ಪ್ರತಿ ಬಾರಿ ಆರೋಗ್ಯಕರ ಹಾಗೂ ರುಚಿಕರವಾಗಿ ಅಡುಗೆ ಮಾಡುವುದು ಸುಲಭವಲ್ಲ. ಆರೋಗ್ಯಕರ ಅಡುಗೆ ಮಾಡಲು ಹೊರಟರೆ ನಾವು ರುಚಿಯ ಬಗ್ಗೆ ಹೆಚ್ಚು ಗಮನ ಕೊಡುವುದು ಅಸಾಧ್ಯವಾಗುತ್ತದೆ. ಅದೇ ರೀತಿ ರುಚಿಕರವಾದ ಅಡುಗೆ ಮಾಡಲು ಹೊರಟರೆ ಆರೋಗ್ಯಕರ ಅಡುಗೆಯೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ನಾವಿಂದು ಹೇಳಿಕೊಡುತ್ತಿರುವ ಅಡುಗೆಯಲ್ಲಿ ಇವೆರಡೂ ಸೇರಿದೆ ಎಂದರೆ ಇದರಷ್ಟು ಒಳ್ಳೆ ವಿಚಾರ ಬೇರೇನಿದೆ. ನಾವಿಂದು ಗೋಧಿ ಹಿಟ್ಟಿನ ರೊಟ್ಟಿ (Wheat Flour Rotti) ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ಅಕ್ಕಿ ರೊಟ್ಟಿಯಂತೆಯೇ ಮಾಡಬಹುದಾದ ಈ ರೆಸಿಪಿಯನ್ನು ನೀವೊಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು:
ಗೋಧಿ ಹಿಟ್ಟು – 1 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 1
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಕರಿಬೇವಿನ ಸೊಪ್ಪು – 1 ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಹಿಟ್ಟು ತಯಾರಿಸಲು ಬೇಕಾಗುವಷ್ಟು
ಎಣ್ಣೆ – ರೊಟ್ಟಿ ಮಾಡಲು ಬೇಕಾಗುವಷ್ಟು ಇದನ್ನೂ ಓದಿ: ರುಚಿಕರ, ಆರೋಗ್ಯಕರ – ಸೋಯಾಬೀನ್ ದೋಸೆ ಮಾಡಿ
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಈರುಳ್ಳಿ, ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ಜೀರಿಗೆಯನ್ನು ತೆಗೆದುಕೊಂಡು, ಮಿಶ್ರಣ ಮಾಡಿ.
* ಈಗ ಗೋಧಿ ಹಿಟ್ಟನ್ನು ಸೇರಿಸಿ, ಉಪ್ಪು ಮತ್ತು ನೀರು ಬೆರೆಸಿ, ಎಲ್ಲವನ್ನೂ ಮಿಶ್ರಣ ಮಾಡುತ್ತಾ ಮೃದುವಾದ ಹಿಟ್ಟನ್ನು ತಯಾರಿಸಿ.
* ಈಗ ಪ್ಯಾನ್ ಅನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಎಣ್ಣೆ ಸವರಿ, ಕಿತ್ತಳೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಅದರ ಮೇಲಿಡಿ.
* ನಿಮ್ಮ ಕೈಗಳಿಂದ ನಿಧಾನವಾಗಿ ರೊಟ್ಟಿಯಂತೆ ಒತ್ತಿಕೊಳ್ಳುತ್ತಾ ಹಿಟ್ಟನ್ನು ಹರಡಿಕೊಳ್ಳಿ.
* ಬಳಿಕ ರೊಟ್ಟಿಯ ಮೇಲೆ ಫೋರ್ಕ್ ಸಹಾಯದಿಂದ ಕೆಲವು ರಂಧ್ರಗಳನ್ನು ಮಾಡಿ.
* ಈಗ ತವಾವನ್ನು ಬಿಸಿ ಮಾಡಿ, ರೊಟ್ಟಿಯನ್ನು ಮಧ್ಯಮ ಉರಿಯಲ್ಲಿ ಮುಚ್ಚಿ ಬೇಯಿಸಿಕೊಳ್ಳಿ.
* ರೊಟ್ಟಿ ಗರಿಗರಿಯಾಗುವವರೆಗೆ ಎರಡೂ ಬದಿಗಳಲ್ಲಿ ಬೇಯಿಸಿಕೊಳ್ಳಿ.
* ಇದೀಗ ಗೋಧಿ ಹಿಟ್ಟಿನ ರೊಟ್ಟಿ ತಯಾರಾಗಿದ್ದು, ಇದನ್ನು ತೆಂಗಿನ ಚಟ್ನಿ, ಚಟ್ನಿ ಪುಡಿ, ಮೊಸರು ಅಥವಾ ಬೆಣ್ಣೆಯೊಂದಿಗೆ ಸವಿಯಿರಿ. ಇದನ್ನೂ ಓದಿ: ಕಲ್ಲಂಗಡಿ ಸಿಪ್ಪೆಯನ್ನು ಎಸೆಯುವ ಬದಲು ಮಾಡಿ ನೋಡಿ ದೋಸೆ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k