ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಅಖಿಲ್ ವಿಶ್ವನಾಥ್ (Akhil Viswanath) ಅವರು ತ್ರಿಶೂರ್‌ನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಕೇರಳ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಶ್ವನಾಥ್ (30) ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅವರ ಸಾವು ಮಲಯಾಳಂ ಚಲನಚಿತ್ರೋದ್ಯಮ ಮತ್ತು ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. ಇದನ್ನೂ ಓದಿ: 1 ಗಂಟೆಯ ಕಾರ್ಯಕ್ರಮ, 22 ನಿಮಿಷಕ್ಕೆ ಮೆಸ್ಸಿ ಹೊರಟಿದ್ದೇಕೆ? – ಇಲ್ಲಿದೆ ಅಸಲಿ ಕಾರಣ
ಅಖಿಲ್ ಮನೆಯಲ್ಲಿ ಬಿದ್ದಿದ್ದರು. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸಾವಿಗೆ ಕಾರಣವೇನೆಂದು ಇನ್ನೂ ಅಧಿಕೃತ ಮಾಹಿತಿ ಇಲ್ಲ. ಆದರೂ, ಆರಂಭಿಕ ವರದಿಗಳು ಆರೋಗ್ಯ ಸಮಸ್ಯೆಗಳಿಂದಾಗಿರಬಹುದು ಎಂದು ಸೂಚಿಸುತ್ತವೆ.
ಅಖಿಲ್ ಅವರ ತಂದೆ ವಿಶ್ವನಾಥ್ ಇತ್ತೀಚೆಗೆ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಡಾಲಿ ವ್ಯಾಪಾರಿ ಏಕೋಪನ ಸಮಿತಿ ವ್ಯಾಪಾರಭವನದಲ್ಲಿ ಕೆಲಸ ಮಾಡುತ್ತಿರುವ ಅವರ ತಾಯಿ ಗೀತಾ ಅವರು ಕೆಲಸಕ್ಕೆ ಹೊರಡುವ ವೇಳೆ ಅಖಿಲ್ ತಮ್ಮ ಮನೆಯಲ್ಲಿ ಮೃತಪಟ್ಟಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದರು.
ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಅಖಿಲ್ ಅವರ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ. ನಟ ಪ್ರತಿಭೆಯನ್ನು ಇದೇ ವೇಳೆ ನೆನಪಿಸಿಕೊಂಡಿದ್ದಾರೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ದುರಂಧರ್ ಚಿತ್ರ ಕಂಡು ಕಣ್ಣು ಕೆಂಪು ಮಾಡಿಕೊಂಡ ಪಾಕಿಸ್ತಾನ..ಏನ್ ಕಾರಣ?

