ಹಬ್ಬದ ಸಂದರ್ಭದಲ್ಲಿ ನೀವು ಒಂದು ಒಳ್ಳೆಯ ರೆಸಿಪಿಯನ್ನು ಹುಡುಕುತ್ತಿದ್ದರೆ ಒಮ್ಮೆ ಸಬ್ಬಕ್ಕಿಯ ಕಿಚಡಿ ಮಾಡಿ ನೋಡಿ. ಅಡುಗೆ ಮನೆಯಲ್ಲಿ ಸಿಗುವ ಸಾಮಾನ್ಯ ಪದಾರ್ಥಗಳಿಂದ ರುಚಿಕರವಾದ ಸಬ್ಬಕ್ಕಿ ಕಿಚಡಿಯನ್ನು ತಯಾರಿಸಬಹುದು. ನಿಮ್ಮ ಆದ್ಯತೆಯ ಮೇರೆಗೆ ಮಸಾಲೆ ಪದಾರ್ಥಗಳನ್ನೂ ಬದಲಿಸಿ ನಿಮ್ಮ ಟೇಸ್ಟ್‌ನತೆ ತಯಾರಿಸಬಹುದು. ಸಬ್ಬಕ್ಕಿ ಕಿಚಡಿ ಮಾಡುವ ಸಿಂಪಲ್ ವಿಧಾನ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ಸಬ್ಬಕ್ಕಿ/ಸಾಬುದಾನ – 450 ಗ್ರಾಂ
ನೀರು – ನೆನೆಸಲು
ಎಣ್ಣೆ – 2 ಚಮಚ
ಜೀರಿಗೆ – 1 ಟೀಸ್ಪೂನ್
ಕರಿಬೇವಿನ ಎಲೆ – 3-4
ತುರಿದ ಶುಂಠಿ – ಅರ್ಧ ಚಮಚ
Advertisement
Advertisement
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಆಲೂಗಡ್ಡೆ – 2
ಕೇಸರಿ – ಅರ್ಧ ಟೀಸ್ಪೂನ್
ಹುರಿದ ಕಡಲೆಕಾಯಿ – ಅರ್ಧ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – 2 ಟೀಸ್ಪೂನ್
ನಿಂಬೆ ರಸ – 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಸೂಪರ್ ಟೇಸ್ಟಿ ಕಾಜು ಮಸಾಲಾ ರೆಸಿಪಿ
Advertisement
ಮಾಡುವ ವಿಧಾನ:
* ಮೊದಲಿಗೆ ಸಬ್ಬಕ್ಕಿಯನ್ನು ತಣ್ಣನೆಯ ನೀರಿನಲ್ಲಿ ತೊಳೆದು, ಒಂದು ಪಾತ್ರೆಯಲ್ಲಿ ಹಾಕಿ, ಅದು ಸಂಪೂರ್ಣವಾಗಿ ಮುಳುಗುವಷ್ಟು ನೀರು ಹಾಕಿ 5-6 ಗಂಟೆ ನೆನೆಸಿಡಿ.
* ಈಗ ಭಾರವಾದ, ತಳದ ಪಾತ್ರೆಯಲ್ಲಿ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಜೀರಿಗೆ ಹಾಕಿ ಹುರಿಯಿರಿ.
* ಈಗ ಆಲೂಗಡ್ಡೆ ಹಾಕಿ ಮೃದುವಾಗುವವರೆಗೆ ಬೇಯಿಸಿ.
* ಕರಿಬೇವಿನ ಎಲೆ, ಶುಂಠಿ ಹಾಗೂ ಹೆಚ್ಚಿದ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ.
* ಹುರಿದ ಕಡಲೆಕಾಯಿ, ಸಕ್ಕರೆ, ಉಪ್ಪು, ನಿಂಬೆ ರಸ ಹಾಗೂ ನೆನೆಸಿಟ್ಟಿದ್ದ ಸಬ್ಬಕ್ಕಿಯನ್ನು ನೀರಿನಿಂದ ಬೇರ್ಪಡಿಸಿ, ಹಾಕಿ.
* ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ, ಸಬ್ಬಕ್ಕಿ ಅರೆ ಪಾರದರ್ಶಕವಾಗುವವರೆಗೆ ಬೇಯಿಸಿ.
* ಈಗ ಕೇಸರಿ ಸೇರಿಸಿ ಮಿಕ್ಸ್ ಮಾಡಿ.
* ಕೊನೆಯದಾಗಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ತೆಂಗಿನಕಾಯಿಯಿಂದ ಲಡ್ಡು ಮಾಡುವುದು ಹೇಗೆ ಗೊತ್ತಾ?