ಪ್ರೇಮಿಗಳ ದಿನದ ಸೆಲೆಬ್ರೇಷನ್‌ಗೆ ನೀವು ನಿಮ್ಮ ಪ್ರೀತಿ ಪಾತ್ರರನ್ನು ಖುಷಿಪಡಿಸಲು ಏನಾದರೂ ಸ್ಪೆಷಲ್ ರೆಸಿಪಿ ಮಾಡಬೇಕಲ್ವಾ? ನಾವಿಂದು ವ್ಯಾಲೆಂಟೈನ್ಸ್ ಡೇಗೆ ಒಂದು ಸ್ಪೆಷಲ್ ರೆಸಿಪಿ ಹೇಳಿಕೊಡುತ್ತೇವೆ. ಎಗ್‌ಲೆಸ್ ಬ್ರೌನಿ ಕಪ್‌ಕೇಕ್ (Eggless Brownie Cupcake) ಅನ್ನು ನೀವೂ ಮಾಡಿ, ನಿಮ್ಮ ಪ್ರೀತಿಪಾತ್ರರಿಗೆ ನೀಡಿ ಅವರನ್ನು ಇಂಪ್ರೆಸ್ ಮಾಡಿ.
ಬೇಕಾಗುವ ಪದಾರ್ಥಗಳು:
ಕೋಕೋ ಪೌಡರ್ – ಅರ್ಧ ಕಪ್
ಬಿಸಿ ನೀರು – ಮುಕ್ಕಾಲು ಕಪ್
ಬ್ರೌನ್ ಶುಗರ್ – 1 ಕಪ್
ಮಾಗಿದ ಬಾಳೆಹಣ್ಣು – 1
ತೆಂಗಿನ ಎಣ್ಣೆ – ಅರ್ಧ ಕಪ್
ವೆನಿಲ್ಲಾ ಸಾರ – 1 ಟೀಸ್ಪೂನ್
ಮೈದಾ ಹಿಟ್ಟು – ಒಂದೂವರೆ ಕಪ್
ಅಡುಗೆ ಸೋಡಾ – ಅರ್ಧ ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್ ಇದನ್ನೂ ಓದಿ: ವಿಶೇಷ ದಿನಗಳಿಗಾಗಿ ಸಿಹಿ ಸಿಹಿ ಮಲಾಯಿ ಲಡ್ಡು ರೆಸಿಪಿ
ಮಾಡುವ ವಿಧಾನ:
* ಮೊದಲಿಗೆ ಓವನ್ ಅನ್ನು 180 ಡಿಗ್ರಿ ಸೆಲ್ಸಿಯಸ್‌ನಲ್ಲಿ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
* ಒಂದು ಬಟ್ಟಲಿಗೆ ಕೋಕೋ ಪೌಡರ್ ಮತ್ತು ಬೆಚ್ಚಗಿನ ನೀರನ್ನು ಸೇರಿಸಿ ಚೆನ್ನಾಗಿ ಬೆರೆಸಿ.
* ನಂತರ ಸಕ್ಕರೆ ಸೇರಿಸಿ, ಅದು ಕರಗುವವರೆಗೆ ಕಲಕಿ.
* ಒಂದು ಫೋರ್ಕ್‌ನ ಸಹಾಯದಿಂದ ಮಾಗಿದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿಕೊಳ್ಳಿ. ನಂತರ ಅದನ್ನು ಕೋಕೋ ಪೌಡರ್ ಹಾಗೂ ಸಕ್ಕರೆಯ ಮಿಶ್ರಣಕ್ಕೆ ಸೇರಿಸಿ.
* ಅದಕ್ಕೆ ತೆಂಗಿನ ಎಣ್ಣೆ ಹಾಗೂ ವೆನಿಲ್ಲಾ ಸಾರವನ್ನು ಸೇರಿಸಿ, ಚೆನ್ನಾಗಿ ಮಿಶ್ರಣವಾಗುವವರೆಗೆ ಮಿಕ್ಸ್ ಮಾಡಿ.
* ಈಗ ಮೈದಾ ಹಿಟ್ಟು, ಅಡುಗೆ ಸೋಡಾ ಹಾಗೂ ಉಪ್ಪು ಸೇರಿಸಿ, ಎಲ್ಲವನ್ನೂ ಸ್ವಲ್ಪ ಮಿಶ್ರಣ ಮಾಡಿ.
* ಈಗ ಕೇಕ್ ತಯಾರಿಸುವ ಲೈನರ್ ಅಥವಾ ಮೌಲ್ಡ್‌ಗಳನ್ನು ತೆಗೆದುಕೊಂಡು, ಅದರಲ್ಲಿ ಹಿಟ್ಟನ್ನು ಸುರಿಯಿರಿ.
* ಬೇಕಿಂಗ್ ಪಾತ್ರೆಯಲ್ಲಿ ಅವುಗಳನ್ನು ಇಟ್ಟು, ಓವನ್‌ನಲ್ಲಿ ಇರಿಸಿ.
* 12-15 ನಿಮಿಷಗಳ ನಂತರ ಕಪ್‌ಕೇಕ್‌ಗಳು ಬೆಂದಿದೆಯೇ ಎಂದು ಪರಿಶೀಲಿಸಿ.
* ಬಳಿಕ ಕೇಕ್‌ಗಳನ್ನು ಓವನ್‌ನಿಂದ ಹೊರ ತೆಗೆದು, 10 ನಿಮಿಷ ತಣ್ಣಗಾಗಲು ಬಿಡಿ.
* ಇದೀಗ ಎಗ್‌ಲೆಸ್ ಬ್ರೌನಿ ಕಪ್‌ಕೇಕ್ ತಯಾರಾಗಿದ್ದು, ನಿಮ್ಮ ಪ್ರೀತಿಪಾತ್ರರಿಗೆ ನೀಡಿ. ಇದನ್ನೂ ಓದಿ: ಗರಿಗರಿಯಾದ ಗೋಬಿ 65 ಮಾಡಿ ನೋಡಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k