ಹಂದಿ ಮಾಂಸ ಪ್ರಿಯರಿಗಾಗಿ ನಾವಿಂದು ಸಿಂಪಲ್ ಹಾಗೂ ವಿದೇಶಿ ಅಡುಗೆಯೊಂದನ್ನು ಹೇಳಿಕೊಡಲಿದ್ದೇವೆ. ಕೇವಲ 4 ಪದಾರ್ಥ ಬಳಸಿ ಕ್ವಿಕ್ ಆಗಿ ಈ ಅಡುಗೆಯನ್ನು ಮಾಡಬಹುದು. ಅಡುಗೆ ಮನೆಯಲ್ಲಿ ಯಾವಾಗಲೂ ಹೊಸ ಹೊಸ ಪ್ರಯೋಗ ಮಾಡಲು ಬಯಸುವವರು ಫ್ರೆಂಚ್ ಆನಿಯನ್ ಪೋರ್ಕ್ ಚಾಪ್ಸ್ ಖಂಡಿತಾ ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಮೂಳೆಗಳಿಲ್ಲದ ಹಂದಿ ಚಾಪ್ಸ್ – 4
ಫ್ರೆಂಚ್ ಆನಿಯನ್ ಸೂಪ್ ಮಿಕ್ಸ್ – 2 ಪ್ಯಾಕೆಟ್
ಬ್ರೆಡ್ ಕ್ರಂಬ್ಸ್ – ಅರ್ಧ ಕಪ್
ಮೊಟ್ಟೆ – 2 ಇದನ್ನೂ ಓದಿ: ಹಸಿವನ್ನು ತಣಿಸಲು ಒನ್ ಪಾಟ್ ಗಾರ್ಲಿಕ್ ಚಿಕನ್ ಪಾಸ್ತಾ ಟ್ರೈ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಓವನ್ ಅನ್ನು 200 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
* 2 ತಟ್ಟೆಗಳನ್ನು ತೆಗೆದುಕೊಂಡು ಒಂದರಲ್ಲಿ ಮೊಟ್ಟೆಗಳನ್ನು ಒಡೆದು ಅದನ್ನು ಚೆನ್ನಾಗಿ ಬೀಟ್ ಮಾಡಿಕೊಳ್ಳಿ.
* ಇನ್ನೊಂದು ಪ್ಯಾನ್‌ನಲ್ಲಿ ಬ್ರೆಡ್ ಕ್ರಂಬ್ಸ್ ಹಾಗೂ ಸೂಪ್ ಮಿಕ್ಸ್ಅನ್ನು ಸೇರಿಸಿ ಮಿಶ್ರಣ ಮಾಡಿ.
* ಈಗ ಹಂದಿ ಚಾಪ್ಸ್ ಅನ್ನು ಮೊದಲು ಮೊಟ್ಟೆಯ ಮಿಶ್ರಣದಲ್ಲಿ ಚೆನ್ನಾಗಿ ಅದ್ದಿ, ಬಳಿಕ ಬ್ರೆಡ್ ಕ್ರಂಬ್ಸ್ ಹಾಗೂ ಸೂಪ್ ಮಿಕ್ಸ್ ಮಿಶ್ರಣದಲ್ಲಿ ಹಾಕಿ ಚೆನ್ನಾಗಿ ಕೋಟ್ ಮಾಡಿಕೊಳ್ಳಿ.
* ಬಳಿಕ ಅವುಗಳನ್ನು ಬೇಕಿಂಗ್ ಶೀಟ್‌ನಲ್ಲಿ ಇರಿಸಿ, 20 ನಿಮಿಷಗಳ ಕಾಲ ಓವನ್ ಅಲ್ಲಿ ಬೇಯಿಸಿ. ನಡುವೆ ಒಂದು ಬಾರಿ ತಿರುವಿ ಹಾಕಿ ಬೇಯಿಸಿಕೊಳ್ಳಿ.
* ಇದೀಗ ಸಿಂಪಲ್ ಹಾಗೂ ಕ್ವಿಕ್ ಫ್ರೆಂಚ್ ಆನಿಯನ್ ಪೋರ್ಕ್ ಚಾಪ್ಸ್ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಚಿಕನ್ ಲಿವರ್ ಪೆಪ್ಪರ್ ಫ್ರೈ – ಲಿವರ್ ಪ್ರಿಯರು ಟ್ರೈ ಮಾಡ್ಲೇಬೇಕಾದ ರೆಸಿಪಿ
Advertisement
Web Stories