ಕೆಲವೊಮ್ಮೆ ಅಡುಗೆ ಮನೆಯಲ್ಲಿ ಸಾಮಾಗ್ರಿಗಳು ಖಾಲಿ ಖಾಲಿ ಎನಿಸಿದರೆ ಅಂದು ಉಪಾಹಾರ ಅಥವಾ ಸ್ನ್ಯಾಕ್ಸ್ ಏನು ಮಾಡೋದು ಎಂಬ ಗೊಂದಲ ನಿಮ್ಮನ್ನು ಕಾಡುತ್ತದೆ. ಅಡುಗೆ ಮನೆಯಲ್ಲಿ ಮೊಟ್ಟೆ ಹಾಗೂ ಬ್ರೆಡ್ ಇದ್ದರೆ ಈ ರೆಸಿಪಿಯನ್ನು ನೀವೊಮ್ಮೆ ಖಂಡಿತಾ ಮಾಡಬೇಕು. ನಾವಿಲ್ಲಿ ಕೇವಲ 5 ಪದಾರ್ಥಗಳಿಂದ ಎಗ್ ಬೋಟ್ (Egg Boats) ಮಾಡೋದು ಹೇಗೆ ಎಂದು ಹೇಳಿಕೊಡುತ್ತಿದ್ದೇವೆ. ನಿಮ್ಮ ಬಳಿ ಇನ್ನೂ ಹೆಚ್ಚಿನ ತರಕಾರಿ ಅಥವಾ ಮಸಾಲೆ ಪದಾರ್ಥಗಳಿದ್ದರೆ ಈ ರೆಸಿಪಿಯನ್ನು ಇನ್ನೂ ಹೆಚ್ಚು ರುಚಿಕರವನ್ನಾಗಿ ಮಾಡಬಹುದು. ಎಗ್ ಬೋಟ್ ಮಾಡುವುದು ಹೇಗೆಂದು ಇಲ್ಲಿ ತಿಳಿಸಲಾಗಿದೆ.
Advertisement
ಬೇಕಾಗುವ ಪದಾರ್ಥಗಳು:
ಮೊಟ್ಟೆ – 5
ಹೆಚ್ಚಿದ ಈರುಳ್ಳಿ – ಅರ್ಧ
ಕ್ಯಾಪ್ಸಿಕಮ್ – ಅರ್ಧ (ಹಳದಿ, ಹಸಿರು, ಕೆಂಪು ಬಣ್ಣದ ಕ್ಯಾಪ್ಸಿಕಮ್ ಬಳಸಬಹುದು)
ಚೀಸ್ – 1 ಕಪ್
ಲೋಫ್ ಫ್ರೆಂಚ್ ಬ್ರೆಡ್ – 1 (ಕತ್ತರಿಸದ ಸಾಮಾನ್ಯ ಬ್ರೆಡ್ ಕೂಡಾ ಬಳಸಬಹುದು) ಇದನ್ನೂ ಓದಿ: ಫೇಮಸ್ ಸ್ಟ್ರೀಟ್ ಫುಡ್ – ಆಲೂಗಡ್ಡೆ ಟ್ವಿಸ್ಟರ್ ಸಿಂಪಲ್ ಆಗಿ ಮನೆಯಲ್ಲೇ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಮೊಟ್ಟೆಗಳನ್ನು ಒಡೆದು ಒಂದು ಬೌಲ್‌ಗೆ ಹಾಕಿಕೊಳ್ಳಿ. ಅದನ್ನು ಚೆನ್ನಾಗಿ ವಿಸ್ಕ್ ಮಾಡಿ.
* ಮೊಟ್ಟೆಗೆ ಈರುಳ್ಳಿ, ಕ್ಯಾಪ್ಸಿಕಮ್ ಸೇರಿಸಿ ಮಿಶ್ರಣ ಮಾಡಿ.
* ರುಚಿಗೆ ತಕ್ಕಂತೆ ಉಪ್ಪು ಹಾಗೂ ಕರಿಮೆಣಸಿನಪುಡಿ ಸೇರಿಸಿ ಮಿಶ್ರಣ ಮಾಡಿ.
* ಈಗ ಬ್ರೆಡ್ ತೆಗೆದುಕೊಂಡು, ಅದರ ಮಧ್ಯಭಾಗವನ್ನು ಸ್ವಲ್ಪ ಟೊಳ್ಳು ಮಾಡಿಕೊಳ್ಳಿ. ಬ್ರೆಡ್‌ನ ತಳಭಾಗದಲ್ಲಿ ಎಲ್ಲಿಯೂ ತೂತು ಉಂಟಾಗದಂತೆ ಜಾಗ್ರತೆವಹಿಸಿ.
* ಈಗ ಮೊಟ್ಟೆಯ ಮಿಶ್ರಣವನ್ನು ಬ್ರೆಡ್‌ನ ಟೊಳ್ಳು ಭಾಗದಲ್ಲಿ ಸುರಿಯಿರಿ. ಅದರ ಮೇಲೆ ಚೀಸ್ ಅನ್ನು ಸಿಂಪಡಿಸಿ.
* ಓವನ್ ಅನ್ನು 350 ಡಿಗ್ರಿ ಬಿಸಿ ಮಾಡಿಕೊಂಡು, ಅದರಲ್ಲಿ ಈ ಬ್ರೆಡ್ ಅನ್ನು ಇಟ್ಟು, ಸುಮಾರು 30-40 ನಿಮಿಷಗಳ ವರೆಗೆ ಬೇಯಿಸಿಕೊಳ್ಳಿ.
* ಕೊನೆಯಲ್ಲಿ ಬ್ರೆಡ್ ಅನ್ನು ಸ್ಲೈಸ್‌ಗಳಾಗಿ ಮಾಡಿ, ಇದೀಗ ರುಚಿಕರ ಎಗ್ ಬೋಟ್ ಅನ್ನು ಸ್ನ್ಯಾಕ್ಸ್ ಅಥವಾ ಬ್ರೇಕ್‌ಫಾಸ್ಟ್ ಆಗಿ ಸವಿಯಿರಿ. ಇದನ್ನೂ ಓದಿ: 15 ನಿಮಿಷ ಸಾಕು – ಟ್ರೈ ಮಾಡಿ ಬಾಳೆಹಣ್ಣು, ಓಟ್ಸ್ ಕುಕ್ಕೀಸ್