ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ತಂದೆ ಅನಿಲ್ ಅರೋರಾ (Anil Arora) ಆತ್ಯಹತ್ಯೆ ಈ ಹಿನ್ನೆಲೆಯಲ್ಲಿ ಮಲೈಕಾ ಅರೋರಾ ಎಕ್ಸ್ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ (Arjun Kapoor) ಮುಂಬೈ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.
ನಟಿ ಮಲೈಕಾ ಅರೋರಾ ತಂದೆ ಅನಿಲ್ ಅರೋರಾ ಇಂದು (ಸೆ.11) ಬೆಳಗ್ಗೆ ಆತ್ಯಹತ್ಯೆಗೆ ಶರಣಾದರು. ಮುಂಬೈನಲ್ಲಿರುವ (Mumbai) ಬಾಂದ್ರಾದ ತಮ್ಮ ಮನೆಯ ಟೆರೇಸ್‌ನಿಂದ ಹಾರಿ ಆತ್ಯಹತ್ಯೆ ಮಾಡಿಕೊಂಡರು.ಇದನ್ನೂ ಓದಿ: ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ
#WATCH | Mumbai | Legendary writer Salim Khan along with his son & actor Sohail Khan and actor Arjun Kapoor arrive at the residence of Malaika Arora’s mother following demise of Anil Arora pic.twitter.com/kuTfuKfk7K
— ANI (@ANI) September 11, 2024
ತಮ್ಮ ಮನೆಯ 7ನೇ ಮಹಡಿಯಿಂದ ಬಿದ್ದು ಮಲೈಕಾ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಸಾವಿನ ದುಃಖದಲ್ಲಿದ್ದ ಮಲೈಕಾಗೆ ಮಾಜಿ ಪತಿ ಅರ್ಬಾಜ್ ಖಾನ್ (Arbaaz Khan) ಸಂತಾಪ ಸೂಚಿಸಿದರು. ಬಾಲಿವುಡ್‌ನ ಹಲವು ನಟ-ನಟಿಯರು ಭೇಟಿ ನೀಡಿದ್ದು, ಕರೀನಾ ಕಪೂರ್ ಖಾನ್, ಅನನ್ಯಾ ಪಾಂಡೆ, ಸೈಫ್ ಅಲಿ ಖಾನ್ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ಜೊತೆಗೆ ನಟಿಯ ಎಕ್ಸ್ ಬಾಯಫ್ರೆಂಡ್ ಅರ್ಜುನ್ ಕಪೂರ್ ಕೂಡ ಭೇಟಿ ನೀಡಿದ್ದರು.ಇದನ್ನೂ ಓದಿ: ಡಿಸೆಂಬರ್‌ನಲ್ಲಿ ‘ರಾವಣ’ನಾಗಿ ಘರ್ಜಿಸಲಿದ್ದಾರೆ ಯಶ್
ಇತ್ತೀಚಿಗಷ್ಟೇ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಅವರ ಮಧ್ಯೆ ಬ್ರೇಕಪ್ ಆಗಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ರೂಮರ್ಸ್ ಹಬ್ಬಿಕೊಂಡಿತ್ತು. ಬ್ರೇಕಪ್ ರೂಮರ್ ನಡುವೆಯೇ ಮಲೈಕಾ ಅರೋರಾ ತಂದೆಯ ಸಾವಿನ ಸುದ್ದಿ ತಿಳಿದು, ಮುಂಬೈ ನಿವಾಸಕ್ಕೆ ಎಕ್ಸ್ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ.