ವರ್ಷವಿಡೀ ಸಿಗುವ ಹಣ್ಣು ಎಂದರೆ ಅದು ಬಾಳೆ ಹಣ್ಣು. ಹಣ್ಣಾದರೂ ಸರಿ, ಕಾಯಿಯಾದರೂ ಸರಿ, ಮಾಗಿದರೂ ಸರಿ. ಇದನ್ನು ಬಳಸಿ ವಿವಿಧ ರೀತಿಯಲ್ಲಿ ಅಡುಗೆ ಮಾಡಬಹುದು. ಮನೆಯಲ್ಲಿ ಒಂದಷ್ಟು ಬಿಸ್ಕಿಟ್ ಹಾಗೂ ಬಾಳೆಹಣ್ಣು ಉಳಿದು ಹೋಗಿದ್ದರೆ ಇನ್ನು ಕೆಲವು ಅಡುಗೆ ಮನೆಯಲ್ಲಿ ಸಿಗುವ ಸಾಮಾನ್ಯ ಪದಾರ್ಥಗಳನ್ನು ಬಳಸಿ ಸಿಹಿ ಸಿಹಿಯಾದ ಹಲ್ವಾ ಮಾಡಬಹುದು ಎಂಬುದು ನಿಮಗೆ ತಿಳಿದಿದ್ಯಾ? ಇಲ್ಲ ಎಂದರೆ ಈ ಒಂದು ಸಿಂಪಲ್ ರೆಸಿಪಿಯನ್ನು ನೋಡಿ ಫ್ರೀ ಟೈಮ್‌ನಲ್ಲಿ ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಮಾಗಿದ ಬಾಳೆಹಣ್ಣು – 6
ಬಿಸ್ಕಿಟ್ – 10-12 (ಯಾವುದೇ ಫ್ಲೇವರ್, ಕ್ರೀಂ ಬಳಸದ್ದು)
ತುಪ್ಪ – 3 ಟೀಸ್ಪೂನ್
ಹಾಲು – ಕಾಲು ಕಪ್
ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್ ಇದನ್ನೂ ಓದಿ: ಮಕ್ಕಳು ಇಷ್ಟಪಡೋ ಆಪಲ್ ಕಾಫಿ ಕೇಕ್ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬಾಳೆಹಣ್ಣುಗಳನ್ನು ಒಂದು ಬೌಲ್‌ಗೆ ಹಾಕಿ ಫೋರ್ಕ್ ಸಹಾಯದಿಂದ ಮ್ಯಾಶ್ ಮಾಡಿಕೊಳ್ಳಿ ಮತ್ತು ಪಕ್ಕಕ್ಕಿರಿಸಿ.
* ಬಿಸ್ಕಿಟ್‌ಗಳನ್ನು ಮಿಕ್ಸರ್ ಜಾರ್ ಅಥವಾ ಕಾಫಿ ಗ್ರೈಂಡರ್‌ನಲ್ಲಿ ಹಾಕಿ ಒರಟಾಗಿ ಪುಡಿ ಮಾಡಿಕೊಳ್ಳಿ.
* ರುಬ್ಬಿದ ಬಿಸ್ಕಿಟ್ ಮತ್ತು ಕಿವುಚಿದ ಬಾಳೆಹಣ್ಣನ್ನು ಒಟ್ಟಿಗೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
* ಒಂದು ಕಡಾಯಿಯನ್ನು ಬಿಸಿ ಮಾಡಿ, ಅದರಲ್ಲಿ 2 ಟೀಸ್ಪೂನ್ ತುಪ್ಪ ಹಾಕಿ.
* ತುಪ್ಪ ಬಿಸಿಯಾದ ಬಳಿಕ ಬಾಳೆಹಣ್ಣು, ಬಿಸ್ಕಿಟ್ ಮಿಶ್ರಣ, ಹಾಲು ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.
* ಉರಿಯನ್ನು ಮಧ್ಯಮದಲ್ಲಿಟ್ಟು 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಆಗಾಗ ಬೆರೆಸಿಕೊಳ್ಳುತ್ತಿರಿ.
* ರುಚಿಯನ್ನು ಪರಿಶೀಲಿಸಿ, ಅಗತ್ಯವಿದ್ದರೆ ಸಕ್ಕರೆ ಸೇರಿಸಿ (ಬಾಳೆಹಣ್ಣು ಹೆಚ್ಚು ಸಿಹಿಯಿದ್ದರೆ ಸಕ್ಕರೆ ಅಗತ್ಯವಿಲ್ಲ)
* 5 ನಿಮಿಷ ಬೆಂದ ಬಳಿಕ ಉಳಿದ 1 ಟೀಸ್ಪೂನ್ ತುಪ್ಪ ಬೆರೆಸಿ ಮತ್ತೆ 4-5 ನಿಮಿಷ ಬೇಯಿಸಿಕೊಳ್ಳಿ.
* ಉರಿಯನ್ನು ಆಫ್ ಮಾಡಿ, ಬೇಕೆಂದರೆ ಒಣ ಹಣ್ಣುಗಳಿಂದ ಹಲ್ವಾವನ್ನು ಅಲಂಕರಿಸಿ.
* ಇದೀಗ ಬಾಳೆಹಣ್ಣು, ಬಿಸ್ಕಿಟ್ ಹಲ್ವಾ ತಯಾರಾಗಿದ್ದು, ಬಿಸಿಯಾಗಿ ಅಥವಾ ತಣ್ಣಗಾದಬಳಿಕ ಸವಿಯಿರಿ. ಇದನ್ನೂ ಓದಿ: ಮೃದುವಾದ ಶುಗರ್ ಕುಕ್ಕೀಸ್ ಎಂದಾದ್ರೂ ಟ್ರೈ ಮಾಡಿದ್ದೀರಾ?