ಪರ್ಷಿಯನ್ ಆಹಾರ ಪರಿಮಳಯುಕ್ತ ರಸಭರಿತವಾದ ಖಾದ್ಯಗಳಿಗೇ ಫೇಮಸ್. ಇಲ್ಲಿನ ಪ್ರಸಿದ್ಧ ಪಾಕಪದ್ಧತಿ ಅನೇಕ ಬ್ರೆಡ್‌ಗಳೊಂದಿಗೆ ಸವಿಯಬಹುದು. ಅದರಲ್ಲಿ ಒಂದು ಮುಖ್ಯ ರೆಸಿಪಿ ಇರಾನಿ ಚಿಕನ್ ಕಡೈ. ಇದು ಬೇಯಿಸಿದ ಭಾರತೀಯ ಫ್ಲ್ಯಾಟ್ ಬ್ರೆಡ್‌ನೊಂದಿಗೆ ಸವಿಯಲು ಅದ್ಭುತ ಎನಿಸುತ್ತದೆ. ನಾವಿಂದು ಇರಾನಿ ಚಿಕನ್ ಕಡೈ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಚಿಕನ್ ತುಂಡುಗಳು – 500 ಗ್ರಾಂ
ಎಣ್ಣೆ – ಕಾಲು ಕಪ್
ಬೆಣ್ಣೆ/ತುಪ್ಪ – 4 ಟೀಸ್ಪೂನ್
ತೆಳ್ಳಗೆ ಹೆಚ್ಚಿದ ಈರುಳ್ಳಿ – 2
ತೆಳ್ಳಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 3
ಹೆಚ್ಚಿದ ಟೊಮೆಟೋ – 2
ಚಿಲ್ಲಿ ಫ್ಲೇಕ್ಸ್ – 2 ಟೀಸ್ಪೂನ್
ಶುಂಠಿ ಪೇಸ್ಟ್ – 1 ಟೀಸ್ಪೂನ್
ಕೊತ್ತಂಬರಿ ಬೀಜ – 1 ಟೀಸ್ಪೂನ್
ಕಾಳು ಮೆಣಸು – 1 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಫ್ರೆಶ್ ಕ್ರೀಂ – 2 ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ರಾಜಸ್ಥಾನದ ರಾಯಲ್ ಟೇಸ್ಟ್ – ಜೋಧಪುರಿ ಧುವಾನ್ ಮಾಸ್ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಕಡಾಯಿಯಲ್ಲಿ ಎಣ್ಣೆ ಮತ್ತು ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ತೊಳೆದು ಒಣಗಿಸಿದ ಚಿಕನ್ ತುಂಡುಗಳನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
* ಅದಕ್ಕೆ ಹಸಿರು ಮೆಣಸಿನಕಾಯಿ, ಈರುಳ್ಳಿ ಮತ್ತು ಟೊಮೆಟೋಗಳನ್ನು ಸೇರಿಸಿ ಟಾಸ್ ಮಾಡಿ.
* ಈ ನಡುವೆ ಮಿಕ್ಸರ್ ಜಾರ್‌ಗೆ ಜೀರಿಗೆ, ಕರಿಮೆಣಸು ಮತ್ತು ಕೊತ್ತಂಬರಿ ಬೀಜವನ್ನು ಹಾಕಿ ಪುಡಿಮಾಡಿಕೊಳ್ಳಿ.
* ಈಗ ಚಿಕನ್‌ಗೆ ಪುಡಿ ಮಾಡಿದ ಮಸಾಲೆ ಸೇರಿಸಿ ಚೆನ್ನಾಗಿ ಲೇಪಿಸಿಕೊಳ್ಳಿ.
* ಮಿಶ್ರಣಕ್ಕೆ ಉಪ್ಪು ಸೇರಿಸಿ, ಪ್ಯಾನ್ ಅನ್ನು ಮುಚ್ಚಳದಿಂದ ಮುಚ್ಚಿ 15 ನಿಮಿಷಗಳ ಕಾಲ ಬೇಯಲು ಬಿಡಿ.
* ನಂತರ ಮುಚ್ಚಳವನ್ನು ತೆಗೆದು ಫ್ರೆಶ್ ಕ್ರೀಂ ಸೇರಿಸಿ ಮಿಶ್ರಣ ಮಾಡಿ.
* ಬಳಿಕ ಉರಿಯನ್ನು ಆಫ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
* ಇದೀಗ ಟೇಸ್ಟಿ ಇರಾನಿ ಚಿಕನ್ ಕಡೈ ಸಿದ್ಧವಾಗಿದ್ದು, ನಿಮ್ಮ ಆಯ್ಕೆಯ ಯಾವುದೇ ಬ್ರೆಡ್ ಅಥವಾ ರುಮಾಲಿ ರೊಟ್ಟಿ ಜೊತೆ ಸವಿಯಿರಿ. ಇದನ್ನೂ ಓದಿ: ವೀಕೆಂಡ್‌ನಲ್ಲಿ ಮಾಡಿ ಕೊಲ್ಹಾಪುರಿ ಪಂದ್ರಾ ರಸ