ಮಂಡ್ಯ: ಮಳವಳ್ಳಿಯಲ್ಲಿ (Malavalli) ಟ್ಯೂಷನ್‌ಗೆ ಹೋಗಿದ್ದ 10 ವರ್ಷದ ಬಾಲಕಿಯ (Girl) ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅಮಾನುಷವಾಗಿ ಕೊಲೆಗೈದಿದ್ದ ಕಡುಪಾಪಿಗೆ ಶೀಘ್ರದಲ್ಲಿ ಶಿಕ್ಷೆ ಕೊಡಿಸಲು ಪೊಲೀಸರು ಮುಂದಾಗಿದ್ದು, ಇದೀಗ ಆ ವಿಕೃತಿ ಮನಸ್ಸಿನ ವ್ಯಕ್ತಿಯ ವಿರುದ್ಧ ನ್ಯಾಯಾಲಯಕ್ಕೆ 638 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಅ. 11ರಂದು ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿನ ನಡೆದ ಟ್ಯೂಷನ್‌ಗೆ ಹೋಗಿದ್ದ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಟ್ಯೂಷನ್‌ನ ಮೇಲ್ವಿಚಾರಕ ಕಾಂತರಾಜುವನ್ನು ನೇಣಿಗೆ ಹಾಕಬೇಕೆಂದು ರಾಜ್ಯಾದ್ಯಂತ ಆಕ್ರೋಶದ ನುಡಿಗಳು ಕೇಳಿ ಬಂದಿದ್ದವು. ಇದಲ್ಲದೇ ತಮ್ಮ ಮಗಳನ್ನು ಕಳೆದು ಕೊಂಡ ಹೆತ್ತವರು ಸಹ ಕಾಮುಕ ಕಾಂತರಾಜುಗೆ ಕಠಿಣ ಶಿಕ್ಷೆ ನೀಡಿ, ಮುಂದೆ ಈ ರೀತಿ ಯೋಚನೆ ಮಾಡುವವರಿಗೆ ಭಯವಾಗಬೇಕು ಹಾಗೆ ಮಾಡಬೇಕೆಂದು ಕಣ್ಣೀರು ಹಾಕುತ್ತಲೇ ಆಕ್ರೋಶದ ನುಡಿಗಳನ್ನು ಹೇಳಿದ್ದರು.
Advertisement
Advertisement
ಇದೀಗ ಆರೋಪಿ ಕಾಂತರಾಜುಗೆ ನ್ಯಾಯಾಲಯದಲ್ಲಿ (Court) ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಪೊಲೀಸರು ಇದೀಗ ತಮ್ಮ ಅಂತಿಮ ಕರ್ತವ್ಯವನ್ನು ಮಾಡಿದ್ದಾರೆ. ಈ ಪ್ರಕರಣ ಜರುಗಿ ಇದೀಗ 2 ವಾರದಲ್ಲೇ ಆರೋಪಿ ಕಾಂತರಾಜು ವಿರುದ್ಧ 638 ಪುಟಗಳ ಚಾರ್ಜ್ ಶೀಟ್‌ನ್ನು ಮಂಡ್ಯ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್‌ನಲ್ಲಿ ಪ್ರಕರಣ ಕುರಿತು ಹಾಗೂ ಕಾಂತರಾಜುವಿನ ಬಗ್ಗೆ ಇಂಚಿಂಚು ಮಾಹಿತಿಯನ್ನು ಉಲ್ಲೇಖ ಮಾಡಲಾಗಿದೆ.
Advertisement
ಮಳವಳ್ಳಿ ಡಿವೈಎಸ್‌ಪಿ ನವೀನ್‌ಕುಮಾರ್ ನೇತೃತ್ವದ ತಂಡ ತನಿಖೆ ನಡೆಸಿ ಈ ದೋಷಾರೋಪಣ ಪಟ್ಟಿಯನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಕಡಿಮೆ ದಿನದ ಅವಧಿಯಲ್ಲಿ ಆರೋಪಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ 638 ಪುಟದ ಚಾರ್ಜ್ ಶೀಟ್ ಸಲ್ಲಿಸಿರುವ ತನಿಖಾ ತಂಡವನ್ನು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಶ್ಲಾಘಿಸಿ 1 ಲಕ್ಷ ನಗದು ಬಹುಮಾನವನ್ನು ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಮುಸ್ಲಿಮರನ್ನು ಯಾವ ಪಕ್ಷದಲ್ಲೂ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ – ಸಿ.ಎಂ ಇಬ್ರಾಹಿಂ
Advertisement
ಒಟ್ಟಾರೆ 10 ವರ್ಷದ ಬಾಲಕಿಯ ಮೇಲೆ ತನ್ನ ಕೀಚಕ ತನದ ಕಾಮುಕ ದೃಷ್ಟಿಯನ್ನು ಬೀರಿ ಅಮಾನುಷವಾಗಿ ಕೊಲೆ ಮಾಡಿದ ಕಾಮುಕ ಕಾಂತರಾಜು ವಿರುದ್ಧ ಪೊಲೀಸರು 638 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಈ ಕಾಮುಕನಿಗೆ ನ್ಯಾಯಾಲಯ ಯಾವ ಶಿಕ್ಷೆ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಅಹಿತಕರ ಘಟನೆ ಮರುಕಳಿಸಿರುವುದಕ್ಕೆ ಮುಸ್ಲಿಂ ಗೂಂಡಾಗಳು ಕಾರಣ: ರೇಣುಕಾಚಾರ್ಯ