ಫಟಾಫಟ್ ಅಂತ ಉಪಾಹಾರ ತಯಾರಿಸುವುದು ಗೃಹಿಣಿಯರಿಗೆ ಸವಾಲಿನ ವಿಷಯವೇ ಸರಿ. ಹಿಂದಿನ ದಿನ ಅಕ್ಕಿ ಕಡಿದಿಟ್ಟಿಲ್ಲವೆಂದರೆ ದೋಸೆ, ಇಡ್ಲಿ ಮಾಡೋದು ಹೇಗೆ? ಇಂತಹ ಸಮಯದಲ್ಲಿ ನಿಮಗೆ ಈ ಒಂದು ರೆಸಿಪಿ ಖಂಡಿತವಾಗಿಯೂ ಸಹಾಯಕ್ಕೆ ಬರುತ್ತದೆ. ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾಗ ಹುಳಿ ಅವಲಕ್ಕಿಯನ್ನು (Sour Poha) ಒಮ್ಮೆ ನೀವು ಕೂಡಾ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಅವಲಕ್ಕಿ – 1 ಕಪ್
ಅರಿಶಿನ ಪುಡಿ – ಕಾಲು ಟೀಸ್ಪೂನ್
ಹುಣಸೆಹಣ್ಣಿನ ರಸ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಒಗ್ಗರಣೆಗೆ:
ಎಣ್ಣೆ – 2 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ಹಿಂಗ್ – ಚಿಟಿಕೆ
ಕಡಲೆ ಬೇಳೆ – 2 ಟೀಸ್ಪೂನ್
ಮುರಿದ ಒಣ ಕೆಂಪು ಮೆಣಸು – 2
ಸೀಳಿದ ಹಸಿಮೆಣಸು – 1
ಹುರಿ ಕಡಲೆ – 3 ಟೀಸ್ಪೂನ್
ಕರಿಬೇವಿನ ಎಲೆ – ಕೆಲವು ಇದನ್ನೂ ಓದಿ: ಮಂಡಕ್ಕಿ ಒಗ್ಗರಣೆ ಒಮ್ಮೆ ಟ್ರೈ ಮಾಡಿ ನೋಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಅವಲಕ್ಕಿಯನ್ನು ಎರಡು ಬಾರಿ ತೊಳೆದು ನೀರು ಬಸಿಯಿರಿ.
* ಅವಲಕ್ಕಿಗೆ ಅರಿಶಿನ ಪುಡಿ, ಹುಣಸೆಹಣ್ಣಿನ ರಸ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಬದಿಗಿಡಿ.
* ಈಗ ಒಗ್ಗರಣೆ ತಯಾರಿಸಲು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಎಣ್ಣೆ ಬಿಸಿಮಾಡಿ. ಅದಕ್ಕೆ ಸಾಸಿವೆ ಹಾಕಿ ಸಿಡಿಸಿ.
* ಬಳಿಕ ಹಿಂಗ್, ಕಡಲೆ ಬೇಳೆ, ಒಣಮೆಣಸು, ಹಸಿ ಮೆಣಸು, ಹುರಿ ಕಡಲೆ ಹಾಗೂ ಕರಿಬೇವಿನ ಎಲೆ ಹಾಕಿ ಹುರಿಯಿರಿ.
* ಬೇಳೆಗಳು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುತ್ತಿದ್ದಂತೆಯೇ ನೀರು ಬಸಿದ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* 3 ನಿಮಿಷ ನಿಧಾನವಾಗಿ ಹುರಿದುಕೊಳ್ಳಿ.
* ಇದೀಗ ಹುಳಿ ಅವಲಕ್ಕಿ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಆರೋಗ್ಯಕರ ಹುರುಳಿ ಕಾಳಿನ ದೋಸೆ ರೆಸಿಪಿ