ಈ ಸೀಸನ್‌ನಲ್ಲಿ ಮಾಡಿ ಪೇರಳೆ ಹಣ್ಣಿನ ಚಟ್ನಿ

Public TV
2 Min Read
Guava Chutney 2

ಪೇರಳೆ ಹಣ್ಣಿನ ಚಟ್ನಿ ಸಿಹಿ, ಕಟುವಾದ ಮತ್ತು ಮಸಾಲೆಯುಕ್ತ ಪರಿಪೂರ್ಣ ರೆಸಿಪಿ. ಯಾವುದೇ ಆಹಾರದೊಂದಿಗೆ ಇದನ್ನು ಸವಿಯಬಹುದು. ಇದರಲ್ಲಿ ಪೌಷ್ಟಿಕಾಂಶ ಹೇರಳವಾಗಿದ್ದು, ಬಜ್ಜಿ, ಪಕೋಡಾಗಳೊಂದಿಗೆ ಸವಿದರೆ ಸಖತ್ ಆಗಿರುತ್ತದೆ. ಇದನ್ನು ಡಿಪ್ಪಿಂಗ್ ಸಾಸ್, ಸ್ಪ್ರೆಡ್ ಅಥವಾ ಸೈಡ್ ಡಿಶ್ ಆಗಿಯೂ ಬಳಸಬಹುದು. ಪೇರಳೆ ಚಟ್ನಿ ತಯಾರಿಸಲು ಈ ಸೀಸನ್ ಸೂಕ್ತವಾಗಿದೆ. ನೀವು ಕೂಡಾ ಈ ರೆಸಿಪಿ ಟ್ರೈ ಮಾಡಿ ನೋಡಿ.

Guava Chutney

ಬೇಕಾಗುವ ಪದಾರ್ಥಗಳು:
ಮಾಗಿದ ಪೇರಳೆ ಹಣ್ಣು – 4-5
ಸಕ್ಕರೆ – 1 ಕಪ್
ಉಪ್ಪು – ಅರ್ಧ ಟೀಸ್ಪೂನ್
ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್
ತುರಿದ ಶುಂಠಿ – 1 ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಸಾಸಿವೆ – ಅರ್ಧ ಟೀಸ್ಪೂನ್
ಅರಿಶಿನ ಪುಡಿ – ಕಾಲು ಟೀಸ್ಪೂನ್
ಹಿಂಗ್ – ಚಿಟಿಕೆ
ಎಣ್ಣೆ – 1 ಟೀಸ್ಪೂನ್
ನೀರು – ಕಾಲು ಕಪ್ ಇದನ್ನೂ ಓದಿ: ಗಂಟಲು ಕೆರೆತಕ್ಕೆ ಸವಿಯಿರಿ ಬೆಚ್ಚಗಿನ ಪುದೀನಾ ಟೀ

Guava Chutney 1

ಮಾಡುವ ವಿಧಾನ:
* ಮೊದಲಿಗೆ ಪೇರಳೆ ಹಣ್ಣುಗಳನ್ನು ತೊಳೆದು, ಸಿಪ್ಪೆ ತೆಗೆದು, ಬೀಜಗಳನ್ನು ತೆಗೆದುಹಾಕಿ ಮತ್ತು ಚೌಕಾಕಾರದ ತುಂಡುಗಳಾಗಿ ಕತ್ತರಿಸಿ.
* ಒಂದು ಪ್ಯಾನ್‌ಗೆ ನೀರು ಹಾಕಿ, ಅದರಲ್ಲಿ ಪೇರಳೆ ತುಂಡುಗಳನ್ನು ಹಾಕಿ ಮೃದು ಹಾಗೂ ಸುಲಭವಾಗಿ ಮ್ಯಾಶ್ ಆಗುವವರೆಗೆ ಬೇಯಿಸಿಕೊಳ್ಳಿ.
* ಈಗ ಮಸಾಲೆ ಮಿಶ್ರಣವನ್ನು ತಯಾರಿಸಲು ಇನ್ನೊಂದು ಪ್ಯಾನ್‌ನಲ್ಲಿ ಸಾಸಿವೆ, ಜೀರಿಗೆ ಮತ್ತು ಮೆಂತ್ಯವನ್ನು ಪರಿಮಳ ಬರುವವರೆಗೆ ಹುರಿದು ತಣ್ಣಗಾಗಿಸಿ ನಂತರ ಒರಟಾಗಿ ಪುಡಿ ಮಾಡಿಕೊಳ್ಳಿ.
* ಚಿಲ್ಲಿ ಫ್ಲೇಕ್ಸ್ ಅನ್ನು ಸ್ವಲ್ಪ ಎಣ್ಣೆಯಲ್ಲಿ ಸುವಾಸನೆ ಬರುವ ತನಕ ಹುರಿಯಿರಿ.
* ನಂತರ ಅದೇ ಬಾಣಲೆಯಲ್ಲಿ ಕತ್ತರಿಸಿದ ಈರುಳ್ಳಿಯನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
* ಕೊಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಬೇಯಿಸಿ.
* ಈಗ ಈರುಳ್ಳಿ, ಬೆಳ್ಳುಳಿ, ಶುಂಠಿ ಮಿಶ್ರಣಕ್ಕೆ ಬೇಯಿಸಿದ ಪೇರಳೆಯನ್ನು ಸೇರಿಸಿ.
* ಅದಕ್ಕೆ ಮಸಾಲೆ ಮಿಶ್ರಣ, ಸಕ್ಕರೆ, ವಿನೆಗರ್ ಮತ್ತು ಉಪ್ಪನ್ನು ಬೆರೆಸಿ. ಚಟ್ನಿ ಅಪೇಕ್ಷಿತ ಸ್ಥಿರತೆ ಬರುವವರೆಗೆ ಬೇಯಿಸಿಕೊಳ್ಳಿ.
* ನಂತರ ಉರಿಯನ್ನು ಆಫ್ ಮಾಡಿ, ಚಟ್ನಿಯನ್ನು ಆರಲು ಬಿಡಿ. ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ಚಟ್ನಿಯನ್ನು ಸಂಗ್ರಹಿಸಿ.
* ಇದನ್ನು ಫ್ರಿಜ್‌ನಲ್ಲಿಟ್ಟರೆ ಹಲವು ವಾರಗಳವರೆಗೆ ಬಳಸಬಹುದು. ಇದನ್ನೂ ಓದಿ: 15 ನಿಮಿಷದಲ್ಲಿ ಮಾಡೋ ಚಿಕನ್ ನೂಡಲ್ ಸೂಪ್ ರೆಸಿಪಿ

Share This Article