ಹೆಚ್ಚು ಎಣ್ಣೆ ಬಳಸದೇ ಮಾಡೋ ಈ ಕೋಕನಟ್ ಸಿಗಡಿ ಕುರುಕಲಾದ ಗರಿಗರಿ ಫ್ರೈ ಆಗಿದ್ದು, ಸವಿಯುವಾಗ ಸಖತ್ ಮಜ ನೀಡುತ್ತದೆ. ಹೆಚ್ಚು ಎಣ್ಣೆ ಬಳಸದೇ ನೀವು ಅಡುಗೆ ಮಾಡಲು ಬಯಸುತ್ತೀರಾದರೆ ಏರ್ ಫ್ರೈಯರ್ ಪರ್ಫೆಕ್ಟ್. ನಾವಿಂದು ಕೋಕನಟ್ ಸಿಗಡಿ ಏರ್ ಫ್ರೈಯರ್‌ನಲ್ಲಿ ತಯಾರಿಸೋದು ಹೇಗೆಂದು ಹೇಳಿಕೊಡುತ್ತಿದ್ದೇವೆ. ನೀವು ಕೂಡಾ ಈ ಗರಿಗರಿಯಾದ ಕೋಕನಟ್ ಸಿಗಡಿ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಸಿಪ್ಪೆ ಸುಲಿದು ಸ್ವಚ್ಛಗೊಳಿಸಿದ ಸಿಗಡಿ – 500 ಗ್ರಾಂ
ಮೈದಾ ಹಿಟ್ಟು – ಎರಡೂವರೆ ಟೀಸ್ಪೂನ್
ಮೊಟ್ಟೆಯ ಬಿಳಿ ಭಾಗ – ಕಾಲು ಕಪ್
ಬ್ರೆಡ್‌ಕ್ರಂಬ್ಸ್ – 1 ಕಪ್
ಒಣ ತೆಂಗಿನ ತುರಿ – ಕಾಲು ಕಪ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದಾದ ನಾನ್‌ವೆಜ್ ರೆಸಿಪಿ – ಏಷ್ಯನ್ ಜಿಂಜರ್ ಚಿಕನ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಸ್ವಚ್ಛಗೊಳಿಸಿದ ಸಿಗಡಿಯಲ್ಲಿ ಹೆಚ್ಚಿನ ನೀರಿನಂಶ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಮತ್ತೊಂದು ಬಟ್ಟಲಿನಲ್ಲಿ ಮೊಟ್ಟೆಯ ಬಿಳಿ ಭಾಗ ಹಾಕಿ ಬದಿಗಿಡಿ.
* ಇನ್ನೊಂದು ಬಟ್ಟಲಿಗೆ ಬ್ರೆಡ್ ಕ್ರಂಬ್ಸ್, ಒಣ ತೆಂಗಿನ ತುರಿ ಹಾಗೂ ಉಪ್ಪು ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಿ.
* ಈಗ ಸಿಗಡಿಯನ್ನು ಮೈದಾ ಹಿಟ್ಟಿನಲ್ಲಿ ಹಾಕಿ, ಚೆನ್ನಾಗಿ ಕೋಟ್ ಆಗುವವರೆಗೆ ಮಿಶ್ರಣ ಮಾಡಿಕೊಳ್ಳಿ.
* ಬಳಿಕ ಒಂದೊಂದೇ ಸಿಗಡಿಯನ್ನು ಮೊಟ್ಟೆಯ ಬಿಳಿ ಭಾಗವಿರುವ ಬಟ್ಟಲಿನಲ್ಲಿ ಅದ್ದಿ, ನಂತರ ತೆಂಗಿನ ತುರಿ ಮಿಶ್ರಣದಲ್ಲಿ ಕೋಟ್ ಮಾಡಿಕೊಳ್ಳಿ. ಇದೇ ರೀತಿ ಎಲ್ಲಾ ಸಿಗಡಿಯನ್ನು ತಯಾರಿಸಿ ಒಂದು ಬಟ್ಟಲಿನಲ್ಲಿ ಇಡಿ.
* ಈಗ ಏರ್ ಫ್ರೈಯರ್‌ನ ಟ್ರೇಗೆ ಕುಕಿಂಗ್ ಸ್ಪ್ರೇ ಸಿಂಪಡಿಸಿ, ಸಿಗಡಿಗಳನ್ನು ಒಂದೊಂದಾಗಿಯೆ ಅದರಲ್ಲಿ ಜೋಡಿಸಿಕೊಳ್ಳಿ. ನಂತರ ಅದರ ಮೇಲೆ ಮತ್ತೆ ಕುಕಿಂಗ್ ಸ್ಪ್ರೇ ಸಿಂಪಡಿಸಿ. (ಒಂದೇ ಬಾರಿ ಜೋಡಿಸಲು ಸಾಧ್ಯವಿಲ್ಲವೆಂದರೆ ಬ್ಯಾಚ್‌ಗಳಲ್ಲಿ ಬೇಯಿಸಿಕೊಳ್ಳಬಹುದು)
* ಸಿಗಡಿಗಳನ್ನು 400 ಡಿಗ್ರಿ ಪ್ಯಾರಾಹೀಟ್‌ನಲ್ಲಿ ಸುಮಾರು 8-10 ನಿಮಿಷಗಳ ವರೆಗೆ ಬೇಯಿಸಿಕೊಳ್ಳಿ. ಈ ಸಮಯದ ನಡುವೆ ಒಂದು ಬಾರಿ ಸಿಗಡಿಗಳನ್ನು ತಿರುವಿ ಹಾಕಿ ಬೇಯಿಸಿಕೊಳ್ಳಿ.
* ಸಿಗಡಿಗಳು ಗೋಲ್ಡನ್ ಬ್ರೌನ್ ಬಣ್ಣ ಹಾಗೂ ಗರಿಗರಿಯಾದ ಬಳಿಕ ಸವಿಯಲು ಸಿದ್ಧವಾಗುತ್ತದೆ.
* ಇದನ್ನು ಸಿಹಿ ಹಾಗೂ ಹುಳಿಯಾದ ಸಾಸ್‌ನೊಂದಿಗೆ ಬಡಿಸಿ. ಇದನ್ನೂ ಓದಿ: ಟ್ರೈ ಮಾಡಿ ಕೇರಳ ಸ್ಟೈಲ್‌ನ ಟೇಸ್ಟಿ ಸ್ಕ್ವಿಡ್ ರೋಸ್ಟ್
Advertisement
Web Stories