-ಆರೋಗ್ಯ ಇಲಾಖೆಯಿಂದ ಮೇಕ್ ಆರ್ ಬ್ರೇಕ್ ವೀಕ್ ಅಭಿಯಾನ
ನವದೆಹಲಿ: ಜನತಾ ಕರ್ಫ್ಯೂ ಆಯ್ತು. ಭಾರತ ಲಾಕ್ ಡೌನ್ ಆಗಿ ಹದಿನಾರು ದಿನ ಕಳೆದು ಹೋಯ್ತು. ಆದರೆ ಅಂದುಕೊಂಡ ಹಾಗೇ ಮಾತ್ರ ಏನು ಆಗ್ತಿಲ್ಲ. ದಿನದಿಂದ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಆದರೆ ಇದಕ್ಕೆಲ್ಲ ಒಂದು ಅಂತ್ಯ ಹಾಡಲು ನಿರ್ಧರಿಸುವ ಕೇಂದ್ರ ಆರೋಗ್ಯ ಹೊಸ ಅಭಿಯಾನವೊಂದನ್ನ ಆರಂಭಿಸಿದೆ.
Advertisement
ನೋಡ ನೋಡುತ್ತಿದ್ದಂತೆ ಕೊರೊನಾ ಅನ್ನೊ ಹೆಮ್ಮಾರಿ ಇಮ್ಮಡಿಯಾಗುತ್ತಿದೆ. ಹಳ್ಳಿಯಿಂದ ದಿಲ್ಲಿವರೆಗೂ ತನ್ನ ವಿಶಾಲ ಬಾಹುಗಳನ್ನು ವಿಸ್ತರಿಸಲು ಸಿದ್ಧವಾಗಿದೆ. ಈ ಮಾರಿಯ ಹೆಡೆಮುರಿ ಕಟ್ಟಲು ಕೇಂದ್ರ ಸರ್ಕಾರ ಎಷ್ಟೇ ಕಠಿಣ ಕ್ರಮಗಳನ್ನು ತೆಗೆದುಕೊಂಡರೂ ಪೂರ್ಣ ಪ್ರಮಾಣದಲ್ಲಿ ವರ್ಕೌಟ್ ಆಗುತ್ತಿಲ್ಲ. ಈ ಹಿನ್ನೆಲೆ ದೇಶದಲ್ಲಿ ಆರೋಗ್ಯ ಇಲಾಖೆ ಹೊಸದೊಂದು ಅಭಿಯಾನ ಆರಂಭಿಸಲು ಸಿದ್ಧವಾಗಿದೆ. ಇಂದಿನಿಂದ ಮೇಕ್ ಆರ್ ಬ್ರೇಕ್ ವೀಕ್ ಅನ್ನೋ ಹೆಸರಿನಲ್ಲಿ ಅಭಿಯಾನ ಶುರು ಮಾಡಲಿದೆ.
Advertisement
Advertisement
ಏನಿದು ಮೇಕ್ ಆರ್ ಬ್ರೇಕ್ ವೀಕ್?
* ಮೇಕ್ ಆರ್ ಬ್ರೇಕ್ ವೀಕ್ ದಕ್ಷಿಣ ಕೋರಿಯಾದಲ್ಲಿ ಪ್ರಯೋಗಿಸಲಾದ ತಂತ್ರ.
* ಇದನ್ನು ಅಮೆರಿಕಾದಲ್ಲೂ ಪ್ರಯೋಗ ಮಾಡಲಾಗಿದೆ.
* ಮೇಕ್ ಆರ್ ಬ್ರೇಕ್ ವೀಕ್ ಹೆಸರಿನಲ್ಲಿ ದೇಶದಲ್ಲಿ ಕೊರೊನಾ ಟೆಸ್ಟಿಂಗ್ ಗಳ ಪ್ರಮಾಣ ಏರಿಕೆ ಮಾಡುವುದು.
* ಮುಂದಿನ ಒಂದು ವಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಟ್ ಸ್ಪಾಟ್ ನಗರಗಳಲ್ಲಿ ಪರೀಕ್ಷೆಗಳನ್ನು ಹೆಚ್ಚು ಮಾಡುವುದು.
* ಶಂಕಿತರು ಮತ್ತು ಸೋಂಕಿತನ್ನು ಗುರುತಿಸಿ ಚಿಕಿತ್ಸೆ ನೀಡುವುದು ಅಲ್ಲದೇ ಸಂಬಂಧಿಸಿದ ಅನುಮಾಸ್ಪದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡುವುದು.
* ಲಾಕ್ ಡೌನ್ ಮುಂದುವರಿಸಬೇಕಾ ಅಥವಾ ತೆರವು ಮಾಡಬೇಕಾ ಎನ್ನುವುದನ್ನು ಮೇಕ್ ಆರ್ ಬ್ರೇಕ್ ವೀಕ್ ನಿರ್ಧರಿಸಲಿದೆ.
Advertisement
ಇತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಆರೋಗ್ಯ ಇಲಾಖೆ ಈ ವಾರ ಹದ್ದಿನ ಕಣ್ಣಿನಲ್ಲಿ ಸೋಂಕಿತನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ. ಭಾರತದಲ್ಲಿ ಮೊದಲ 2.500 ಪ್ರಕರಣಗಳ ಪತ್ತೆಗೆ ಒಂಭತ್ತು ವಾರಗಳ ಸಮಯ ತೆಗೆದುಕೊಂಡಿತ್ತು. 2500 ರಿಂದ 5000 ಸೋಂಕಿತರ ಪ್ರಮಾಣ ಒಂದೇ ವಾರದಲ್ಲಿ ಏರಿಕೆ ಆಗಿದೆ. ಆರು ದಿನದಲ್ಲಿ 2.500ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ ಈ ವಾರದಲ್ಲಿ 5000 ದಿಂದ 10000 ಸಾವಿರಕ್ಕೆ ದುಪ್ಪಟ್ಟು ಆಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಈ ನಡುವೆ ನಿಜಾಮುದ್ದೀನ್ ಮರ್ಕಜ್ ನಿಂದ ವಾಪಸ್ ಆಗಿರುವ ಕೆಲ ವ್ಯಕ್ತಿಗಳು ಇನ್ನು ಪತ್ತೆಯಾಗಿಲ್ಲ ಎಲ್ಲಿ ಹೇಗೆ ಯಾರಲ್ಲಿ ಸೋಂಕಿದೆ ಎನ್ನುವುದು ಗೊತ್ತಿಲ್ಲ. ಹೀಗಾಗಿ ಕೊರಿನಾ ಹಾಟ್ ಸ್ಪಾಟ್ ಅಂತಾ ಗುರುತಿಸಿಕೊಂಡ ನಗರಗಳನ್ನು ಆಯ್ಕೆ ಮಾಡಿಕೊಂಡು ಮೇಕ್ ಆರ್ ಬ್ರೇಕ್ ವೀಕ್ ಹೆಸರಿನಲ್ಲಿ ಹೆಚ್ಚು ಟೆಸ್ಟಿಂಗ್ ಮಾಡುವ ಮೂಲಕ ಕೊರೊನಾ ಸೋಂಕಿಗೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ.