ಮಾಲಿವುಡ್‌ನ (Mollywood) ಖ್ಯಾತ ಕಲಾವಿದ ಹರೀಶ್ ಪೆಂಗನ್ (Harish Pegan) ಅವರು ಮಂಗಳವಾರದಂದು (ಮೇ 30) ನಿಧನರಾಗಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ಹರೀಶ್ ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಒಂದು ತಿಂಗಳಿಂದ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಈಗ ಚಿಕಿತ್ಸೆ ಫಲಕಾರಿ ಆಗದೆ ಅವರು ನಿಧನರಾಗಿದ್ದಾರೆ. ಇದನ್ನೂ ಓದಿ:ಎದೆ ಮೇಲೆ ಕೈ ಇಟ್ಟ ಅಂತಾ ಕಿರಿಕ್ ಮಾಡಿದ್ದು ನೀನೇ ಅಲ್ವಾ- ಸಾನ್ಯ ಹಾಟ್ ಫೋಟೋಗೆ ಕಿಡಿಕಾರಿದ ನೆಟ್ಟಿಗರು
Advertisement
ಹರೀಶ್ ಪೆಂಗನ್ ಅವರು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಸಹಜ ನಟನೆಯ ಮೂಲಕ ಗಮನ ಸೆಳೆದಿದ್ದರು. ‘ಪ್ರತೀಕಾರಂ’, ‘ಮಿನ್ನಲ್ ಮುರಳಿ’, ‘ವೆಳ್ಳರಿಪಟ್ಟಣಂ’, ‘ಜಾನೆ ಮನ್’, ‘ಜಯ ಜಯ ಜಯ ಹೇ’, ‘ಜೋ & ಜೋ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹರೀಶ್ ಪೆಂಗನ್ ನಟಿಸಿದ್ದಾರೆ.
Advertisement
ಕೆಲ ದಿನಗಳ ಹಿಂದೆ ವೈದ್ಯರು ಹರೀಶ್ ಅವರಿಗೆ ಯಕೃತ್ತಿನ (Liver) ಕಸಿ ಮಾಡಲು ಶಿಫಾರಸು ಮಾಡಿದ್ದರು. ಆರ್ಥಿಕ ಸಂಕಷ್ಟದಲ್ಲಿದ್ದ ಹರೀಶ್‌ಗೆ ನಟ ನಂದನ್ ಉನ್ನಿ (Nandan Unni) ಅವರು ಸಹಾಯಕ್ಕೆ ಬಂದರು. ಹರೀಶ್ ಪೆಂಗನ್ ಚಿಕಿತ್ಸೆಗೆ ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಕೋರಿದ್ದರು. ಆದರೆ, ಚಿಕಿತ್ಸೆಗೆ ಸಾಕಾಗುವಷ್ಟು ಹಣ ಬಂದಿಲ್ಲ. ಹೀಗಾಗಿ ಅವರು ಮೃತಪಟ್ಟರು. ಇದೀಗ ಹಿರಿಯ ನಟ ಹರೀಶ್ ಪೆಂಗನ್ ನಿಧನಕ್ಕೆ ಮಲಯಾಳಂ ಚಿತ್ರರಂಗದ ನಟ- ನಟಿಯರು ಸಂತಾಪ ಸೂಚಿಸಿದ್ದಾರೆ.
Advertisement