ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಹಾಟ್ ಬಿಕಿನಿ ಫೋಟೋಗೆ ಕಾಮೆಂಟ್ ಮಾಡಿದ ಅರ್ಜುನ್ ಕಪೂರ್ಗೆ ಚೋರ್ ಎಂದು ಕರೆದಿದ್ದಾರೆ.
ಬಾಲಿವುಡ್ ಕ್ಯೂಟ್ ಜೋಡಿಗಳಲ್ಲಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಜೋಡಿ ಕೂಡ ಒಂದು. ರಿಲೇಶನ್ ಶಿಪ್ ವಿಚಾರಕ್ಕೆ ಬಂದರೆ ಮಲೈಕಾ ಮತ್ತು ಅರ್ಜುನ್ ಇಬ್ಬರು ಪರಸ್ಪರ ಎಂದಿಗೂ ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ. ಹಲವಾರು ಸಂಕಷ್ಟದ ಸಮಯದಲ್ಲಿ ಇಬ್ಬರು ಒಬ್ಬರಿಗೊಬ್ಬರು ಪರಸ್ಪರ ಸೋಶಿಯಲ್ ಮೀಡಿಯಾದಲ್ಲಿ ಬೆಂಬಲಿಸುತ್ತಾ ಬಂದಿದ್ದಾರೆ.
ಸದ್ಯ ಇತ್ತೀಚೆಗಷ್ಟೇ ಮಲೈಕಾ ಆರೆಂಜ್ ಕಲರ್ ಬ್ರಾ ಮತ್ತು ಶಾರ್ಟ್ಸ್ ತೊಟ್ಟಿರುವ ಸುಂದರವಾದ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಮಧ್ಯೆ ಎಲ್ಲರ ಗಮನ ಸೆಳೆದಿದ್ದು, ಅರ್ಜುನ್ ಕಪೂರ್ ಮಾಡಿದ್ದ ಕಾಮೆಂಟ್. ಇದನ್ನೂ ಓದಿ: ಸಖತ್ ಹಾಟ್ ಫೋಟೋಗಳಿಂದ ಮೋಡಿ ಮಾಡಿದ ರಾಯ್ ಲಕ್ಷ್ಮೀ
ಹೌದು, ಮಲೈಕಾ ಅರೋರಾ ಆರೆಂಜ್ ಕಲರ್ ಬ್ರಾ ಮತ್ತು ಶಾರ್ಟ್ಸ್ ತೊಟ್ಟು ಸ್ವೀಮಿಂಗ್ ಪೂಲ್ನಲ್ಲಿ ಫೋಟೋಗೆ ಸಖತ್ ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ. ಇದರ ಜೊತೆಗೆ ಕ್ಯಾಪ್ಷನ್ನಲ್ಲಿ ಸನ್ ಡೇ ಸನ್ನಿ ಸೈಡ್ ಅಪ್ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಈ ಫೋಟೋಗೆ ಅರ್ಜುನ್ ಕಪೂರ್ ಫುಲ್ ಫಿದಾ ಆಗಿದ್ದು, ನೈಸ್ ಕ್ಯಾಪ್ಷನ್ ಎಂದು ರಿಯಾಕ್ಟ್ ಮಾಡಿದ್ದಾರೆ. ಇದಕ್ಕೆ ಮಲೈಕಾ, ಅರ್ಜುನ್ ಕಪೂರ್ ಅವರನ್ನು ಕ್ಯಾಪ್ಷನ್ ಚೋರ್ ಎಂದು ಕರೆದಿದ್ದಾರೆ.
View this post on Instagram
ಮಲೈಕಾ ಹಾಗೂ ಅರ್ಜುನ್ ಕಪೂರ್ ಇಬ್ಬರಿಗೂ ಬಹಳಷ್ಟು ವಯಸ್ಸಿನ ಅಂತರವಿದೆ ಎಂದು ಅನೇಕ ಮಂದಿ ಟೀಕೆ ವ್ಯಕ್ತಪಡಿಸಿದರು, ಇದ್ಯಾವುದನ್ನು ಇಬ್ಬರೂ ಲೆಕ್ಕಿಸದೇ ಪ್ರೀತಿಸುತ್ತಿದ್ದಾರೆ. ಈ ಕುರಿತಂತೆ ಮಲೈಕಾ ಇತ್ತೀಚೆಗಷ್ಟೇ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ 40ರಲ್ಲಿ ಪ್ರೀತಿಸುವುದನ್ನು ಸಾಮಾನ್ಯವಾಗಿಸಿ, 30ರಲ್ಲಿ ನಿಮ್ಮ ಕನಸುಗಳನ್ನು ಬೆನ್ನಟ್ಟುವುದನ್ನು ಸಾಮಾನ್ಯಗೊಳಿಸಿ. 50ರಲ್ಲಿ ನಿಮ್ಮ ಉದ್ದೇಶವನ್ನು ಕಂಡುಕೊಳ್ಳಿ. 25ಕ್ಕೆ ಪ್ರೀತಿಯ ಜೀವನ ಕೊನೆಗೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಇದನ್ನೂ ಓದಿ: ಹೊಸ ಮೆಟ್ರೋ ನಿಲ್ದಾಣಕ್ಕೆ ಅಪ್ಪು ಹೆಸರಿಡುವಂತೆ ಒತ್ತಾಯ