ಕೆಂಪು ಈರುಳ್ಳಿಯ ಪಿಕ್ಕಲ್ ತಕ್ಷಣವೇ ತಯಾರಿಸಬಹುದಾದ ಸುಲಭದ ರೆಸಿಪಿ. ಇದನ್ನು ಸಲಾಡ್, ಸ್ಯಾಂಡ್‌ವಿಚ್, ಟಾಕೋ ಅಥವಾ ಯಾವುದೇ ಅಡುಗೆಯೊಂದಿಗೂ ಸವಿಯಬಹುದು. ಈ ರೆಸಿಪಿಯ ರುಚಿ ಮಾತ್ರವಲ್ಲದೆ ಪರಿಮಳವೂ ಅದ್ಭುತ. ಸರಳವಾದ ಈ ರೆಸಿಪಿಯನ್ನು ಮಾಡಲು ಬೇಕಾಗುವುದು ಕೆಲವೇ ಪದಾರ್ಥಗಳು.
Advertisement
ಬೇಕಾಗುವ ಪದಾರ್ಥಗಳು:
ತೆಳ್ಳಗೆ ಹೆಚ್ಚಿದ ಕೆಂಪು ಈರುಳ್ಳಿ – 1 (ಮಧ್ಯಮ ಗಾತ್ರದ್ದು)
ವಿನೆಗರ್ – ಅರ್ಧ ಕಪ್
ನೀರು – ಅರ್ಧ ಕಪ್
ಸಕ್ಕರೆ – 1 ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್ ಇದನ್ನೂ ಓದಿ: ಕೊರಿಯನ್ ಸಾಂಪ್ರದಾಯಿಕ ಆಹಾರ ಕಿಮ್ಚಿ ಮಾಡೋದು ಹೇಗೆ ಗೊತ್ತಾ?
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಈರುಳ್ಳಿಯನ್ನು ತೆಳ್ಳಗೆ ಕತ್ತರಿಸಿಕೊಂಡು, ಅದನ್ನು ಗಟ್ಟಿ ಮುಚ್ಚಳವಿರುವ ಗಾಜಿನ ಬಾಟಲಿಗೆ ಹಾಕಿ.
* ಒಂದು ಪಾತ್ರೆಯಲ್ಲಿ ನೀರು, ವಿನೆಗರ್, ಸಕ್ಕರೆ ಹಾಗೂ ಉಪ್ಪನ್ನು ಹಾಕಿ, ಕುದಿಸಿಕೊಳ್ಳಿ.
* ನಂತರ ಅದನ್ನು ಈರುಳ್ಳಿ ಹಾಕಿರುವ ಗಾಜಿನ ಬಾಟಲಿಗೆ ಸುರಿಯಿರಿ. ಈರುಳ್ಳಿ ದ್ರವ ಪದಾರ್ಥದಲ್ಲಿ ಮುಳುಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲವೆಂದರೆ ಫೋರ್ಕ್ ಸಹಾಯದಿಂದ ಒತ್ತಿಕೊಳ್ಳಿ.
* ದ್ರವ ಮಿಶ್ರಣ ತಣ್ಣಗಾಗಲು ಬಿಡಿ. ನಂತರ ಅದರ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ, ಫ್ರಿಜ್‌ನಲ್ಲಿಡಿ.
* 30 ನಿಮಿಷಗಳ ಬಳಿಕ ಈರುಳ್ಳಿ ಪಿಕ್ಕಲ್ ಸವಿಯಲು ಸಿದ್ಧವಾಗುತ್ತದೆ. ಇದನ್ನು ಸುಮಾರು 3 ವಾರಗಳವರೆಗೆ ಸವಿಯಬಹುದು. ಇದನ್ನೂ ಓದಿ: ಮನೆಯಲ್ಲೇ ಟ್ರೈ ಮಾಡಿ ಆರೋಗ್ಯಕರ ದಾಸವಾಳ ಟೀ
Advertisement
Web Stories