ಇತ್ತೀಚೆಗೆ ಹೆಚ್ಚಿನ ಮಕ್ಕಳು ಪಾಸ್ತಾ, ನೂಡಲ್ಸ್ಗಳಂತಹ ತಿಂಗಿಗಳಿಗೆ ಮಾರುಹೋಗಿದ್ದಾರೆ. ಪ್ರತಿ ಬಾರಿ ಮಕ್ಕಳು ಹಠ ಹಿಡಿದಾಗ ಅವರನ್ನು ರೆಸ್ಟೊರೆಂಟ್ಗಳಿಗೆ ಕರೆದುಕೊಂಡು ಹೋಗುವುದು ಎಲ್ಲಾ ಪೋಷಕರಿಗೂ ಕಿರಿಕಿರಿ ಎನಿಸುತ್ತದೆ. ನಾವಿಂದು ಒಂದು ಸಿಂಪಲ್ ಹಾಗೂ ಫಟಾಫಟ್ ಅಂತ ಮನೆಯಲ್ಲೇ ಮಾಡಬಹುದಾದ ಪಾಸ್ತಾ ರೆಸಿಪಿ ಹೇಳಿಕೊಡುತ್ತೇವೆ. ನೀವು ಪಾಸ್ತಾ ಬದಲು ಇಲ್ಲಿ ಮ್ಯಾಕ್ರೋನಿ ಅಥವಾ ನೂಡಲ್ಸ್ ಅನ್ನು ಕೂಡಾ ಬಳಸಬಹುದು. ಮಕ್ಕಳು ಇಷ್ಟಪಡುವ ಎಗ್ ಪಾಸ್ತಾ (Egg Pasta) ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಪಾಸ್ತಾ – 1 ಕಪ್
ಎಣ್ಣೆ – 1 ಟೀಸ್ಪೂನ್
ಹೆಚ್ಚಿದ ಬೆಳ್ಳುಳ್ಳಿ – 2
ರೆಡ್ ಚಿಲ್ಲಿ ಫ್ಲೇಕ್ಸ್ – ಅರ್ಧ ಟೀಸ್ಪೂನ್
ಮೊಟ್ಟೆ – 2
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಸಖತ್ ಟೇಸ್ಟಿ ಬೆಳ್ಳುಳ್ಳಿ ಚಿಕನ್ ರೈಸ್ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ಸಾಕಷ್ಟು ನೀರು ಹಾಕಿ, ಅದನ್ನು ಕುದಿಯಲು ಬಿಡಿ.
* ನೀರು ಕುದಿ ಬಂದ ತಕ್ಷಣ ಅದಕ್ಕೆ ಪಾಸ್ತಾ ಹಾಕಿ, ಸ್ವಲ್ಪ ಉಪ್ಪು ಸೇರಿಸಿ, ಬೇಯಲು ಬಿಡಿ.
* ಪಾಸ್ತಾ ಬೆಂದ ಬಳಿಕ ಅದನ್ನು ಸ್ಟ್ರೈನರ್ಗೆ ಹಾಕಿ, ನೀರನ್ನು ಹರಿದು ಹೋಗಲು ಬಿಡಿ.
* ಈಗ ಒಂದು ಪ್ಯಾನ್ ತೆಗೆದುಕೊಂಡು, ಅದರಲ್ಲಿ ಎಣ್ಣೆ ಬಿಸಿ ಮಾಡಿ.
* ಅದಕ್ಕೆ ಬೆಳ್ಳುಳ್ಳಿ ಸೆರಿಸಿ, ಬಣ್ಣ ಸ್ವಲ್ಪ ಬದಲಾಗುವವರೆಗೆ ಹುರಿದುಕೊಳ್ಳಿ.
* ಬಳಿಕ ರೆಡ್ ಚಿಲ್ಲಿ ಫ್ಲೇಕ್ಸ್ ಹಾಕಿ ಸ್ವಲ್ಪ ಹುರಿಯಿರಿ.
* ಅದಕ್ಕೆ ಅರ್ಧ ಕಪ್ ನೀರು ಹಾಕಿ (ಪಾಸ್ತಾ ಬೇಯಿಸಿದ ನೀರು ಬಳಸಬಹುದು) ಮಿಶ್ರಣ ಸ್ವಲ್ಪ ದಪ್ಪವಾಗುವವರೆಗೆ ಕುದಿಸಿ.
* ಈಗ ಮೊಟ್ಟೆಗಳನ್ನು ಒಡೆದು ಹಾಕಿ, ಮಿಶ್ರಣ ಮಾಡುತ್ತಾ ಚೆನ್ನಾಗಿ ಬೇಯಿಸಿಕೊಳ್ಳಿ. ಅಗತ್ಯವಿದ್ದರೆ ಸ್ವಲ್ಪ ಉಪ್ಪು ಸೇರಿಸಿ.
* ಈಗ ಪಾಸ್ತಾವನ್ನು ಸೇರಿಸಿ, ಮಿಶ್ರಣ ಮಾಡಿ.
* ಇದೀಗ ಮಕ್ಕಳ ಫೇವರೆಟ್ ಎಗ್ ಪಾಸ್ತಾ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಲು ನೀಡಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ನಲ್ಲಿ ಚಿಕನ್ ಸುಕ್ಕ ಮಾಡಿ – ನಾಲಿಗೆ ಚಪ್ಪರಿಸಿ ಸವಿಯಿರಿ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k