ಡಿನ್ನರ್‌ಗೆ ಮಾಡಿ ಸ್ಪೆಷಲ್ ಚಿಲ್ಲಿ ಪೈನಾಪಲ್ ರೈಸ್

Public TV
1 Min Read
Chilli Pineapple Rice 2

ಡಿನ್ನರ್‌ಗೆ ಏನಾದ್ರೂ ಸ್ಪೆಷಲ್ ಆಗಿ ಆರೋಗ್ಯಕರ, ರುಚಿಕರ ಹಾಗೆಯೇ ಕಡಿಮೆ ಮಸಾಲೆಯುಕ್ತ ಅಡುಗೆ ಮಾಡಬೇಕೆನಿಸಿದರೆ ನಾವಿಂದು ಹೇಳಿಕೊಡುತ್ತಿರೋ ರೆಸಿಪಿ ಪರ್ಫೆಕ್ಟ್ ಮ್ಯಾಚ್. ಚಿಲ್ಲಿ ಪೈನಾಪಲ್ ರೈಸ್ ಸರಳ ಹಾಗೂ ಸೌಮ್ಯವಾಗಿದ್ದು, ಲಂಚ್ ಬಾಕ್ಸ್ಗೂ ಉತ್ತಮವಾಗಿದೆ. ಜೀರಾ ರೈಸ್, ಪಲಾವ್ ಅಥವಾ ಯಾವುದೇ ರೈಸ್ ಐಟಮ್ ಮಾಡಿ ಬೋರ್ ಎನಿಸಿದಾಗ ಈ ರೆಸಿಪಿ ಖಂಡಿತಾ ಟ್ರೈ ಮಾಡಿ.

Chilli Pineapple Rice 1

ಬೇಕಾಗುವ ಪದಾರ್ಥಗಳು:
ಅಕ್ಕಿ – 1 ಕಪ್
ಹೆಚ್ಚಿದ ಅನಾನಸ್ – ಅರ್ಧ ಕಪ್
ಹೆಚ್ಚಿದ ಕ್ಯಾಪ್ಸಿಕಮ್/ ಬೆಲ್ ಪೆಪ್ಪರ್ – ಅರ್ಧ ಕಪ್
ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಉಪ್ಪು – ರುಚಿಗೆ ತಕ್ಕಷ್ಟು
ಜೀರಿಗೆ – ಅರ್ಧ ಟೀಸ್ಪೂನ್
ಚಿಲ್ಲಿ ಫ್ಲೇಕ್ಸ್ – ಅರ್ಧ ಟೀಸ್ಪೂನ್
ತುಪ್ಪ – 2 ಟೀಸ್ಪೂನ್ ಇದನ್ನೂ ಓದಿ: ವೈಟ್ ಸಾಸ್ ಪಾಸ್ತಾ ಹೀಗೆ ಮಾಡಿ..

Chilli Pineapple Rice

ಮಾಡುವ ವಿಧಾನ:
* ಮೊದಲಿಗೆ ಅಕ್ಕಿಯನ್ನು ತೊಳೆದು 20 ನಿಮಿಷಗಳ ಕಾಲ ನೆನೆಸಿ, ನೀರನ್ನು ಹರಿಸಿ.
* ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಜೀರಿಗೆ, ಹಸಿರು ಮೆಣಸಿನಕಾಯಿ ಬೆರೆಸಿ.
* ನಂತರ ಕ್ಯಾಪ್ಸಿಕಮ್ ಸೇರಿಸಿ ಕೆಲ ಸೆಕೆಂಡುಗಳ ಕಾಲ ಫ್ರೈ ಮಾಡಿ.
* ಅಕ್ಕಿ, ಅನಾನಸ್, ಉಪ್ಪು, ಚಿಲ್ಲಿ ಫ್ಲೇಕ್ಸ್ ಸೇರಿಸಿ ಕೆಲ ಸೆಕೆಂಡುಗಳ ಕಾಲ ಬೆರೆಸಿ.
* ಬಳಿಕ ಸುಮಾರು 3 ಕಪ್ ನೀರು ಸೇರಿಸಿ, ಅಕ್ಕಿ ಸಂಪೂರ್ಣ ಬೇಯುವವರೆಗೆ ಮುಚ್ಚಿ, ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ.
* ಇದೀಗ ಚಿಲ್ಲಿ ಪೈನಾಪಲ್ ರೈಸ್ ತಯಾರಾಗಿದ್ದು, ಇದನ್ನು ಮೊಸರು ಅಥವಾ ಪುದೀನ ಮೊಸರು ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಬಡಿಸಿ, ಸವಿಯಿರಿ. ಇದನ್ನೂ ಓದಿ: ಸಂಜೆ ಸ್ನಾಕ್ಸ್‌ಗೆ ಮಾಡಿ ಸುಲಭವಾದ ನಾಚೋಸ್

Web Stories

Share This Article