ಪರಭಾಷಾ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ರಾಜ್ಯದಲ್ಲಿ ತೆರಿಗೆ ವಿನಾಯತಿ ನೀಡಿದಂತೆ, ಕನ್ನಡದ್ದೇ ಆದ ‘ಜೇಮ್ಸ್’ ಚಿತ್ರಕ್ಕೂ ತೆರಿಗೆ ವಿನಾಯತಿ ಕೊಡಬೇಕು ಎಂಬ ಕೂಗು ಎರಡು ದಿನಗಳಿಂದ ರಾಜ್ಯದಲ್ಲಿ ಕೇಳಿ ಬರುತ್ತಿದೆ. ಈವರೆಗೂ ಪುನೀತ್ ಅವರ ಅಭಿಮಾನಿಗಳು, ಕನ್ನಡ ಪರ ಕೆಲಸ ಸಂಘಟನೆಗಳು ಮಾತ್ರ ಸೋಷಿಯಲ್ ಮೀಡಿಯಾ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದರು. ಇದೀಗ ಆ ಪಟ್ಟಿಗೆ ಜನಪ್ರತಿನಿಧಿಗಳು ಕೂಡ ಧ್ವನಿಗೂಡಿಸಿದ್ದಾರೆ. ಇದನ್ನೂ ಓದಿ : ಮಾಲ್ಡೀವ್ಸ್ ಬೀಚ್ ನಲ್ಲಿ ಬಿಕಿನಿರಾಣಿಯಾದ ವರಲಕ್ಷ್ಮಿ
ಮಾಜಿ ಸಚಿವ ಎಂ.ಬಿ. ಪಾಟೀಲ್ ಈ ಕುರಿತು ಟ್ವೀಟ್ ಮಾಡಿದ್ದು, “ನಮ್ಮೆಲ್ಲರ ಪ್ರೀತಿ ಅಪ್ಪು ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಇದೇ ಮಾರ್ಚ್ 17ರಂದು ಬಿಡುಗಡೆ ಆಗುತ್ತಿದೆ. ಅಂದು ಪುನೀತ್ ಅವರ ಜನ್ಮದಿನ ಕೂಡ. ಈ ಚಿತ್ರವನ್ನು ನೋಡಲು ರಾಜ್ಯವೇ ಕಾತುರದಿಂದ ಕಾಯುತ್ತಿದೆ. ಈ ಚಿತ್ರಕ್ಕೆ ಟ್ಯಾಕ್ಸ್ ಫ್ರಿ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ದುನಿಯಾ ವಿಜಯ್ ನಟನೆಯ ತೆಲುಗು ಸಿನಿಮಾದ ಫಸ್ಟ್ ಲುಕ್ ರಿಲೀಸ್ : ಯಾರದು ಪ್ರತಾಪ್ ರೆಡ್ಡಿ?
ಕೆಲ ಕನ್ನಡ ಪರ ಸಂಘಟನೆಗಳು ಕೂಡ ಜೇಮ್ಸ್ ಚಿತ್ರಕ್ಕೆ ತೆರಿಗೆ ವಿಧಿಸಬೇಡಿ ಎಂದು ಕೇಳಿದ್ದವು. ಅದಕ್ಕೆ ಕಾರಣ ಪರಭಾಷಾ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ಗೆ ತೆರೆಗೆ ಮುಕ್ತ ಮಾಡಿದ್ದರ ಹಿನ್ನೆಲೆಯಿತ್ತು. ಹೀಗಾಗಿ ಸೋಷಿಯಲ್ ಮೀಡಿಯಾ ಮೂಲಕವೇ ಕನ್ನಡ ಚಿತ್ರಗಳಿಗೆ ತೆರಿಗೆ ವಿಧಿಸಿ, ಅನ್ಯ ಭಾಷಾ ಚಿತ್ರಗಳಿಗೆ ತೆರಿಗೆ ವಿನಾಯತಿ ನೀಡುವುದು ಸರಿಯಲ್ಲ ಎಂದು ಬರೆದುಕೊಂಡಿದ್ದವು. ಕೆಲಸವು ಟ್ವೀಟರ್ ಅಭಿಯಾನವನ್ನೇ ಮಾಡಿದ್ದರು. ಇದೀಗ ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯತಿ ಕೊಡಿ ಎಂಬ ಕೂಗು ಎದ್ದಿದೆ. ಇದನ್ನೂ ಓದಿ : ಐದು ಮಕ್ಕಳಿಗೆ ‘ಪುನೀತ್ ರಾಜಕುಮಾರ್’ ಅಂತ ನಾಮಕರಣ ಮಾಡಿದ ನಟಿ ತಾರಾ
ನಾಳೆ ವಿಶ್ವದಾದ್ಯಂತ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ರಿಲೀಸ್ ಆಗುತ್ತಿದೆ. ಸಾವಿರಾರು ಚಿತ್ರಮಂದಿರಗಳಲ್ಲಿ ಜೇಮ್ಸ್ ಪ್ರದರ್ಶನ ಕಾಣುತ್ತಿರುವ ಈ ಸಂದರ್ಭದಲ್ಲಿ ಟ್ಯಾಕ್ಸ್ ಮತ್ತಿತರ ವಿಚಾರಗಳು ಮುನ್ನೆಲೆಗೆ ಬಂದಿವೆ.