ಜುಲೈ 4ರಂದು ಕೇರಳದ ಅಯ್ಯಂತೊಳೆ ಎಸ್.ಎನ್. ಪಾರ್ಕ್ ನಲ್ಲಿ ಆಡುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಗುಪ್ತಾಂಗ ತೋರಿಸಿದ್ದ ಎನ್ನುವ ಕಾರಣಕ್ಕಾಗಿ ಬಂಧಿತನಾಗಿದ್ದ ಮಲಯಾಳಂ ಖ್ಯಾತನಟ ಶ್ರೀಜಿತ್ ರವಿಗೆ ಕೇರಳ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಕುಟುಂಬಕ್ಕೆ ತಾಕೀತು ಮಾಡಿದೆ.
Advertisement
ಅಂದು ಎಸ್.ಎನ್ ಪಾರ್ಕನಲ್ಲಿಅಪ್ರಾಪ್ತ ಬಾಲಕಿಯರು ಆಟವಾಡುತ್ತಿದ್ದರು. ಸಮೀಪದಲ್ಲೇ ಕಾರಿನಲ್ಲಿ ಕೂತಿದ್ದ ಶ್ರೀಜಿತ್ ರವಿ, ಬಾಲಕಿಯರನ್ನು ಕಂಡು ಕಾರಿಳಿದು ಬಂದಿದ್ದಾರಂತೆ. ನಂತರ ಪ್ಯಾಂಟ್ ಬಿಚ್ಚಿ ಗುಪ್ತಾಂಗ ತೋರಿಸಿದ್ದಾರೆ ಎಂದು ಬಾಲಕಿಯರ ಪಾಲಕರು ತ್ರಿಶೋರ್ ಪಶ್ಚಿಮ ವಿಭಾಗದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರನ್ನು ಆಧರಿಸಿ, ಶ್ರೀಜಿತ್ ಅವರನ್ನು ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿತ್ತು. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್
Advertisement
Advertisement
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಜಿತ್ ಪರ ವಕೀಲರು ನ್ಯಾಯಾಲಯದ ಮುಂದೆ ತಮ್ಮ ಕಕ್ಷಿದಾರ ಆರು ವರ್ಷಗಳಿಂದ ವರ್ತನೆಯ ಅಸ್ವಸ್ಥತೆಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಪ್ರಜ್ಞಾಪೂರ್ವಕವಾಗಿ ಆದದ್ದು ಅಲ್ಲ ಎಂದು ಮನವಿ ಮಾಡಿಕೊಂಡರು. ವಕೀಲರ ವಾದವನ್ನು ಪರಿಗಣಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಭರವಸೆಯನ್ನು ಅಫಿಡವಿಟ್ ಮೂಲಕ ಪತ್ನಿ ಮತ್ತು ತಂದೆ ಸಲ್ಲಿಸಬೇಕೆಂದು ಹೇಳಿದೆ. ಮತ್ತೆ ಇಂತಹ ಪ್ರಕರಣ ಅವರಿಂದ ಮರುಕಳಿಸಿದರೆ, ಜಾಮೀನು ರದ್ದು ಮಾಡುವುದಾಗಿಯೂ ಹೇಳಿದೆ.