ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ಈರುಳ್ಳಿ ಹಾಕಿ ಉತ್ತಪ್ಪ ಮಾಡುತ್ತಾರೆ. ಆದರೆ ಮನೆಯಲ್ಲಿ ನಾವು ನಮಗೆ ಬೇಕಾದ ತರಕಾರಿಗಳನ್ನು ಬಳಸಿ ಉತ್ತಪ್ಪ ತಯಾರಿಸಬಹುದು. ರುಚಿಯಾದ ಹಾಗೂ ತುಂಬಾ ಮೃದುವಾದ ವೆಜಿಟೇಬಲ್ ಉತ್ತಪ್ಪ ಮಾಡುವ ವಿಧಾನ ಇಲ್ಲಿದೆ. ಒಮ್ಮೆ ನೀವೂ ಮಾಡಿ ಸವಿಯಿರಿ.
ಬೇಕಾಗುವ ಪದಾರ್ಥಗಳು:
ಇಡ್ಲಿ ಅಕ್ಕಿ – 2 ಕಪ್
ಉದ್ದಿನಬೇಳೆ – ಅರ್ಧ ಕಪ್
ಮೆಂತ್ಯ – ಅರ್ಧ ಟೀಸ್ಪೂನ್
ಅವಲಕ್ಕಿ – 1 ಕಪ್
ನೀರು – ನೆನೆಸಲು ಹಾಗೂ ರುಬ್ಬಲು
ಉಪ್ಪು – 2 ಟೀಸ್ಪೂನ್
ಎಣ್ಣೆ – ಹುರಿಯಲು
Advertisement
Advertisement
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ತುರಿದ ಕ್ಯಾರೆಟ್ – 1
Advertisement
ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ – ಅರ್ಧ
ಸಣ್ಣಗೆ ಹೆಚ್ಚಿದ ಟೊಮೇಟೊ – 1
ಸಣ್ಣಗೆ ಹೆಚ್ಚಿದ ಶುಂಠಿ – 1 ಇಂಚು
ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 1
ಕರಿಬೇವಿನ ಎಲೆಗಳು – ಸ್ವಲ್ಪ
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್ ಇದನ್ನೂ ಓದಿ: ತುಂಬಾ ರುಚಿಯಾಗಿ ಮಾಡಬಹುದು ಓಟ್ಸ್ ಇಡ್ಲಿ
Advertisement
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಇಡ್ಲಿ ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತ್ಯವನ್ನು ತೆಗೆದುಕೊಂಡು, ಅದಕ್ಕೆ ಅಗತ್ಯವಿರುವಷ್ಟು ನೀರು ಸೇರಿಸಿ 5 ಗಂಟೆ ನೆನೆಸಿಡಿ.
* ಈಗ ನೆನೆಸಿಟ್ಟಿದ್ದ ಅಕ್ಕಿಯಿಂದ ನೀರನ್ನು ಬಸಿದು, ಮಿಕ್ಸರ್ ಗ್ರೈಂಡರ್‌ಗೆ ವರ್ಗಾಯಿಸಿ. ಅಗತ್ಯವಿರುವಷ್ಟು ನೀರು ಹಾಕಿ ನುಣ್ಣಗೆ ರುಬ್ಬಿ, ಪಾತ್ರೆಯಲ್ಲಿ ತೆಗೆದಿಡಿ.
* ಈಗ ಇನ್ನೊಂದು ಪಾತ್ರೆಯಲ್ಲಿ ಅವಲಕ್ಕಿ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಅದಕ್ಕೆ ಅಗತ್ಯವಿರುವಷ್ಟು ನೀರು ಹಾಕಿ ನಯವಾಗಿ ರುಬ್ಬಿಕೊಳ್ಳಿ.
* ಈಗ ಅಕ್ಕಿ ಹಿಟ್ಟು ಹಾಗೂ ಅವಲಕ್ಕಿ ಹಿಟ್ಟನ್ನು ಮಿಕ್ಸ್ ಮಾಡಿ, 8 ಗಂಟೆಗಳ ಕಾಲ ಬೆಚ್ಚಗಿನ ಸ್ಥಳದಲ್ಲಿ ಮುಚ್ಚಿ ಇಡಿ. ಇದನ್ನೂ ಓದಿ: ಬೆಳಗ್ಗಿನ ಉಪಹಾರಕ್ಕೆ ಮಾಡಿ ಕೇರಳ ಶೈಲಿಯ ಅಪ್ಪಂ
* 8 ಗಂಟೆಗಳ ಬಳಿಕ ಹಿಟ್ಟು ಉಬ್ಬಿರುವುದನ್ನು ನೀವು ಕಾಣಬಹುದು. ಅದಕ್ಕೆ 2 ಟೀಸ್ಪೂನ್ ಉಪ್ಪು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ.
* ಈಗ ಕತ್ತರಿಸಿಟ್ಟಿದ್ದ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಮ್, ಟೊಮೆಟೋ, ಶುಂಠಿ, ಮೆಣಸಿನಕಾಯಿ, ಕರಿಬೇವಿನ ಎಲೆ ಹಾಗೂ ಕೊತ್ತಂಬರಿ ಸೊಪ್ಪನ್ನು ಒಂದು ಬೌಲ್‌ಗೆ ಹಾಕಿ ಮಿಶ್ರಣವನ್ನು ತಯಾರು ಮಾಡಿಟ್ಟಿರಿ.
* ಬಿಸಿ ಕಾವಲಿಯ ಮೇಲೆ ದೋಸೆ ಹಿಟ್ಟನ್ನು ಹಾಕಿ, ಸಾಮಾನ್ಯ ಮಸಾಲೆ ದೋಸೆಗಿಂತ ಸ್ವಲ್ಪ ದಪ್ಪವಾದ ದೋಸೆಯನ್ನು ಹಾಕಿ.
* ಅದರ ಮೇಲೆ ತಯಾರಿಸಿಟ್ಟಿದ್ದ ತರಕಾರಿಯ ಮಿಶ್ರಣವನ್ನು 1-2 ಟೀಸ್ಪೂನ್‌ನಷ್ಟು ಹಾಕಿ ಹರಡಿ.
* ದೋಸೆಯ ಬದಿಗಳಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ, ದೋಸೆಯನ್ನು ಎರಡೂ ಬದಿ ತಿರುವಿ ಹಾಕಿ ಬೇಯಿಸಿ.
* ಇದೀಗ ವೆಜಿಟೇಬಲ್ ಉತ್ತಪ್ಪ ತಯಾರಾಗಿದ್ದು, ನಿಮ್ಮಿಷ್ಟದ ಚಟ್ನಿಯೊಂದಿಗೆ ಸವಿಯಿರಿ.