– ಎಲ್ಲಾ ಮಳೆಯರು ಸುರಕ್ಷಿತವಾಗಿರಿ ಎಂದ ನಟಿ
ಡೀಪ್ ಫೇಕ್‌ನ ಕಾಟ ಕನ್ನಡಕ್ಕೆ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗಕ್ಕೆ ಅಂಟಿಕೊಂಡಿದೆ. ಅದರಲ್ಲಿಯೂ ಸೆಲೆಬ್ರಿಟಿಗಳು ಇದಕ್ಕೆ ಹೆಚ್ಚುಬಲಿಯಾಗುತ್ತಿದ್ದಾರೆ. ಯಾವುದು ಅಸಲಿ, ಯಾವುದು ನಕಲಿ ಎನ್ನುವುದು ತಿಳಿಯುವುದೇ ಕಷ್ಟವಾಗಿದೆ. ಬಹುಭಾಷಾ ನಟಿ ಪ್ರಗ್ಯಾ ನಗ್ರಾ (Pragya Nagra) ಅವರದ್ದು ಎನ್ನಲಾದ ಖಾಸಗಿ ವಿಡಿಯೋ (Private Video) ಲೀಕ್ ಆಗಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಯಾಗುತ್ತಿದೆ.
ತಮಿಳು, ತೆಲುಗು ಮತ್ತು ಮಲಯಾಳಿ ಸಿನಿಮಾಗಳಲ್ಲಿ ಫೇಮಸ್ ಆಗಿರೋ ನಟಿ ಪ್ರಗ್ಯಾ ಅವರದ್ದು ಎನ್ನಲಾದ ಕೆಲವು ಖಾಸಗಿ ಕ್ಷಣಗಳ ವಿಡಿಯೋಗಳು ವೈರಲ್ ಆಗಿದ್ದು, ಇದು ಎಲ್ಲರಿಗೂ ದೊರಕುವಂತಾಗುತ್ತಿದೆ. ಈ ವಿಡಿಯೋದಲ್ಲಿ ನಟಿಯು, ವ್ಯಕ್ತಿಯೊಬ್ಬರ ಜೊತೆಗೆ ಕೆಲವು ಖಾಸಗಿ ಕ್ಷಣಗಳನ್ನು ಕಳೆದಿರುವಂತೆ ತೋರಿಸಲಾಗುತ್ತಿದೆ. ಇದಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದು, ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಇನ್‌ಸ್ಟಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಪ್ರಗ್ಯಾ, ಇದೊಂದು ಕೆಟ್ಟ ಕನಸು ಅಂತ ನಾನು ಭಾವಿಸುತ್ತೇನೆ, ತಂತ್ರಜ್ಞಾನದಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದಕ್ಕೂ ಇದೆ. ಆದ್ರೆ ಕೆಲವರು ಇದನ್ನು ಎಐ ರಚಿಸಲು ಬಳಿಸಿ, ದುರುಪಯೋಗಪಡಿಸಿಕೊಳ್ಳುವ ಕೆಲಸವನ್ನು ಕೆಲ ದುಷ್ಟರು ಮಾಡುತ್ತಿದ್ದಾರೆ. ಈ ಕ್ಷಣದಲ್ಲಿ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ನಾನು ಕೃತಜ್ಞಳಾಗಿರುತ್ತೇನೆ. ಬೇರೆ ಯಾವ ಮಹಿಳೆಯೂ ಇಂತಹ ಅಗ್ನಿಪರೀಕ್ಷೆಗೆ ಒಳಗಾಗಬಾರದು, ಎಲ್ಲರೂ ಸುರಕ್ಷಿತವಾಗಿರಲಿ ಎಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ಪ್ರಗ್ಯಾ ನಾಗ್ರಾ ಹಾಟ್ ಬ್ಯೂಟಿ ಎಂದೇ ಫೇಮಸ್ ಆದವರು. ಸೀರೆಯುಟ್ಟರೂ ಅದರಲ್ಲಿಯೂ ಹಾಟ್ ಆಗಿಯೇ ಕಾಣಿಸಿಕೊಳ್ಳುವ ನಟಿಗೆ ಇನ್‌ಸ್ಟಾಗ್ರಾಂನಲ್ಲಿ ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ಇಲ್ಲಿ ಕೂಡ ಅವರು ಸದಾ ಹಾಟ್, ಬೋಲ್ಡ್ ಫೋಟೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೇ ಕಾರಣಕ್ಕೆ, ಈ ವಿಡಿಯೋದಲ್ಲಿ ಇರುವಾಕೆ ಕೂಡ ಪ್ರಗ್ಯಾ ಎನ್ನುವುದು ಹಲವರ ಅಭಿಮತ.
2022 ರಲ್ಲಿ ಪ್ರಗ್ಯಾ ತಮಿಳಿನ ‘ವರಲಾರು ಮುಕ್ಕಿಯಂ’ ಮೂಲಕ ಸಿನಿ ಪಯಣ ಆರಂಭಿಸಿದರು. 2023 ರಲ್ಲಿ ಮಲಯಾಳಂ ಚಿತ್ರ ‘ನಾಧಿಕಲಿಲ್ ಸುಂದರಿ ಯಮುನಾ’ದಲ್ಲಿ ಮಿಂಚಿದರು. ಇದರಲ್ಲಿ ಅವರು ಕನ್ನಡ ಹುಡುಗಿಯ ಪಾತ್ರವನ್ನು ನಿರ್ವಹಿಸಿದರು. ತಮಿಳು ಎನ್-4 ಚಿತ್ರದಲ್ಲಿ ಸ್ವಾತಿ ಹೆಸರಿನ ಪಾತ್ರ ನಿರ್ವಹಿಸಿ ಖ್ಯಾತಿ ಗಳಿಸಿದ್ದರು. ತೆಲುಗಿನಲ್ಲಿ ಲಗ್ಗಂ ಸಿನಿಮಾ ಕಳೆದ ನವೆಂಬರ್ ನಲ್ಲಿ OTTಯಲ್ಲಿ ಬಿಡುಗಡೆಯಾಗಿದೆ.