CinemaCrimeLatestMain PostSouth cinema

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ನಟ ವಿಜಯ್ ಬಾಬು ಪಾಸ್‌ಪೋರ್ಟ್ ಸೀಜ್

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮಲಯಾಳಂ ನಟ ವಿಜಯ್ ಬಾಬು ಅವರ ಪಾಸ್‌ಪೋರ್ಟ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮುಟ್ಟುಗೋಲು ಹಾಕಿದೆ. ಪಾಸ್‌ಪೋರ್ಟ್ ಕೂಡ ಜಪ್ತಿ ಆಗಿರುವುದರಿಂದ ವಿಜಯ್ ಬಾಬು ಅವರ ವೀಸಾ ಕೂಡ ರದ್ದಾಗಲಿದೆ ಎಂದು ಕೊಚ್ಚಿ ನಗರದ ಪೊಲೀಸ್ ಆಯುಕ್ತ ಸಿ.ಎಚ್ ನಾಗರಾಜು ತಿಳಿಸಿದ್ದಾರೆ.

ಮಾಜಿ ಸಹೋದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ನಟ ವಿಜಯ್ ಬಾಬು ಮೇಲೆ ಪ್ರಕರಣ ದಾಖಲಾಗಿತ್ತು. ಇದೀಗ ಕೊಚ್ಚಿ ನಗರ ಪೊಲೀಸರ ಮನವಿಯ ಮೇರೆಗೆ ಆರೋಪಿ ವಿಜಯ್ ಬಾಬು ಅವರ ಪಾಸ್‌ಪೋರ್ಟ್ ಅನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಜಪ್ತಿ ಮಾಡಲಾಗಿದೆ. ವಿಜಯ್ ಬಾಬು ಹೆಸರಿನಲ್ಲಿರುವ ಎಲ್ಲಾ ದೇಶದ ವೀಸಾಗಳು ಈಗ ಅಮಾನ್ಯವಾಗಿದೆ. ಅವರು ಬೇರೆ ದೇಶಕ್ಕೆ ಹೋಗುವ ಸೂಚನೆಯಿದ್ದು, ವಿಜಯ್ ವಿರುದ್ಧ ನ್ಯಾಯಾಲಯದ ವಾರೆಂಟ್ ಇದೆ ಎಂದು ತಿಳಿದು ಬಂದಿದೆ. ಮಲಯಾಳಂ ನಟ ವಿಜಯ್ ಬಾಬು ಪಾಸ್‌ಪೋರ್ಟ್ ಜಪ್ತಿಯ ಹಿನ್ನೆಲೆ ಮೇ.24 ರಂದು ವಿಜಯ್ ಬಾಬು ಕಚೇರಿಗೆ ಹಾಜರಾಗದಿದ್ದರೆ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಈ ಹಿಂದೆ ಏಪ್ರಿಲ್ 22ರಂದು ವಿಜಯ್ ಬಾಬು ವಿರುದ್ಧ ದಕ್ಷಿಣ ಎರ್ನಾಕುಲಂ ಪೊಲೀಸರು ಮಹಿಳೆಯೊಬ್ಬರು ನೀಡಿರುವ ದೂರಿನ ಮೇರೆಗೆ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ನಟ, ನಿರ್ಮಾಪಕ ವಿಜಯ್ ಬಾಬು ಸಿನಿಮಾಗಳಲ್ಲಿ ಪಾತ್ರ ಕೊಡುವ ನೆಪದಲ್ಲಿ ಮಹಿಳೆಯ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಜತೆ ಫೇಸ್‌ಬುಕ್ ಲೈವ್‌ನಲ್ಲಿ ಮಹಿಳೆಯ ಹೆಸರನ್ನು ಬಹಿರಂಗಪಡಿಸಿದ್ದ ಕಾರಣ ವಿಜಯ್ ಬಾಬು ಮೇಲೆ ಮತ್ತೊಂದು ದೂರು ದಾಖಲಾಗಿತ್ತು.

Leave a Reply

Your email address will not be published.

Back to top button