ಕಡಲೆ ಹಿಟ್ಟಿನ ಚಟ್ನಿ ಇದನ್ನು ಬಾಂಬೆ ಚಟ್ನಿ ಎಂತಲೂ ಕರೆಯಲಾಗುತ್ತದೆ. ಇಡ್ಲಿ, ದೋಸೆ, ಪೂರಿ, ರೋಟಿ ಅಥವಾ ಯಾವುದೇ ಉಪಹಾರದೊಂದಿಗೂ ಸರಿಹೊಂದೋ ಟೇಸ್ಟಿ ಚಟ್ನಿ ಇದಾಗಿದೆ. ಭಾರತದ ಸಾಂಪ್ರದಾಯಿಕ ಈರುಳ್ಳಿ, ಟೊಮೆಟೋ, ತೆಂಗಿನಕಾಯಿ ಅಥವಾ ಸೊಪ್ಪಿನಿಂದ ತಯಾರಿಸಲಾಗುವ ಚಟ್ನಿ ಸವಿದು ಬೋರ್ ಎನಿಸಿದ್ದರೆ ಈ ರೆಸಿಪಿ ಟ್ರೈ ಮಾಡೋಕೆ ಪರ್ಫೆಕ್ಟ್ ಟೈಮ್. ಹಾಗಿದ್ರೆ ಫಟಾಫಟ್ ಅಂತ ಬಾಂಬೆ ಚಟ್ನಿ ಮಾಡೋದು ಹೇಗೆಂದು ನೋಡಿಕೊಂಡು ಬರೋಣ.
Advertisement
ಬೇಕಾಗುವ ಪದಾರ್ಥಗಳು:
ಕಡಲೆ ಹಿಟ್ಟು – 5 ಟೀಸ್ಪೂನ್
ಈರುಳ್ಳಿ – 1
ಹಸಿರು ಮೆಣಸಿನಕಾಯಿ – 5
ಗರಂ ಮಸಾಲೆ ಪುಡಿ – ಅರ್ಧ ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ನಿಂಬೆ ರಸ – 2 ಟೀಸ್ಪೂನ್
ಅರಿಶಿನ ಪುಡಿ – ಕಾಲು ಟೀಸ್ಪೂನ್
ಕರಿಬೇವು – ಕೆಲವು
ಎಣ್ಣೆ – 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು – ಕಾಲು ಕಪ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಸಿನಿಮಾ ಟೈಮ್‌ನಲ್ಲಿ ಟೇಸ್ಟಿ ಟ್ವಿಸ್ಟ್ – ಡಿಫರೆಂಟ್ ಆಗಿ ಹನಿ ಪಾಪ್‌ಕಾರ್ನ್ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ 4 ಕಪ್ ನೀರಿಗೆ ಕಡಲೆ ಹಿಟ್ಟನ್ನು ಬೆರೆಸಿ ಯಾವುದೇ ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿಕೊಳ್ಳಿ.
* ಅದಕ್ಕೆ ಉಪ್ಪು ಮತ್ತು ಗರಂ ಮಸಾಲೆ ಪುಡಿಯನ್ನು ಸೇರಿಸಿ.
* ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಈರುಳ್ಳಿ, ಕರಿಬೇವಿನ ಸೊಪ್ಪು, ಹಸಿರು ಮೆಣಸಿನಕಾಯಿ, ಅರಿಶಿನ, ಉಪ್ಪು ಸೇರಿಸಿ ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
* ಈಗ ಕಡಲೆ ಹಿಟ್ಟಿನ ಮಿಶ್ರಣವನ್ನು ಅದಕ್ಕೆ ಸೇರಿಸಿ, ಸ್ವಲ್ಪ ಗಟ್ಟಿಯಾಗುವವರೆಗೆ ಬೆರೆಸಿಕೊಳ್ಳಿ.
* ನಂತರ ಉರಿಯನ್ನು ಆಫ್ ಮಾಡಿ, ನಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ.
* ಇದೀಗ ಬಾಂಬೆ ಚಟ್ನಿ ತಯಾರಾಗಿದ್ದು, ಪೂರಿ, ಚಪಾತಿ ಅಥವಾ ದೋಸೆಯೊಂದಿಗೆ ಸವಿಯಿರಿ. ಇದನ್ನೂ ಓದಿ: ಚಿಪ್ಸ್, ನಾಚೋಸ್‌ಗೆ ಪರ್ಫೆಕ್ಟ್ ಈ ಟೊಮೆಟೋ ಸಾಲ್ಸಾ
Advertisement
Web Stories