ಬಾಸ್ಮತಿ ರೈಸ್ (Basmati Rice) ಹಾಗೂ ತುಪ್ಪದಿಂದ (Ghee) ತಯಾರಿಸಲಾಗುವ ಗೀರೈಸ್ (Ghee Rice) ದಕ್ಷಿಣ ಭಾರತದ ಒಂದು ಫೇಮಸ್ ಪಾಕ ವಿಧಾನ. ಗೀರೈಸ್ ತುಂಬಾ ರುಚಿಯಾದ ಸ್ವಾದ ನೀಡುತ್ತದಾದರೂ ಇದನ್ನು ಕುರ್ಮ ಅಥವಾ ಗ್ರೇವಿಯೊಂದಿಗೆ ಸವಿದರೆ, ಇದರ ರುಚಿಯನ್ನು ದುಪ್ಪಟ್ಟು ಮಾಡಬಹುದು. ತುಂಬಾ ಸಿಂಪಲ್ ಆಗಿ ಗೀರೈಸ್ ಮಾಡುವ ವಿಧಾನವನ್ನು ನಾವಿಂದು ಹೇಳಿಕೊಡುತ್ತೇವೆ. ರುಚಿಕರ ಗೀರೈಸ್ ಅನ್ನು ಒಮ್ಮೆ ನೀವು ಕೂಡಾ ಮನೆಯಲ್ಲಿ ಮಾಡಿ ಆನಂದಿಸಿ.
Advertisement
ಬೇಕಾಗುವ ಪದಾರ್ಥಗಳು:
ತುಪ್ಪ – 1 ಟೀಸ್ಪೂನ್
ಅರ್ಧಕ್ಕೆ ಕತ್ತರಿಸಿದ ಗೋಡಂಬಿ – 8
ಒಣದ್ರಾಕ್ಷಿ – 2 ಟೀಸ್ಪೂನ್
ಕರಿಬೇವಿನ ಎಲೆ – 1
ದಾಲ್ಚಿನ್ನಿ ಚಕ್ಕೆ – 1 ಇಂಚು
ಏಲಕ್ಕಿ – 2
ಲವಂಗ – 5
Advertisement
Advertisement
ಕಾಳು ಮೆಣಸು – ಅರ್ಧ ಟೀಸ್ಪೂನ್
ಕತ್ತರಿಸಿದ ಈರುಳ್ಳಿ – ಅರ್ಧ
ಸೀಳಿದ ಮೆಣಸಿನಕಾಯಿ – 1
ಬಾಸ್ಮತಿ ಅಕ್ಕಿ – 1 ಕಪ್ (20 ನಿಮಿಷ ನೀರಿನಲ್ಲಿ ನೆನೆಸಿಡಿ)
ನೀರು – 2 ಕಪ್
ನಿಂಬೆ ರಸ – 1 ಟೀಸ್ಪೂನ್
ಉಪ್ಪು – 1 ಟೀಸ್ಪೂನ್ ಇದನ್ನೂ ಓದಿ: ಡಾಬಾ ಸ್ಟೈಲ್‌ನಲ್ಲಿ ಮಾಡಿ ಪನೀರ್ ಭುರ್ಜಿ ಗ್ರೇವಿ
Advertisement
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ಗೋಡಂಬಿ ಮತ್ತು ಒಣದ್ರಾಕ್ಷಿ ಹಾಕಿ ಹುರಿಯಿರಿ.
* ಗೋಡಂಬಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬಂದ ತಕ್ಷಣ ತುಪ್ಪದಿಂದ ತೆಗೆದು ಪಕ್ಕಕ್ಕಿರಿಸಿ.
* ಈಗ ಅದೇ ಕಡಾಯಿಯಲ್ಲಿ ಕರಿ ಬೇವಿನ ಎಲೆ, ದಾಲ್ಚಿನ್ನಿ ಚಕ್ಕೆ, ಏಲಕ್ಕಿ, ಲವಂಗ ಮತ್ತು ಕಾಳು ಮೆಣಸು ಹಾಕಿ.
* ಈರುಳ್ಳಿ, ಮೆಣಸಿನಕಾಯಿ ಸೇರಿಸಿ, ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
* ಈಗ ನೆನೆಸಿಟ್ಟ ಬಾಸ್ಮತಿ ಅಕ್ಕಿ ಹಾಕಿ, 1 ನಿಮಿಷ ಹುರಿಯಿರಿ.
* ಬಳಿಕ 2 ಕಪ್ ನೀರು, 1 ಟೀಸ್ಪೂನ್ ನಿಂಬೆ ರಸ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ, ಕುದಿಸಿ.
* ಕಡಾಯಿಯನ್ನು ಮುಚ್ಚಿ, ಮಧ್ಯಮ ಉರಿಯಲ್ಲಿ 20 ನಿಮಿಷಗಳ ಕಾಲ ಬೇಯಿಸಿ.
* ಈಗ ಹುರಿದ ಗೋಡಂಬಿ ಹಾಗೂ ದ್ರಾಕ್ಷಿಯನ್ನು ಹಾಕಿ ಮಿಕ್ಸ್ ಮಾಡಿ.
* ಇದೀಗ ಗೀರೈಸ್ ತಯಾರಾಗಿದ್ದು, ಕುರ್ಮಾದೊಂದಿಗೆ ಸವಿಯಿರಿ. ಇದನ್ನೂ ಓದಿ: ಗೋಡಂಬಿ ಬಳಸಿ ಮಾಡಿ ರುಚಿಯಾದ ಚಿಕನ್ ಗ್ರೇವಿ