ಮೊಟ್ಟೆ ಬಳಸಿ ಎಷ್ಟು ಬಗೆಯ ಅಡುಗೆ ಮಾಡಬಹುದು ಎಂದರೆ ಲೆಕ್ಕ ಹಿಡಿಯುವುದೇ ಕಷ್ಟ. ಮನೆಯಲ್ಲಿ ಒಂದಷ್ಟು ಮೊಟ್ಟೆ ಇದ್ದಾಗ ಫಟಾಫಟ್ ಅಂತ ಯಾವ ರೀತಿಯ ಅಡುಗೆಯನ್ನೂ ಮಾಡಬಹುದು. ಪಲ್ಯವಾಗಲಿ, ಸಾರು ಆಗಲಿ ಅಥವಾ ಹುರಿದ ಅಡುಗೆಗಳನ್ನೂ ಕೆಲವೇ ನಿಮಿಷಗಳಲ್ಲಿ ಮಾಡಬಹುದು. ನಾವಿಂದು ಕೇವಲ 15 ನಿಮಿಷಗಳಲ್ಲಿ ಮೊಟ್ಟೆಯ ಸೂಪ್ ಮಾಡೋದು ಹೇಗೆಂದು ತಿಳಿಸಿಕೊಡುತ್ತೇವೆ. ಚೈನೀಸ್ ಅಡುಗೆಗಳ ಪಟ್ಟಿಗೆ ಸೇರೋ ಈ ರೆಸಿಪಿಯನ್ನು ಎಗ್ ಡ್ರಾಪ್ ಸೂಪ್ ಎಂತಲೂ ಕರೆಯಬಹುದು.
Advertisement
ಬೇಕಾಗುವ ಪದಾರ್ಥಗಳು:
ಚಿಕನ್ ಸ್ಟಾಕ್/ ವೆಜ್‌ಟೇಬಲ್ ಸ್ಟಾಕ್ – 4 ಕಪ್
ಶುಂಠಿ ಪೇಸ್ಟ್ – 1 ಟೀಸ್ಪೂನ್
ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಕಾಲು ಕಪ್
ಹೆಪ್ಪುಗಟ್ಟಿದ ಕಾರ್ನ್ – 1 ಕಪ್
ಕಾರ್ನ್ ಫ್ಲೋರ್ – 2 ಟೀಸ್ಪೂನ್
ಬೆಳ್ಳುಳ್ಳಿ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕರಿ ಮೆಣಸಿನಪುಡಿ – ಸ್ವಾದಕ್ಕನುಸಾರ
ಅರಿಶಿನ – ಕಾಲು ಟೀಸ್ಪೂನ್
ನೀರು – ಕಾಲು ಕಪ್
ಮೊಟ್ಟೆ – 6 ಇದನ್ನೂ ಓದಿ: ಬಾದಾಮಿ ಹಿಟ್ಟು ಬಳಸಿ ಮಾಡಿ ಟೇಸ್ಟಿ ಪ್ಯಾನ್ ಕೇಕ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆ ತೆಗೆದುಕೊಂಡು ಅದರಲ್ಲಿ ಚಿಕನ್ ಸ್ಟಾಕ್, ಶುಂಠಿ, ಸ್ಪ್ರಿಂಗ್ ಆನಿಯನ್, ಕಾರ್ನ್ ಹಾಕಿ ಕುದಿಯಲು ಬಿಡಿ.
* ಒಂದು ಬೌಲ್‌ನಲ್ಲಿ ಕಾರ್ನ್ ಫ್ಲೋರ್, ಬೆಳ್ಳುಳ್ಳಿ ಪುಡಿ, ಉಪ್ಪು, ಕರಿ ಮೆಣಸಿನಪುಡಿ, ಅರಿಶಿನ ಹಾಕಿ, ಕಾಲು ಕಪ್ ನೀರನ್ನು ಸುರಿದು ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿ.
* ಕಾರ್ನ್ ಫ್ಲೋರ್ ಮಿಶ್ರಣವನ್ನು ಸೂಪ್‌ಗೆ ಸುರಿದು ಮಿಶ್ರಣ ಮಾಡಿ ಹಾಗೂ ಉರಿಯನ್ನು ಕಡಿಮೆ ಮಾಡಿ.
* ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಮೊಟ್ಟೆಗಳನ್ನು ಒಡೆದು ಹಾಕಿ ಚೆನ್ನಾಗಿ ಕಲಡಿಕೊಳ್ಳಿ.
* ಈಗ ಕುದಿಯುತ್ತಿರುವ ಸೂಪ್‌ಗೆ ಮಿಶ್ರಣ ಮಾಡಿಟ್ಟ ಮೊಟ್ಟೆಯನ್ನು ನಿಧಾನವಾಗಿ ಸುರಿಯಿರಿ. ಈ ವೇಳೆ ಚಮಚದ ಸಹಾಯದಿಂದ ನಿಧಾನವಾಗಿ ಮಿಶ್ರಣ ಮಾಡಿ.
* ಈಗ ಉರಿಯನ್ನು ಆಫ್ ಮಾಡಿ, ಇನ್ನಷ್ಟು ಸ್ಪ್ರಿಂಗ್ ಆನಿಯನ್‌ನಿಂದ ಅಲಂಕರಿಸಿ.
* ಇದೀಗ ರುಚಿಕರ ಎಗ್ ಡ್ರಾಪ್ ಸೂಪ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಮಕ್ಕಳು ಇಷ್ಟಪಟ್ಟು ತಿನ್ನುವ ರೆಸಿಪಿ – ಕಾರ್ನ್ ಚೀಸ್ ಸ್ಯಾಂಡ್‌ವಿಚ್ ಮಾಡಿ