ಅರ್ಜುನ್ ಜೊತೆಗಿನ ಸಂಬಂಧದ ಬಗ್ಗೆ ಅಧಿಕೃತವಾಗಿ ತಿಳಿಸಿದ ಮಲೈಕಾ

Public TV
1 Min Read
malaika arora

ಮುಂಬೈ: ಬಾಲಿವುಡ್ ಬೆಡಗಿ ಮಲೈಕಾ ಅರೋರಾ ನಟ ಅರ್ಜುನ್ ಕಪೂರ್ ಅವರ ಜೊತೆಗಿನ ಸಂಬಂಧದ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

ನಟ ಅರ್ಜುನ್ ಕಪೂರ್ ಬುಧವಾರ ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಮಲೈಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅರ್ಜುನ್ ಜೊತೆಗಿರುವ ರೊಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡು ಹುಟ್ಟುಹಬ್ಬದ ಶುಭ ಕೋರಿದ್ದಾರೆ.

Malaika Arjun

ಮಲೈಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅರ್ಜುನ್ ಜೊತೆಗಿರುವ ಫೋಟೋ ಹಾಕಿ ಅದಕ್ಕೆ, “ಹುಟ್ಟುಹಬ್ಬದ ಶುಭಾಶಯಗಳು ನನ್ನ ಅದ್ಭುತ ಅರ್ಜುನ್ ಕಪೂರ್. ನಿನಗೆ ಯಾವಾಗಲೂ ಪ್ರೀತಿ ಹಾಗೂ ಖುಷಿ ಸಿಗಲಿ” ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.

 

View this post on Instagram

 

Happy bday my crazy,insanely funny n amazing @arjunkapoor … love n happiness always

A post shared by Malaika Arora (@malaikaaroraofficial) on

ಅರ್ಜುನ್ ಕಪೂರ್ ತಮ್ಮ ಹುಟ್ಟುಹಬ್ಬವನ್ನು ಮಲೈಕಾ ಜೊತೆ ನ್ಯೂಯಾರ್ಕ್ ನಲ್ಲಿ ಆಚರಿಸಿದ್ದಾರೆ. ಹುಟ್ಟುಹಬ್ಬ ಆಚರಿಸಲೆಂದೇ ಇಬ್ಬರು ಸೋಮವಾರ ರಾತ್ರಿ ನ್ಯೂಯಾರ್ಕ್‍ಗೆ ತಲುಪಿದ್ದರು. ಮಲೈಕಾ ನ್ಯೂಯಾರ್ಕ್ ನಲ್ಲಿ ಕಳೆದ ಕೆಲವು ಕ್ಷಣಗಳ ಫೋಟೋವನ್ನು ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

malaika arora 1

ಕೆಲವು ದಿನಗಳಿಂದ ಅರ್ಜುನ್ ಕಪೂರ್ ಮತ್ತು 45 ವರ್ಷದ ಮಲೈಕಾ ಅರೋರಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಕಳೆದ ಎರಡು-ಮೂರು ವರ್ಷಗಳಿಂದ ಇಬ್ಬರ ಸಂಬಂಧದ ಬಗ್ಗೆ ಹಲವು ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತಿತ್ತು. ಮಾಧ್ಯಮಗಳ ಮುಂದೆ ಬಂದು ನಾವಿಬ್ಬರು ಒಳ್ಳೆ ಸ್ನೇಹಿತರು ಎಂದು ಕೂಡ ಹೇಳಿಕೊಂಡಿದ್ದರು. ಮಲೈಕಾಗೆ ಈಗಾಗಲೇ ಮದುವೆಯಾಗಿದ್ದು ತಮ್ಮ ಪತಿ ಅರ್ಬಾಜ್ ಖಾನ್ ಗೆ ವಿಚ್ಛೇಧನ ನೀಡಿ ತಮ್ಮ 16 ವರ್ಷದ ಮಗನೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *