ಕಳೆದ ವರ್ಷ ‘ಮಾರಕಾಸ್ತ್ರ’ (Marakastra) ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆಕಂಡು ಪ್ರಶಂಸೆ ಗಳಿಸಿತ್ತು. ಈಗ ಸಿನಿಮಾ ನೋಡದೆ ಇರುವವರಿಗೆ ಸುವರ್ಣಾವಕಾಶ ಸಿಕ್ಕಿದೆ. ಅಂದರೆ ಇದು ಗೂಗಲ್ ಕ್ರೋಮ್‌ನಲ್ಲಿ ಸಿಗುವ ‘www.ottplayer.in’ ವೆಬ್‌ಸೈಟ್‌ದಲ್ಲಿ ಕೇವಲ ರೂ.99 ಪಾವತಿಸಿ ವೀಕ್ಷಿಸಬಹುದಾಗಿದೆ. ಈ ಮೂಲಕ ಒಟಿಟಿಯಲ್ಲಿ ‘ಮಾರಕಾಸ್ತ್ರ’ ಅಬ್ಬರ ಶುರುವಾಗಿದೆ.
‘www.ottplayer.in’ಗೆ ಒಂದು ಬಾರಿ ಪಾವಿತಿಸಿದ ಮೇಲೆ 10 ಗಂಟೆಗಳ ಅವಧಿಯಲ್ಲಿ ಮೂರು ಬಾರಿ ಮಾತ್ರ ನೋಡಬಹುದು. ಮತ್ತೆ ನೋಡಬಯಸುವವರು ಮರುಪಾವತಿ ಮಾಡಬೇಕಾಗುತ್ತದೆ. ದೇಶದ ಯಾವುದೇ ಭಾಗದಲ್ಲಿಯಾದರೂ ಇಂಟರ್‌ನೆಟ್ ಮುಖಾಂತರ ಇದರ ಲಿಂಕ್‌ದಲ್ಲಿ ‘ಮಾರಕಾಸ್ತ್ರ’ ಸಿನಿಮಾ ನೋಡಬಹುದು. ಇದನ್ನೂ ಓದಿ:ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ‘ಹರಿ ಹರ ವೀರ ಮಲ್ಲು’ ಫಸ್ಟ್ ಸಾಂಗ್ ರಿಲೀಸ್
Advertisement
ಶ್ರಾವ್ಯ ಕಂಬೈನ್ಸ್ ಲಾಂಛನದಲ್ಲಿ ಕೋಮಲ ನಟರಾಜ್ ನಿರ್ಮಾಣ ಮಾಡಿದ್ದಾರೆ. ಗುರುಮೂರ್ತಿ ಸುನಾಮಿ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ದೇಶದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕುವ ಶಕ್ತಿ ಪತ್ರಕರ್ತರ ಲೇಖನಿಗಿರುತ್ತದೆ. ಕೆಟ್ಟದ್ದನ್ನು ಕಂಡರೆ ಸಿಡಿದೇಳುವ ಅಸ್ತ್ರವೇ ಶೀರ್ಷಿಕೆ ಅಂತ ಕರೆಯಲಾಗುತ್ತದೆ. ಇದೇ ವಿಷಯದ ಮೇಲೆ ಚಿತ್ರವು ಸಾಗುತ್ತದೆ.
Advertisement
Advertisement
ನಾಯಕ ಆನಂದ್ ಆರ್ಯ, ಮತ್ತೊಂದು ಪ್ರಮುಖ ಪಾತ್ರಗಳಲ್ಲಿ ಮಾಲಾಶ್ರೀ (Malashree) ಮತ್ತು ಹರ್ಷಿಕಾ ಪೂಣಚ್ಚ ನಟಿಸಿದ್ದಾರೆ. ಇವರೊಂದಿಗೆ ಅಯ್ಯಪ್ಪ ಶರ್ಮ, ಮೈಕೋ ನಾಗರಾಜ್, ಉಗ್ರಂ ಮಂಜು, ಭರತ್ ಸಿಂಗ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಮಿರಾಕಲ್ ಮಂಜು ಸಾಹಿತ್ಯ ಮತ್ತು ಸಂಗೀತ, ಆರ್.ಕೆ. ಶಿವಕುಮಾರ್ ಛಾಯಾಗ್ರಹಣ ಇರಲಿದೆ.