಿಟ್ಟಿದ್ದಾರೆ. ಇದೆಲ್ಲದರ ನಡುವೆ ದೊಡ್ಮನೆಗೆ ಹಾಟ್ ನಟಿ ಶಕೀಲಾ ಕಾಲಿಡಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಕನ್ನಡತಿ ಶ್ರೀಲೀಲಾಗೆ ಸರಸ್ವತಿ ವರಪ್ರಸಾದ ಎಂದು ಹೊಗಳಿದ ಬಾಲಯ್ಯ
1994ರಲ್ಲಿ ತಮಿಳಿನ ಪ್ಲೇಗರ್ಲ್ಸ್ ಅವರ ಮೊದಲ ಸಿನಿಮಾ. ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಬಿ-ಗ್ರೇಡ್ ಸಿನಿಮಾಗಳಲ್ಲಿ ನಟಿಸಿ ಅವರು ಜನಪ್ರಿಯತೆ ಪಡೆದರು. ಈ ಸಿನಿಮಾಗಳು ಡಬ್ ಆಗಿ ಪರಭಾಷೆಗಳಲ್ಲಿ ರಿಲೀಸ್ ಆಯಿತು. ಶಕೀಲಾ: ಆತ್ಮಕಥಾ ಹೆಸರಿನ ಆಟೋಬಯೋಗ್ರಫಿಯನ್ನು 2013ರಲ್ಲಿ ಬಿಡಗಡೆ ಮಾಡಲಾಯಿತು. ಇದು ಮಲಯಾಳಂ ಭಾಷೆಯಲ್ಲಿದೆ. ಈ ಪುಸ್ತಕದಲ್ಲಿ ಅವರು ಕುಟುಂಬ, ಸಿನಿಮಾ ಜಗತ್ತು- ರಾಜಕೀಯದ ಬಗ್ಗೆ ಹೇಳಿದ್ದಾರೆ.
ಸದ್ಯ ಶಕೀಲಾ ಬಿಗ್ ಬಾಸ್ಗೆ ಕಾಲಿಡೋಕೆ ರೆಡಿ ಆಗಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅವರ ಜೀವನದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ಈ ಶೋ ಮೂಲಕ ಹೆಚ್ಚಿನ ಮಾಹಿತಿ ಹೊರಬೀಳಲಿದೆ.