ಮನೆಯಲ್ಲಿ ಏನೂ ಸಿಹಿ ಪದಾರ್ಥಗಳು ಇಲ್ಲದೇ ಹೋದಾಗ, ಫಟಾಫಟ್ ಅಂತ ಏನಾದರೂ ಸಿಹಿ ತಯಾರಿಸಬೇಕಾಗಿ ಬಂದಾಗ ನಾವಿಂದು ಹೇಳಿಕೊಡುತ್ತಿರುವ ರೆಸಿಪಿ ಮಾಡಲು ಪರ್ಫೆಕ್ಟ್ ಆಗಿದೆ. ಮಕ್ಕಳು ಮನೆಯಲ್ಲಿದ್ದಾಗ ಈ ಪೀನಟ್ ಬಟರ್ನ ಮಿಠಾಯಿ ಮಾಡೋದು ಖಡಿತಾ ಮರೆಯಬೇಡಿ. ಆರೋಗ್ಯಕರ ಮಿಠಾಯಿ ರೆಸಿಪಿಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ಹಾಗಿದ್ದರೆ ಪೀನಟರ್ ಬಟರ್ನ ಮಿಠಾಯಿ ಹೇಗೆ ಮಾಡೋದು ಎಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಪೀನಟ ಬಟರ್ – 1 ಕಪ್
ತೆಂಗಿನ ಎಣ್ಣೆ – ಅರ್ಧ ಕಪ್
ಮೇಪಲ್ ಸಿರಪ್ – ಅರ್ಧ ಕಪ್
ವೆನಿಲ್ಲಾ ಸಾರ – ಕಾಲು ಟೀಸ್ಪೂನ್
ಒರಟಾಗಿ ಪುಡಿ ಮಾಡಿದ ನೆಲ ಕಡಲೆ – ಕಾಲು ಕಪ್ ಇದನ್ನೂ ಓದಿ: ಆರೋಗ್ಯಕರ ಬಾದಾಮಿ, ಖರ್ಜೂರ ಹಾಲು
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್ನಲ್ಲಿ ಮೇಲೆ ತಿಳಿಸಲಾದ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ಒಂದು ಬಟ್ಟಲಿಗೆ ಬಟರ್ ಪೇಪರ್ ಅನ್ನು ಜೋಡಿಸಿ, ಅದರ ಮೇಲೆ ಈ ಮಿಶ್ರಣವನ್ನು ಸುರಿಯಿರಿ.
* ಬಟ್ಟಲನ್ನು ಫ್ರಿಜ್ನಲ್ಲಿ ಇಟ್ಟು, ಸುಮಾರು 1 ಗಂಟೆ ಗಟ್ಟಿಯಾಗಲು ಬಿಡಿ.
* ಈಗ ಬಟ್ಟಲನ್ನು ಹೊರ ತೆಗೆದು, ಮಿಠಾಯಿಯನ್ನು ಬಟ್ಟಲಿನಿಂದ ಬೇರ್ಪಡಿಸಿ.
* ಸುಮಾರು 5 ನಿಮಿಷ ರೂಮ್ ಟೆಂಪ್ರೇಚರ್ನಲ್ಲಿ ಮಿಠಾಯಿಯನ್ನು ಸ್ವಲ್ಪ ಮೃದುವಾಗಲು ಬಿಟ್ಟು, ಬಳಿಕ ಚಾಕು ಸಹಾಯದಿಂದ ಚೌಕಾಕಾರವಾಗಿ ಕತ್ತರಿಸಿಕೊಳ್ಳಿ.
* ಇದೀಗ ಪೀನಟ್ ಬಟರ್ ಮಿಠಾಯಿ ತಯಾರಾಗಿದ್ದು, ಸವಿಯಲು ಮಕ್ಕಳಿಗೆ ನೀಡಿ.
* ಉಳಿದ ಮಿಠಾಯಿಯನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ, ಫ್ರಿಜ್ನಲ್ಲಿ ಇಡಿ. ಹಾಗೂ ಬೇಕೆನಿಸಿದಾಗ ಸವಿಯಿರಿ. ಏಕೆಂದರೆ ರೂಮ್ ಟೆಂಪ್ರೇಚರ್ನಲ್ಲಿ ಮಿಠಾಯಿ ಮೃದುವಾಗುತ್ತದೆ. ಇದನ್ನೂ ಓದಿ: ನಾಲ್ಕೇ ಪದಾರ್ಥ ಸಾಕು – ರುಚಿಕರವಾದ ತೆಂಗಿನಕಾಯಿ ಬಿಸ್ಕಿಟ್ ಹೀಗೆ ಮಾಡಿ
Advertisement
Web Stories