ಮುಖ್ಯವಾಗಿ ಕರಾವಳಿ ಭಾಗ ಹಾಗೂ ಮಲೆನಾಡು ಪ್ರದೇಶದಲ್ಲಿ ಈ ಅಕ್ಕಿ ಕಡುಬು ಅತ್ಯಂತ ಫೇಮಸ್. ಪುಂಡಿ, ಉಂಡಿ ಎಂತಲೂ ಕರೆಯಲಾಗುವ ಈ ತಿಂಡಿ ಚಟ್ನಿಯೊಂದಿಗೆ ಸವಿದರೆ ಬೆಳಗ್ಗಿನ ಉಪಾಹಾರಕ್ಕೂ, ನಾನ್‌ವೆಜ್ ಸಾರಿನೊಂದಿಗೆ ಬಾಡೂಟಕ್ಕೂ ಹೊಂದಿಕೆಯಾಗುತ್ತದೆ. ರುಚಿಕರವಾದ ಅಕ್ಕಿ ಕಡುಬು (Rice Ball) ಮಾಡುವ ವಿಧಾನ ಇಲ್ಲಿದೆ. ನೀವೂ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಅಕ್ಕಿ – 2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – 4 ಕಪ್
ತುರಿದ ತೆಂಗಿನಕಾಯಿ – ಅರ್ಧ ಕಪ್
ಜೀರಿಗೆ – 1 ಟೀಸ್ಪೂನ್ ಇದನ್ನೂ ಓದಿ: ಗೋವಾ ಶೈಲಿಯ ಸಿಹಿಯಾದ ಸೂರ್ನೊಲಿ ದೋಸೆ ಟ್ರೈ ಮಾಡಿದ್ದೀರಾ?
Advertisement
Advertisement
* ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು, ಬಸಿದು, ಬಿಸಿಲಿನಲ್ಲಿ ಒಣಗಿಸಿಟ್ಟುಕೊಳ್ಳಬೇಕು.
* ಅಕ್ಕಿಯಲ್ಲಿ ನೀರಿನಂಶ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಮಿಕ್ಸರ್ ಜಾರ್‌ಗೆ ಹಾಕಿ, ತರಿತರಿಯಾಗಿ ಪುಡಿ ಮಾಡಿಕೊಳ್ಳಿ.
* ಈಗ ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ.
* ನೀರು ಸ್ವಲ್ಪ ಬಿಸಿಯಾದ ಬಳಿಕ ಅದಕ್ಕೆ ತೆಂಗಿನ ತುರಿ, ಉಪ್ಪು ಮತ್ತು ಜೀರಿಗೆ ಹಾಕಿ ಕಲಸಿಕೊಳ್ಳಿ.
* ನೀರು ಕುದಿಯಲು ಬಂದಂತೆ ಪುಡಿ ಮಾಡಿದ ಅಕ್ಕಿಯನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ ಕಲಸಿಕೊಳ್ಳಿ.
* ಅಕ್ಕಿ ಬೆಂದು, ಉಂಡೆ ಕಟ್ಟುವ ಹದಕ್ಕೆ ಬಂದಮೇಲೆ ಗ್ಯಾಸ್ ಅನ್ನು ಆಫ್ ಮಾಡಿಕೊಳ್ಳಿ.
* ಹಿಟ್ಟು ಬಿಸಿಯಿರುವಾಗಲೇ ಕಡುಬು ಗಾತ್ರಕ್ಕೆ ಉಂಡೆಗಳನ್ನಾಗಿ ಕಟ್ಟಿಕೊಳ್ಳಿ.
* ಇದೀಗ ಸ್ಟೀಮರ್‌ನಲ್ಲಿ ಉಂಡೆಗಳನ್ನಿಟ್ಟು, 15-20 ನಿಮಿಷಗಳ ವರೆಗೆ ಬೇಯಿಸಿ.
* ಇದೀಗ ಅಕ್ಕಿ ಕಡುಬು ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಹೀಗೆ ಮಾಡಿ ಆರೋಗ್ಯಕರ ಹೆಸರು ಬೇಳೆ ದೋಸೆ