ತನ್ನೊಂದಿಗೆ ಸಹಜೀವನ ನಡೆಸುತ್ತಿರುವ ನಟ ಅರ್ಜುನ್ ಕಪೂರ್ ಅವರ ಅರೆಬೆತ್ತಲೆ ಫೋಟೋ (Private Photo) ಹಂಚಿಕೊಂಡು ಸಾಕಷ್ಟು ಟ್ರೋಲ್ ಆಗಿದ್ದರು ನಟಿ ಮಲೈಕಾ ಅರೋರಾ (Malaika Arora). ಅರ್ಜುನ್ ಕಪೂರ್ ತನ್ನ ಖಾಸಗಿ ಭಾಗವನ್ನು ದಿಂಬಿನಿಂದ ಮುಚ್ಚಿಕೊಂಡಿದ್ದ ಫೋಟೋ ಅದಾಗಿತ್ತು. ಇಂತಹ ಫೋಟೋ ಹಂಚಿಕೊಳ್ಳುವ ಹಿಂದಿನ ಉದ್ದೇಶವೇನು ಎಂದು ಅನೇಕರು ಮಲೈಕಾಗೆ ಪ್ರಶ್ನೆ ಮಾಡಿದ್ದರು. ಸಾಕಷ್ಟು ನೆಗೆಟಿವ್ ಟೀಕೆಗಳು ವ್ಯಕ್ತವಾಗಿದ್ದವು.
Advertisement
ನೆಗೆಟಿವ್ ಕಾಮೆಂಟ್ ಗಳು ಹೆಚ್ಚಾಗುತ್ತಿದ್ದಂತೆಯೇ ಸ್ವತಃ ಅರ್ಜುನ್ ಕಪೂರ್ ಅವರೇ ಅಖಾಡಕ್ಕೆ ಇಳಿದಿದ್ದರು. ಮೌನವಾಗಿ ಸಂಭ್ರಮಿಸಿ. ಶಾಂತಿ ಕಾಪಾಡಿಕೊಳ್ಳಿ ಎನ್ನುವಂತೆ ಅವರು ಕಾಮೆಂಟ್ (Comment) ಮಾಡಿದ್ದರು. ಪರೋಕ್ಷವಾಗಿ ಅವರು ಟ್ರೋಲ್ ಮಾಡುತ್ತಿರುವವರಿಗೆ ಟಾಂಗ್ ಕೊಟ್ಟಿದ್ದರು. ಈ ಮೂಲಕ ಮಲೈಕಾ ಅರೋರಾ ಪರವಾಗಿ ನಿಂತುಕೊಂಡಿದ್ದರು. ಆದರೂ, ನೆಗೆಟಿವ್ ಕಾಮೆಂಟ್ ಗಳು ನಿಂತಿಲ್ಲ. ಟ್ರೋಲ್ ಮಾಡುವವರ ವಿರುದ್ಧ ಗರಂ ಆಗಿದ್ದಾರೆ.
Advertisement
Advertisement
ಈ ರೀತಿಯ ಫೋಟೋಗಳನ್ನು ಹಂಚಿಕೊಳ್ಳುವುದು ಮಲೈಕಾಗೆ ಹೊಸದೇನೂ ಅಲ್ಲ. ಆಗಾಗ ತಮ್ಮ ಗ್ಲ್ಯಾಮರಸ್ ಫೋಟೋ ಹಂಚಿಕೊಳ್ಳುವ ಮೂಲಕ ನಟಿ ಸದ್ದು ಮಾಡ್ತಿರುತ್ತಾರೆ. ಇದೀಗ ಗೆಳೆಯ ಅರ್ಜುನ್ ಕಪೂರ್ ಅವರ ಖಾಸಗಿ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಈ ಫೋಟೋ ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ಇದನ್ನೂ ಓದಿ:ರಾಜಕಾರಣ ಬದಿಗಿಟ್ಟು ಪುತ್ರನ ಮದುವೆಗೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದ ಸುಮಲತಾ
Advertisement
ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ಜೋಡಿ ಅಂದರೆ ಅರ್ಜುನ್- ಮಲೈಕಾ ಅರೋರಾ. ಸಿನಿಮಾಗಿಂತ ಖಾಸಗಿ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಮಲೈಕಾ ಮಾಡಿದ ಒಂದು ಕೆಲಸದಿಂದ ಅರ್ಜುನ್ ಕಪೂರ್ (Arjun Kapoor) ಸಖತ್ ಟ್ರೋಲ್ (Troll) ಆಗುತ್ತಿದ್ದಾರೆ.
ಮಲೈಕಾ- ಅರ್ಜುನ್ ಕಪೂರ್ ರಿಲೇಷನ್ಶಿಪ್ ಇದೀಗ ಗುಟ್ಟಾಗಿ ಏನು ಉಳಿದಿಲ್ಲ. ಅರ್ಬಾಜ್ ಖಾನ್ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಮಲೈಕಾ, ಅರ್ಜುನ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದಾರೆ. ಲಿವಿಂಗ್ ರಿಲೇಷನ್ಶಿಪ್ನಲ್ಲೂ ಇದ್ದಾರೆ. ಆಗಾಗ ಇಬ್ಬರೂ ವಿದೇಶಕ್ಕೆ ಹೋಗಿ ಬರುತ್ತಾರೆ. ಅಷ್ಟರ ಮಟ್ಟಿಗೆ ಇಬ್ಬರ ಬಂಧ ಗಟ್ಟಿಯಾಗಿದೆ.
ಇದೀಗ ‘ನನ್ನ ಲೇಝಿ ಬಾಯ್’ ಎಂದು ಅರ್ಜುನ್ ಖಾಸಗಿ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಅರ್ಜುನ್ ಕಪೂರ್ ಮೈ ಮೇಲೆ ಬಟ್ಟೆ ಇಲ್ಲದೆ ಕಪ್ಪು ಬಣ್ಣದ ತಲೆದಿಂಬು ಇಟ್ಟುಕೊಂಡು ಕ್ಲಿಕ್ಕಿಸಿದ ಫೋಟೋವನ್ನು ಮಲೈಕಾ ಶೇರ್ ಮಾಡಿದ್ದಾರೆ. ಈ ಫೋಟೋ ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ನಟನ ಲುಕ್ಗೆ ನಾಚಿಕೆಗೇಡಿನ ಸಂಗತಿ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.