ಮಂಗಳೂರು: ನನ್ನ ಮೈತ್ರಿ ಯೋಜನೆಗೆ ಮೆನ್‌ಸ್ಟ್ರುಯಲ್ ಕಪ್ (Menstrual Cup) ಬಳಸುವ ಹೆಣ್ಣುಮಕ್ಕಳೇ ರಾಯಭಾರಿಗಳು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದರು.
ಮಂಗಳೂರಿನಲ್ಲಿ (Mangaluru) ಸೋಮವಾರ ನನ್ನ ಮೈತ್ರಿ ಮೆನ್‌ಸ್ಟ್ರುಯಲ್ ಕಪ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಸ್ಯಾನಿಟರಿ ನ್ಯಾಪ್ಕಿನ್ ಬದಲು ಮೆನ್‌ಸ್ಟ್ರುಯಲ್ ಕಪ್ ಬಳಕೆ ಬಗ್ಗೆ ಬಹುತೇಕ ಹೆಣ್ಣುಮಕ್ಕಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅಲ್ಲದೇ ಈ ಕಪ್‌ಗಳು ಪರಿಸರ ಸ್ನೇಹಿಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
Advertisement
ಈ ಮೊದಲು ಶುಚಿ ಯೋಜನೆಯಡಿ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ವಿತರಿಸಲಾಗುತಿತ್ತು. ನ್ಯಾಪ್ಕಿನ್‌ಗಳ ಡಿಸ್ಪೋಸಲ್ ಹೆಣ್ಣು ಮಕ್ಕಳಿಗೆ ದೊಡ್ಡ ಸಮಸ್ಯೆಯಾಗಿತ್ತು. ಈ ಬಗ್ಗೆ ಹೆಣ್ಣುಮಕ್ಕಳು ತುಂಬಾ ಮುಜುಗರ ಪಟ್ಟುಕೊಳ್ಳುತ್ತಿದ್ದರು. ಮುಟ್ಟಿನ ವಿಚಾರದಲ್ಲಿ ಮಾತನಾಡಲು ಯಾರೂ ಹಿಂಜರಿಯುವ ಅಗತ್ಯವಿಲ್ಲ. ಇದೊಂದು ನೈಸರ್ಗಿಕ ಕ್ರಿಯೆ ಅಷ್ಟೇ. ನ್ಯಾಪ್ಕಿನ್ ಬದಲು ಮೆನ್‌ಸ್ಟ್ರುಯಲ್ ಕಪ್‌ಗಳನ್ನು 5-6 ವರ್ಷಗಳ ವರೆಗೆ ಮರುಬಳಕೆ ಮಾಡಬಹುದು. ಹೀಗಾಗಿ ಹೆಣ್ಣುಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
Advertisement
ಈಗಾಗಲೇ ಚಾಮರಾಜನಗರದಲ್ಲಿ 300 ಹೆಣ್ಣುಮಕ್ಕಳಿಗೆ ಮೆನ್‌ಸ್ಟ್ರುಯಲ್ ಕಪ್‌ಗಳನ್ನು ನೀಡಿ, ಅಭಿಪ್ರಾಯ ಸಂಗ್ರಹಿಸಲಾಗಿದೆ. ನ್ಯಾಪ್ಕಿನ್ ಬದಲು ಮೈತ್ರಿ ಕಪ್ ಬಳಕೆಗೆ ಹೆಣ್ಣುಮಕ್ಕಳಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿ ಪ್ರಯೋಗಿಕವಾಗಿ ತೆಗೆದುಕೊಳ್ಳಲಾಗಿದೆ. ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಎರಡು ಜಿಲ್ಲೆಗಳಿಗೆ 15,000 ಮೆನ್‌ಸ್ಟ್ರುಯಲ್ ಕಪ್‌ಗಳ ವಿತರಣೆಗೆ ಇಂದು ಚಾಲನೆ ನೀಡಿದ್ದೇವೆ. ಈ ಯೋಜನೆ ಯಶಸ್ವಿಯಾಗುವ ವಿಶ್ವಾಸವಿದ್ದು, ರಾಜ್ಯಾದ್ಯಂತ ವಿಸ್ತರಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
Advertisement
ಮುಂದಿನ ತಿಂಗಳಲ್ಲೇ ಶುಚಿ ಯೋಜನೆಗೆ ಚಾಲನೆ:
ಸರ್ಕಾರಿ ಮತ್ತು ಅನುದಾನಿತ ಶಾಲಾ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ವಿತರಿಸುವ ಶುಚಿ ಯೋಜನೆಯನ್ನೂ ಅಕ್ಟೋಬರ್ ತಿಂಗಳಲ್ಲಿ ಚಾಲನೆಗೆ ತರುತ್ತಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ತಿಳಿಸಿದರು.
ಕಳೆದ 3 ವರ್ಷಗಳಿಂದ ಶುಚಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ಬಳಿಕ ಶುಚಿ ಯೋಜನೆಗೆ ಮರು ಚಾಲನೆ ನೀಡಲು ನಿರ್ಧರಿಸಿದೆ. ಪ್ರಸಕ್ತ ಸಾಲಿಗೆ 10 ರಿಂದ 18 ವರ್ಷದ ಹೆಣ್ಣುಮಕ್ಕಳಿಗೆ ನ್ಯಾಪ್ಕಿನ್ ಪ್ಯಾಡ್ ವಿತರಿಸಲು ಅಧಿಕಾರಿಗಳಿಗೆ ಅಧಿಕಾರಕ್ಕೆ ಬಂದ ಆರಂಭದಲ್ಲೇ ನಾನು ಸೂಚಿಸಿದ್ದೆ. 40.50 ಕೋಟಿ ರೂ. ವೆಚ್ಚದಲ್ಲಿ 15 ಕೋಟಿಗೂ ಹೆಚ್ಚು ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಔಷಧಿ ಸರಬರಾಜು ಕಾರ್ಪೋರೇಷನ್ ಮೂಲಕ ಖರೀದಿಸಿ ಹೆಣ್ಣು ಮಕ್ಕಳಿಗೆ ವಿತರಿಸಲು ಯೋಜಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಇದನ್ನೂ ಓದಿ: ‘ಮುಟ್ಟಿ’ನ ಯೋಜನೆಗೆ ‘ಕಾಂತಾರ’ ನಟಿ ಸಪ್ತಮಿ ರಾಯಭಾರಿ
ಅಭಿನಂದಿಸಿದ ಸ್ಪೀಕರ್ ಖಾದರ್:
ನನ್ನ ಮೈತ್ರಿ ಯೋಜನೆಯಡಿ ಮೆನ್‌ಸ್ಟ್ರುಯಲ್ ಕಪ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನ ಸಭಾಧ್ಯಕ್ಷ ಯುಟಿ ಖಾದರ್, ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಹೊಸ ಪ್ರಯೋಗವನ್ನು ಸ್ವಾಗತಿಸಿದರು. ಅಲ್ಲದೇ ಶುಚಿ ಯೋಜನೆಗೆ ಮರು ಚಾಲನೆ ನೀಡುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಪೀಕರ್, ಹೆಣ್ಣುಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಮುಟ್ಟಿನ ನಿರ್ವಹಣೆ ಮುಖ್ಯವಾದದ್ದು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶುಚಿ ಯೋಜನೆಗೆ ಮರುಚಾಲನೆ ನೀಡುತ್ತಿರುವುದು ಉತ್ತಮ ಕಾರ್ಯ ಎಂದರು.
ಭಾರತ ದೇಶ ವಿಶ್ವದಲ್ಲಿ ನಂ.1 ಆಗಬೇಕಾದರೆ ಮೊದಲು ನಮ್ಮ ಬಡ ಜನರಿಗೆ ಬಲ ತುಂಬುವ ಕೆಲಸ ಆಗಬೇಕು. ಶಾಸನ ಸಭೆಗಳಲ್ಲಿ ಶಾಸಕರು, ಪಾರ್ಲಿಮೆಂಟ್‌ನಲ್ಲಿ ಸಂಸದರು, ಕೇಂದ್ರ ರಾಜ್ಯ ಸಚಿವರು ಬಲಿಷ್ಠವಾದರೆ ದೇಶ ವಿಶ್ವದಲ್ಲಿ ನಂ.1 ಆಗಲು ಸಾಧ್ಯವಿಲ್ಲ. ದೇಶದ ವಿದ್ಯಾರ್ಥಿಗಳಿಗೆ ಶಕ್ತಿ ತುಂಬಿ ದುಡಿಯುವ ಯುವಕರನ್ನಾಗಿ ರೂಪಿಸಿದಾಗ ಮಾತ್ರ ದೇಶ ವೇಗವಾಗಿ ಬೆಳೆವಣೆಯತ್ತ ಸಾಗಲಿದೆ ಎಂದರು. ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್ಸ್ ಸೇರಿದಂತೆ ಎಲ್ಲಾ ಗಿಗ್ ಕಾರ್ಮಿಕರಿಗೆ 4 ಲಕ್ಷ ವಿಮೆ ಘೋಷಣೆ
Web Stories