Connect with us

ಕೇರಳದಲ್ಲಿ ಖ್ಯಾತ ಬಹುಭಾಷಾ ನಟಿ ಮೇಲೆ ಮಾಜಿ ಡ್ರೈವರ್‍ನಿಂದಲೇ ರೇಪ್

ಕೇರಳದಲ್ಲಿ ಖ್ಯಾತ ಬಹುಭಾಷಾ ನಟಿ ಮೇಲೆ ಮಾಜಿ ಡ್ರೈವರ್‍ನಿಂದಲೇ ರೇಪ್

ಕೊಚ್ಚಿ: ಶೂಟಿಂಗ್ ಮುಗಿಸಿ ವಾಪಾಸಾಗುತ್ತಿದ್ದ ಬಹುಭಾಷಾ ನಟಿಯೊಬ್ಬರನ್ನು ಗ್ಯಾಂಗ್‍ವೊಂದು ಅಪಹರಿಸಿ ಅತ್ಯಾಚಾರ ಎಸಗಿದ್ದು, ಈ ಸಂಬಂಧ ಪೊಲೀಸರು ನಟಿಯ  ಡ್ರೈವರ್‍ನನ್ನು ಬಂಧಿಸಿದ್ದಾರೆ.

ಒಟ್ಟು ಏಳು ಮಂದಿಯ ಗ್ಯಾಂಗ್ ಈ ಕೃತ್ಯ ಎಸಗಿದ್ದು, ಡ್ರೈವರ್  ಮಾರ್ಟಿನ್ ನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಸುನೀಲ್ ಎಂದು ಗುರುತಿಸಲಾಗಿದ್ದು, ಕೆಲ ತಿಂಗಳ ಕಾಲ ನಟಿಯ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕೃತ್ಯಕ್ಕೆ ಸಹಕಾರ ನೀಡಿದ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಈಗ ಶೋಧ ಕಾರ್ಯ ಆರಂಭಿಸಿದ್ದಾರೆ.

ಶನಿವಾರ ಬೆಳಗ್ಗೆ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವ ಸುದ್ದಿ ಸಿಕ್ಕಿತ್ತು. ಆದರೆ ನಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ.

ಏನಿದು ಘಟನೆ?
ಶುಕ್ರವಾರ ರಾತ್ರಿ ಕೇರಳದ ತ್ರಿಶೂರ್‍ನಿಂದ ಎರ್ನಾಕುಳಂ ಗೆ ನಟಿ ಮತ್ತು ಚಾಲಕ ಇಬ್ಬರೇ ಪ್ರಯಾಣಿಸುತ್ತಿದ್ದ ವೇಳೆ ನಡು ರಸ್ತೆಯಲ್ಲೇ ಟೆಂಪೋ ಟ್ರಾವೆಲ್ಲರ್ ವಾಹನದಲ್ಲಿ ಬಂದ ಗ್ಯಾಂಗ್ ಆಡಿ ಕಾರನ್ನು ಕಾರನ್ನು ಅಡ್ಡಗಟ್ಟಿ ಪ್ರವೇಶಿಸಿದೆ. ಡ್ರೈವರ್ ಕಾರನ್ನು ಚಲಾಯುಸುತ್ತಿದ್ದಂತೆ ಕಾಮುಕರು ಕೃತ್ಯ ಎಸಗಿ ಪಳರಿವಟ್ಟಂ ಎಂಬಲ್ಲಿ ನಟಿಯನ್ನು ಬಿಟ್ಟು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಕಾಮುಕರು ಕೃತ್ಯದ ಫೋಟೋ ಮತ್ತು ವಿಡಿಯೋವನ್ನು ತೆಗೆದಿದ್ದು, ಘಟನೆ ಬಳಿಕ ನಟಿ ಕಾಕನಾಡದ ನಿರ್ದೇಶಕರ ಮನೆಗೆ ತೆರಳಿ ಆಶ್ರಯ ಪಡೆದಿದ್ದಾರೆ. ಕಳಮಶೆರಿ ವೈದ್ಯಕೀಯ ಕಾಲೇಜಿನಲ್ಲಿ  ವೈದ್ಯಕೀಯ ಪರೀಕ್ಷೆ ನಡೆದಿದ್ದು, ನಟಿಯ ಮೇಲೆ ಆತ್ಯಾಚಾರ ಎಸಗಿರುವುದು ಸಾಬೀತಾಗಿದೆ.

ಶುಕ್ರವಾರ ಮಾರ್ಟಿನ್ ಮತ್ತು ಸುನೀಲ್ ನಡುವೆ ಸುಮಾರು 40 ಕರೆಗಳು ಹೋಗಿವೆ. ಅಷ್ಟೇ ಅಲ್ಲದೇ ಸಾಕಷ್ಟು ಸಂದೇಶಗಳು ಸಹ ಹೋಗಿದೆ ಎಂದು ಎರ್ನಾಕುಲಂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement
Advertisement