– ಸೆಲ್ಫಿ ಕ್ರೇಜ್ ಗೂ ಮುನ್ನ ಎಚ್ಚರ
ಮಡಿಕೇರಿ: ಮಹಾಮಳೆಯಿಂದ ಕೊಡಗಿನ ಚಿತ್ರಣವೇ ಸಂಪೂರ್ಣ ಬದಲಾಗಿದೆ. ದುರಂತ ಸ್ಥಳಗಳು ಇದೀಗ ಟೂರಿಸ್ಟ್ ಸ್ಪಾಟ್‍ಗಳಾಗಿದ್ದು, ರಾಜ್ಯದ ವಿವಿಧ ಮೂಲೆಗಳಿಂದ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ.
ಕೊಡಗಿನಲ್ಲಿ ಮಳೆ ಇಳಿಮುಖವಾಗುತ್ತಿದ್ದಂತೆ ಜಿಲ್ಲೆಯ ಪರಿಸ್ಥಿತಿ ಹೇಗಾಗಿರಬಹುದು ಎಂಬ ಕುತೂಹಲ ರಾಜ್ಯದ ಜನರನ್ನು ಕಾಡುತ್ತಿದೆ. ಕೇವಲ ಕೊಡಗು ಮಾತ್ರವಲ್ಲದೆ, ಇದೀಗ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಹದಿಂದ ಕುಸಿದಿರುವ ಮಕ್ಕಂದೂರು ತಾಣವನ್ನು ವೀಕ್ಷಿಸಲು ಜನರು ಬರುತ್ತಿದ್ದಾರೆ. ಮಕ್ಕಂದೂರಿನಲ್ಲಿ ಮಳೆಗೆ ರಸ್ತೆಯ ಸಮೇತ ಪ್ರಪಾತಕ್ಕೆ ಜಾರಿದೆ. ಕೊಚ್ಚಿಕೊಂಡು ಹೋದ ರಸ್ತೆಯನ್ನು ನೋಡಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಅಷ್ಟೇ ಅಲ್ಲದೆ ಸೆಲ್ಫಿ ತೆಗೆದುಕೊಂಡು ಖುಷಿ ಪಡುತ್ತಿದ್ದಾರೆ.
Advertisement
Advertisement
ಆಗಸ್ಟ್ 31ರ ತನಕ ಯಾರು ಸಹ ಮಡಿಕೇರಿ ಪ್ರವಾಸಿ ತಾಣಗಳ ವೀಕ್ಷಣೆಗೆ ಬರಬೇಡಿ ಅಂತ ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಆದರೂ ಕೂಡ ಜನರು ಮಾತ್ರ ಕೇಳುತ್ತಿರಲಿಲ್ಲ. ಪೊಲೀಸರ ಕಣ್ಣು ತಪ್ಪಿಸಿ ಈ ದುರಂತ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಅಷ್ಟೆ ಅಲ್ಲದೆ ಇವರ ಸೆಲ್ಫಿ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಅಂದರೆ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಅಂತ ಪ್ರವಾಸಿಗರೊಬ್ಬರು ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv