ಸಾಂಪ್ರದಾಯಿಕ ಮೆಕ್ಸಿಕನ್ ಹಾಟ್ ಚಾಕ್ಲೇಟ್ ಹಾಲು ಮತ್ತು ಮೆಕ್ಸಿಕನ್ ಚಾಕ್ಲೇಟ್ ಬಳಸಿ ಮಾಡೋ ಬೆಚ್ಚಗಿನ ಪಾನೀಯ. ಆದರೆ ಇತ್ತೀಚಿನ ದಿನಗಳಲ್ಲಿ ಇದಕ್ಕೆ ಮಸಾಲೆ ಪದಾರ್ಥಗಳನ್ನು ಸೇರಿಸಿ ರುಚಿಗೆ ವಿಭಿನ್ನ ಟ್ವಿಸ್ಟ್ ನೀಡಲಾಗುತ್ತದೆ. ಈ ಚುಮುಚುಮು ಚಳಿಯ ಸೀಸನ್‌ನಲ್ಲಿ ಬೆಚ್ಚಗಿನ ಅನುಭವ ನೀಡುವ ಹಾಟ್ ಚಾಕ್ಲೇಟ್ ಅನ್ನು ನೀವೂ ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಹಾಲು – 500 ಎಂಎಲ್
ದಾಲ್ಚಿನ್ನಿ ಚಕ್ಕೆ – 2 ತುಂಡುಗಳು
ಡಾರ್ಕ್ ಕೋಕೋ ಪೌಡರ್ – 2 ಟೀಸ್ಪೂನ್
ವೆನಿಲ್ಲಾ ಸಾರ – ಅರ್ಧ ಟೀಸ್ಪೂನ್
ಮೆಣಸಿನ ಪುಡಿ – ಕಾಲು ಟೀಸ್ಪೂನ್
ಕಂದು ಸಕ್ಕರೆ – 2 ಟೀಸ್ಪೂನ್ ಇದನ್ನೂ ಓದಿ: ಇಮ್ಯೂನಿಟಿ ಬೂಸ್ಟಿಂಗ್ ಹೆಸರು ಬೇಳೆಯ ಸೂಪ್ ಮಾಡಿ ಸವಿಯಿರಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಹಾಲನ್ನು ಬಿಸಿಗಿಟ್ಟು, ಅದಕ್ಕೆ ದಾಲ್ಚಿನ್ನಿ ಚಕ್ಕೆಯನ್ನು ಸೇರಿಸಿ.
* ಆಗಾಗ ಕೈಯಾಡಿಸುತ್ತಾ ಸುಮಾರು 5 ನಿಮಿಷಗಳ ಕಾಲ ಬೇಯಿಸಿ.
* ಬಳಿಕ ಹಾಲನ್ನು ಸೋಸಿ, ಅದಕ್ಕೆ ಸಕ್ಕರೆ, ಕೋಕೋ ಪೌಡರ್, ವೆನಿಲ್ಲಾ ಸಾರ, ಮೆಣಸಿನ ಪುಡಿಯನ್ನು ಸೇರಿಸಿ.
* 2 ಮಗ್‌ಗಳನ್ನು ಬಳಸಿ ಹಾಲನ್ನು ನಯವಾದ ನೊರೆ ಬರುವಂತೆ ಒಂದು ಮಗ್ ನಿಂದ ಇನ್ನೊಂದು ಮಗ್‌ಗೆ 2-3 ಸುತ್ತು ಸುರಿದುಕೊಳ್ಳಿ.
* ಇದೀಗ ಟೇಸ್ಟಿ ಮೆಕ್ಸಿಕನ್ ಹಾಟ್ ಚಾಕ್ಲೇಟ್ ತಯಾರಾಗಿದ್ದು, ಚಳಿಗಾಲದಲ್ಲಿ ಆನಂದಿಸಿ. ಇದನ್ನೂ ಓದಿ: ಮಾಡರ್ನ್ ಲೈಫ್‌ಸ್ಟೈಲ್‌ಗೆ ಪೌಷ್ಟಿಕಾಂಶ ಭರಿತ ಚನಾ ಚಾಟ್