ರಾಷ್ಟ್ರ ಪ್ರಶಸ್ತಿ ವಿಜೇತೆ ಮಲಯಾಳಂ ನಟಿ ಲಲಿತಾ ಇನ್ನಿಲ್ಲ

Public TV
1 Min Read
lalitha 1

ರಾಷ್ಟ್ರ ಪ್ರಶಸ್ತಿ ವಿಜೇತೆ, ಮಲಯಾಳಂ ಖ್ಯಾತ ನಟಿ ಲಲಿತಾ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.  ಮಹೇಶ್ವರಿ ಅಮ್ಮ ಹೆಸರಿನಿಂದ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದ ಇವರು, ನಂತರದ ದಿನಗಳಲ್ಲಿ ಲಲಿತಾ ಆಗಿ ಫೇಮಸ್ ಆದರು. ಇದನ್ನೂ ಓದಿ : ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ

lalitha 2

ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ಲಲಿತಾ, ‘ಕೇರಳ ಪೀಪಲ್ಸ್ ಆರ್ಟ್ ಕ್ಲಬ್’ ರಂಗ ತಂಡದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು. . ‘ಕೂಟುಕುಟುಂಬಂ’ ಸಿನಿಮಾದ ಮೂಲಕ 1969ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ಮಲಯಾಳಂನ ಬಹುತೇಕ ಸೂಪರ್ ಸ್ಟಾರ್ ಗಳ ಜತೆ ನಟಿಸಿದ ಹೆಗ್ಗಳಿಕೆ ಇವರದ್ದು. ಸಂದೇಶಂ, ಅಮರಂ, ಆರವಂ, ಗಾಡ್ ಫಾದರ್ ಸೇರಿದಂತೆ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರಿಗೆ ಎರಡು ಬಾರಿ ಅತ್ಯುತ್ತಮ ಪೋಷಕಿ ನಟಿ ರಾಷ್ಟ್ರ ಪ್ರಶಸ್ತಿ ಬಂದಿದೆ. 1991ರಲ್ಲಿ ಅಮರಂ ಚಿತ್ರಕ್ಕಾಗಿ, 2000ನೇ ಇಸವಿಯಲ್ಲಿ ಶಾಂತಂ ಸಿನಿಮಾದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇದನ್ನೂ ಓದಿ: ಒಂದು ಟ್ವೀಟ್‌ ಎಡವಟ್‌ – ನಟ ಚೇತನ್ ಅರೆಸ್ಟ್‌

lalitha 3

ಹಿರಿಯ ನಟಿಯ ನಿಧನಕ್ಕೆ ಇಡೀ ಮಲಯಾಳಂ ಸಿನಿಮಾ ರಂಗವೇ ಕಂಬನಿ ಮಿಡಿದಿದೆ. ನಟಿ ಕೀರ್ತಿ ಸುರೇಶ್, ಮುಮ್ಮುಟ್ಟಿ, ಮೋಹನ್ ಲಾಲ್ ಹಾಗೂ ಮಲಯಾಳಂ ಅನೇಕ ರಾಜಕೀಯ ಮುಖಂಡರು ಸೇರಿದಂತೆ ಸಾಕಷ್ಟು ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *