ದಕ್ಷಿಣ ಭಾರತದ ಫೇಮಸ್ ಉಪಹಾರಗಳಲ್ಲೊಂದು ಇಡ್ಲಿ. ರವೆ, ಅಕ್ಕಿ ಬಳಸಿ ಮಾಡುವ ಇಡ್ಲಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಬೆಳಗ್ಗೆ ಉಪಹಾರವಾಗಿ ಇಡ್ಲಿ ಮಾಡಬೇಕೆಂದರೆ ರಾತ್ರಿಯಿಡೀ ಹಿಟ್ಟಿಗೆ ವಿಶ್ರಾಂತಿ ನೀಡುವ ಅಗತ್ಯವಿರುತ್ತದೆ. ಆದರೆ ನಾವಿಂದು ಮಂಡಕ್ಕಿಯಿಂದ ಸರಳವಾಗಿ ಹಾಗೂ ಬೇಗನೆ ಇಡ್ಲಿ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡುತ್ತೇವೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಮಂಡಕ್ಕಿ – ಒಂದೂವರೆ ಕಪ್
ರವೆ – 1 ಕಪ್
ಉಪ್ಪು – ಅರ್ಧ ಟೀಸ್ಪೂನ್
ಮೊಸರು – 1 ಕಪ್
ನೀರು – ಅಗತ್ಯವಿರುವಂತೆ
ಇನೋ – ಅರ್ಧ ಟೀಸ್ಪೂನ್ ಇದನ್ನೂ ಓದಿ: ಹೀಗೆ ಮಾಡಿ ತೆಂಗಿನಕಾಯಿ ದೋಸೆ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಮಂಡಕ್ಕಿಯನ್ನು ನೀರಿನಿಂದ ತೊಳೆಯಿರಿ.
* ನೀರನ್ನು ಹಿಂಡಿ ಮಂಡಕ್ಕಿಯನ್ನು ಮಿಕ್ಸರ್ ಜಾರ್‌ಗೆ ವರ್ಗಾಯಿಸಿ, ಅರ್ಧ ಕಪ್ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.
* ಈಗ ಮಂಡಕ್ಕಿ ಹಿಟ್ಟನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ, ಅದಕ್ಕೆ ರವೆ, ಉಪ್ಪು, ಮೊಸರು ಹಾಗೂ ಇಡ್ಲಿ ಹಿಟ್ಟಿನಂತೆ ದಪ್ಪನೆಯ ಹದ ಬರುವಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈಗ 20 ನಿಮಿಷಗಳ ಕಾಲ ಹಿಟ್ಟಿಗೆ ವಿಶ್ರಾಂತಿ ನೀಡಿ.
* 20 ನಿಮಿಷಗಳ ಬಳಿಕ ಅದಕ್ಕೆ ಅರ್ಧ ಟೀಸ್ಪೂನ್ ಇನೋ ಹಾಕಿ, ಹಿಟ್ಟು ನೊರೆ ಬರುವವರೆಗೆ ನಿಧಾನವಾಗಿ ಮಿಶ್ರಣ ಮಾಡಿ.
* ಈಗ ಇಡ್ಲಿ ತಟ್ಟೆಗಳಿಗೆ ಎಣ್ಣೆ ಸವರಿ, ಹಿಟ್ಟನ್ನು ತುಂಬಿ.
* ಅವುಗಳನ್ನು ಸ್ಟೀಮರ್‌ಗಳಲ್ಲಿ ಇರಿಸಿ, 15 ನಿಮಿಷಗಳ ಕಾಲ ಬೇಯಿಸಿ.
* ಇದೀಗ ಮಂಡಕ್ಕಿ ಇಡ್ಲಿ ತಯಾರಾಗಿದ್ದು, ಇದನ್ನು ನಿಮ್ಮಿಷ್ಟದ ಚಟ್ನಿ ಅಥವಾ ಸಾಂಬರ್‌ನೊಂದಿಗೆ ಆನಂದಿಸಿ. ಇದನ್ನೂ ಓದಿ: ಕಾಜು ಬರ್ಫಿ ಮಾಡುವ ಸುಲಭ ವಿಧಾನ