ಅಡುಗೆ ಮನೆಯಲ್ಲಿ ಸಿಗುವ ಕೆಲವೇ ಸಾಮಾಗ್ರಿ ಬಳಸಿ ನೀವು ಏನಾದರೂ ಸಿಹಿ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದರೆ, ಅಕ್ಕಿ ಹಲ್ವಾ ಟ್ರೈ ಮಾಡಿ. ಈ ಸಿಹಿ ಕರ್ನಾಟಕದಲ್ಲಿ ಒಂದು ಸಾಂಪ್ರದಾಯಿಕ ತಿನಿಸಾಗಿದ್ದು, ಅಕ್ಕಿ ಬದಲು ಗೋಧಿ, ರಾಗಿ, ರವೆಯಿಂದಲೂ ಮಾಡಬಹುದು. ನಾವಿಂದು ಹೇಳಿಕೊಡುತ್ತಿರುವ ಅಕ್ಕಿ ಹಲ್ವಾ (Rice Halwa) ಸಿಂಪಲ್ ಆಗಿದ್ದು, ಪ್ರತಿಯೊಬ್ಬರೂ ಬಿಡುವಿನ ಸಮಯದಲ್ಲಿ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಅಕ್ಕಿ – 1 ಕಪ್
ತೆಂಗಿನ ತುರಿ – ಮುಕ್ಕಾಲು ಕಪ್
ಬೆಲ್ಲ – ಮುಕ್ಕಾಲು ಕಪ್
ಉಪ್ಪು – ಕಾಲು ಟೀಸ್ಪೂನ್
ತುಪ್ಪ – 2 ಟೀಸ್ಪೂನ್
ಏಲಕ್ಕಿ – 3
ನೀರು – 3 ಕಪ್ ಇದನ್ನೂ ಓದಿ: ರುಚಿಯಾದ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ನೀವೊಮ್ಮೆ ಮಾಡಿ ಸವಿಯಿರಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಅಕ್ಕಿಯನ್ನು 2-4 ಗಂಟೆ ನೆನೆಸಿಡಿ.
* ಈಗ ಮಿಕ್ಸರ್ ಜಾರ್‌ಗೆ ಅಕ್ಕಿ, ತೆಂಗಿನ ತುರಿ, ಬೆಲ್ಲ, ಉಪ್ಪು ಮತ್ತು ಏಲಕ್ಕಿ ಹಾಕಿ, ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.
* ಈಗ ಒಂದು ನಾನ್ ಸ್ಟಿಕ್ ಕಡಾಯಿ ತೆಗೆದುಕೊಂಡು, ರುಬ್ಬಿದ ಹಿಟ್ಟನ್ನು ಕಡಾಯಿಗೆ ಹಾಕಿ. ಉಳಿದ ಪ್ರಮಾಣದ ನೀರು ಸೇರಿಸಿ ಮಿಶ್ರಣ ಮಾಡಿ. (1 ಕಪ್ ಅಕ್ಕಿಗೆ 3 ಕಪ್ ನೀರು ಹಾಕಬೇಕು. ರುಬ್ಬುವಾಗ ಸ್ವಲ್ಪ ನೀರು ಸೇರಿಸಿದ್ದರಿಂದ ಉಳಿದ ಪ್ರಮಾಣದ ನೀರನ್ನಷ್ಟೇ ಸೇರಿಸಿ.)
* ಉರಿಯನ್ನು ಮಧ್ಯಮದಲ್ಲಿಟ್ಟುಕೊಂಡು ಮಿಶ್ರಣವನ್ನು ನಿರಂತರವಾಗಿ ಬೆರೆಸಿ.
* ಮಿಶ್ರಣ ದಪ್ಪವಾಗುತ್ತಾ ಬಂದಂತೆ ತುಪ್ಪ ಸೇರಿಸಿ ಮಿಶ್ರಣ ಮಾಡಿ.
* ಮಿಶ್ರಣ ಬದಿಗಳನ್ನು ಬಿಡುತ್ತಾ ಮುದ್ದೆಯಾಗುವವರೆಗೂ ಕೈಯಾಡಿಸುತ್ತಿರಿ. ಈ ಹಂತಕ್ಕೆ ಬರಲು ಸುಮಾರು 15-20 ನಿಮಿಷ ತೆಗೆದುಕೊಳ್ಳುತ್ತದೆ. ಬಳಿಕ ಉರಿಯನ್ನು ಆಫ್ ಮಾಡಿ.
* ಈಗ ಒಂದು ಪ್ಲೇಟ್‌ಗೆ ತುಪ್ಪವನ್ನು ಸವರಿ, ಮಿಶ್ರಣವನ್ನು ಪ್ಲೇಟ್‌ಗೆ ವರ್ಗಾಯಿಸಿ.
* ಪ್ಲೇಟ್‌ನಲ್ಲಿ ಮಿಶ್ರಣವನ್ನು ಸಮಾನವಾಗಿ ಹರಡಿ.
* ಮಿಶ್ರಣ ಆರಿದ ಬಳಿಕ ಚಾಕುವಿನ ಸಹಾಯದಿಂದ ನಿಮಗೆ ಬೇಕಾದ ಆಕಾರಕ್ಕೆ ಹಲ್ವಾವವನ್ನು ಕತ್ತರಿಸಿಕೊಳ್ಳಿ.
* ಇದೀಗ ಅಕ್ಕಿ ಹಲ್ವಾ ಸವಿಯಲು ಸಿದ್ಧವಾಗಿದೆ. ನೀವಿದನ್ನು ಫ್ರಿಡ್ಜ್‌ನಲ್ಲಿಟ್ಟರೆ 4 ದಿನಗಳವರೆಗೆ ಬೇಕೆನಿಸಿದಾಗ ಸವಿಯಬಹುದು. ಇದನ್ನೂ ಓದಿ: ಗೋಧಿ ಹಿಟ್ಟಿನ ಲಡ್ಡು ಎಂದಾದರೂ ಮಾಡಿದ್ದೀರಾ?