ಮಲೆನಾಡಿನಲ್ಲಿ ಬಾಡೂಟಕ್ಕೆ ಫೇಮಸ್ ಪೋರ್ಕ್ ಕರಿ (Pork Curry). ಇದನ್ನು ಪಂದಿ ಕರಿ ಎಂತಲೂ ಕರೆಯಲಾಗುತ್ತದೆ. ಅಕ್ಕಿಯಿಂದ ತಯಾರಿಸಿದ ಕಡುಬಿನೊಂದಿಗೆ ಪೋರ್ಕ್ ಕರಿಯನ್ನು ಸವಿದರೆ, ಮತ್ತೆ ಅದರ ರುಚಿಯನ್ನು ಎಂದಿಗೂ ಮರೆಯೋದು ಅಸಾಧ್ಯ. ನೀರು ದೋಸೆ ಅಥವಾ ಅಕ್ಕಿ ರೊಟ್ಟಿಯೊಂದಿಗೂ ಸವಿಯಬಹುದಾಗ ಕೊಡವ ಶೈಲಿಯ ಪೋರ್ಕ್ ಕರಿಯನ್ನು ಮಾಡುವುದು ಹೇಗೆ ಎಂದು ನಾವಿಂದು ಹೇಳಿಕೊಡುತ್ತೇವೆ.
Advertisement
ಬೇಕಾಗುವ ಪದಾರ್ಥಗಳು:
ಪೋರ್ಕ್ – 1 ಕೆಜಿ
ಹೆಚ್ಚಿದ ಈರುಳ್ಳಿ – 3
ಕರಿಬೇವಿನ ಎಲೆ – ಕೆಲವು
ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
ಶುಂಠಿ ಪೇಸ್ಟ್ – ಒಂದೂವರೆ ಟೀಸ್ಪೂನ್
ಮೆಣಸಿನ ಪುಡಿ – 2 ಟೀಸ್ಪೂನ್
ಅರಿಶಿನ ಪುಡಿ – ಕಾಲು ಟೀಸ್ಪೂನ್
ಹುಣಸೆಹಣ್ಣು – 1 ಟೀಸ್ಪೂನ್
ವಿನೆಗರ್ – 4 ಟೀಸ್ಪೂನ್
ನೀರು – ಮುಕ್ಕಾಲು ಕಪ್
ಮಸಾಲೆ ತಯಾರಿಸಲು:
ಜೀರಿಗೆ – ಅರ್ಧ ಟೀಸ್ಪೂನ್
ಕರಿಮೆಣಸು – 5 ಟೀಸ್ಪೂನ್
ಲವಂಗ – 8
ದಾಲ್ಚಿನ್ನಿ ಚಕ್ಕೆ – 2 ಇಂಚು ಇದನ್ನೂ ಓದಿ: ಬಿಸಿಬಿಸಿಯಾಗಿ ಅಕ್ಕಿ ಕಡುಬು ಮಾಡಿ ಸವಿಯಿರಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪೋರ್ಕ್ ತುಂಡುಗಳನ್ನು ಸ್ವಚ್ಛಗೊಳಿಸಿ, ನೀರನ್ನು ಹರಿಸಿ ಬದಿಗಿಡಿ.
* ಮಸಾಲೆ ಪುಡಿಯನ್ನು ತಯಾರಿಸಿಲು ಪ್ಯಾನ್ ಒಂದನ್ನು ತೆಗೆದುಕೊಂಡು, ಬಿಸಿ ಮಾಡಿ, ಅದಕ್ಕೆ ಜೀರಿಗೆ, ಕರಿಮೆಣಸು, ಲವಂಗ ಹಾಗೂ ದಾಲ್ಚಿನ್ನಿ ಚಕ್ಕೆ ಹಾಕಿ ಹುರಿಯಿರಿ.
* ಹುರಿದ ಪದಾರ್ಥಗಳನ್ನು ಪುಡಿ ಮಾಡಿ ಬದಿಗಿಡಿ.
* ಈಗ ಕುಕ್ಕರ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಈರುಳ್ಳಿ, ಉಪ್ಪು ಮತ್ತು ಕರಿಬೇವಿನ ಎಲೆಹಾಕಿ ಹುರಿಯಿರಿ.
* ಈರುಳ್ಳಿ ತಿಳಿ ಗೋಲ್ಡನ್ ಬ್ರೌನ್ ಬಣ್ಣಬಂದ ಬಳಿಕ ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿದುಕೊಳ್ಳಿ.
* ಈಗ ಮೆಣಸಿನ ಪುಡಿ, ಅರಿಶಿನ ಮತ್ತು ರುಬ್ಬಿದ ಮಸಾಲೆ ಪುಡಿ ಸೇರಿಸಿ ಚೆನ್ನಾಗಿ ಹುರಿಯಿರಿ.
Advertisement
* ಹುಣಸೆ ಹಣ್ಣನ್ನು 1 ಟೀಸ್ಪೂನ್ ನೀರಿನೊಂದಿಗೆ ರುಬ್ಬಿಕೊಂಡು, ಬಳಿಕ ಹುರಿಯುತ್ತಿರುವ ಮಸಾಲೆಗೆ ಸೇರಿಸಿ ಮಿಶ್ರಣ ಮಾಡಿ.
* ರುಚಿಗೆ ಬೇಕಾಗುವಷ್ಟು ಉಪ್ಪು ಸೇರಿಸಿ, ಬಳಿಕ ಪೋರ್ಕ್ ತುಂಡುಗಳನ್ನು ಹಾಕಿ, ಮುಕ್ಕಾಲು ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಕುಕ್ಕರ್ ಮುಚ್ಚಳವನ್ನು ಹಾಕಿ, 2-3 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
* ಪೋರ್ಕ್ನ ಕೊಬ್ಬನ್ನು ಕರಗಿಸಲು ವಿನೆಗರ್ ಸೇರಿಸಿ, ಮಿಶ್ರಣ ಮಾಡಿ.
* ಈಗ ಗ್ರೇವಿ ದಪ್ಪಗಾಗುವವರೆಗೆ ಹಾಗೂ ನಿಮಗೆ ಬೇಕಾದ ಸ್ಥಿರತೆಯನ್ನು ಹೊಂದಿಸುವವರೆಗೆ ಕುದಿಸಿಕೊಳ್ಳಿ.
* ಇದೀಗ ಪೋರ್ಕ್ ಕರಿ ತಯಾರಾಗಿದ್ದು, ಬಿಸಿಬಿಸಿಯಾದ ಅಕ್ಕಿ ಕಡುಬು ಜೊತೆ ಸವಿಯಿರಿ. ಇದನ್ನೂ ಓದಿ: ಹಬೆಯಲ್ಲಿ ಬೇಯಿಸಿ ಕಬಾಬ್ ಮಾಡಿ ನೋಡಿ – ಸಖತ್ ಟೇಸ್ಟಿ ಆಗಿರುತ್ತೆ