ಪ್ರತಿ ಬಾರಿ ಮನೆಗೆ ಬ್ರೆಡ್ ತಂದಾಗ ಅದರಲ್ಲಿ ಕೆಲ ತುಂಡುಗಳು ಉಳಿದು ಹೋಗೋದು ಸರ್ವೇ ಸಾಮಾನ್ಯ. ಯಾವಾಗಲೂ ಸ್ಯಾಂಡ್‌ವಿಚ್ ತಿನ್ನೋದು ಬೋರ್ ಅಂತ ಎನಿಸಬಹುದು. ಹಾಗಿದ್ರೆ ಈಗ ಉಳಿದುಹೋಗಿರೋ ಬ್ರೆಡ್ ಅನ್ನು ಏನು ಮಾಡೋದು? ಹಾಳಾಗೋಕೂ ಮುನ್ನ ಬ್ರೆಡ್ ಅನ್ನು ಸುಮ್ನೆ ಎಸೆಯೋಕೆ ಯಾರಿಂದ್ಲೂ ಮನಸು ಬರಲ್ಲ. ಹಾಗಿದ್ರೆ ಉಳಿದು ಹೋಗಿರೋ ಬ್ರೆಡ್‌ನಿಂದ ಈ ರೆಸಿಪಿಯನ್ನು ನೀವು ಟ್ರೈ ಮಾಡ್ಬೋದು. ಉಳಿದುಹೋದ ಬ್ರೆಡ್‌ನಿಂದ ಈ ರುಚಿಕರ ವಡೆ ರೆಸಿಪಿಯನ್ನು ನೀವು ಕೂಡಾ ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ರವೆ – 3 ಟೀಸ್ಪೂನ್
ಮೊಸರು – 1 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಶುಂಠಿ ಪೇಸ್ಟ್ – ಅರ್ಧ ಟೀಸ್ಪೂನ್
ಕತ್ತರಿಸಿದ ಕರಿಬೇವಿನ ಎಲೆ – ಕೆಲವು
ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್
ಜೀರಿಗೆ – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು
ಬ್ರೆಡ್ – 4 ಸ್ಲೈಸ್
ಅಕ್ಕಿ ಹಿಟ್ಟು – 100 ಗ್ರಾಂ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್ ತೆಗೆದುಕೊಂಡು, ಅದರಲ್ಲಿ ಬ್ರೆಡ್‌ಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಹಾಕಿ.
* ಅದಕ್ಕೆ ರವೆ, ಮೊಸರು, ಈರುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ, ಕರಿಬೇವಿನ ಎಲೆ, ಕೊತ್ತಂಬರಿ ಸೊಪ್ಪು, ಚಿಲ್ಲಿ ಫ್ಲೇಕ್ಸ್, ಜೀರಿಗೆ ಮತ್ತು ಉಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ನಿಮ್ಮ ಕೈಗಳಿಗೆ ಸ್ವಲ್ಪ ಎಣ್ಣೆಯನ್ನು ಸವರಿಕೊಂಡು, ಸ್ವಲ್ಪ ಸ್ವಲ್ಪವೇ ಮಿಶ್ರಣವನ್ನು ತೆಗೆದುಕೊಂಡು, ಚಪ್ಪಟೆಯಾಗಿ ವಡೆಯ ಆಕಾರ ನೀಡಿ.
* ಈಗ ಒಂದೊಂದೇ ವಡೆಗಳನ್ನು ಬಿಸಿ ಎಣ್ಣೆಯಲ್ಲಿ ಬಿಟ್ಟು ಡೀಪ್ ಫ್ರೈ ಮಾಡಿ.
* ವಡೆಯ ಎರಡೂ ಬದಿಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಬಳಿಕ ಅದನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಇದೀಗ ಗರಿಗರಿಯಾದ ಬ್ರೆಡ್ ವಡೆ ತಯಾರಾಗಿದ್ದು, ಇದನ್ನು ಪುದೀನಾ ಚಟ್ನಿ ಅಥವಾ ಸಾಸ್ ಜೊತೆ ಬಿಸಿಬಿಸಿಯಾಗಿ ಸವಿಯಿರಿ.