ದಕ್ಷಿಣ ಭಾರತದಲ್ಲಿ (South Indian) ಅನ್ನ ಹಾಗೂ ರಸಂನ (Rasam) ಸಂಯೋಜನೆ ಇಲ್ಲದೇ ಹೋದರೆ ಊಟ ಅಪೂರ್ಣವಾದಂತೆ. ದಕ್ಷಿಣ ಭಾರತವಾದರೂ ವಿವಿಧ ರಾಜ್ಯಗಳಲ್ಲಿ ಬೇರೇ ಬೇರೆ ರೀತಿಯಲ್ಲಿಯೇ ರಸಂ ತಯಾರಿಸಲಾಗುತ್ತದೆ. ನಾವಿಂದು ಪ್ರೆಶರ್ ಕುಕ್ಕರ್ ಹಾಗೂ ಬೇಳೆಯನ್ನು ಬಳಸದೇ ರಸಂ ಮಾಡುವ ವಿಧಾನವನ್ನು ಹೇಳಿಕೊಡುತ್ತೇವೆ. ನೀವೂ ಕೂಡಾ ಇದನ್ನು ಮನೆಯಲ್ಲಿ ಮಾಡಿ ಆನಂದಿಸಿ.
Advertisement
ಬೇಕಾಗುವ ಪದಾರ್ಥಗಳು:
ಪೇಸ್ಟ್ ತಯಾರಿಸಲು:
ಜೀರಿಗೆ – 1 ಟೀಸ್ಪೂನ್
ಕರಿಮೆಣಸು – 1 ಟೀಸ್ಪೂನ್
ಬೆಳ್ಳುಳ್ಳಿ – 3 ಎಸಳು
ಕೊತ್ತಂಬರಿ ಬೀಜ – 2 ಟೀಸ್ಪೂನ್
Advertisement
Advertisement
ರಸಂ ತಯಾರಿಸಲು:
ಎಣ್ಣೆ – 2 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ಒಣ ಕೆಂಪು ಮೆಣಸಿನಕಾಯಿ – 2
ಕರಿಬೇವಿನ ಎಲೆ – ಸ್ವಲ್ಪ
ಇಂಗ್ – ಚಿಟಿಕೆ
ಹೆಚ್ಚಿದ ಟೊಮೆಟೊ – 1
ಅರಿಶಿನ – ಕಾಲು ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಸೀಳಿದ ಮೆಣಸಿನಕಾಯಿ – 1
ಹುಣಸೆಹಣ್ಣಿನ ಸಾರ – 1 ಕಪ್
ನೀರು – 3 ಕಪ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಮನೆಯಲ್ಲಿಯೇ ಮಾಡಿ ಗರಿಗರಿಯಾದ ನೆಲಗಡಲೆ ಮಸಾಲಾ
Advertisement
ಮಾಡುವ ವಿಧಾನ:
* ಮೊದಲಿಗೆ ಬ್ಲೆಂಡರ್‌ಗೆ ಜೀರಿಗೆ, ಕರಿಮೆಣಸು, ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಬೀಜ ಹಾಕಿ, ನೀರನ್ನು ಸೇರಿಸದೇ ಒರಟಾಗಿ ಪೇಸ್ಟ್ ತಯಾರಿಸಿ ಪಕ್ಕಕ್ಕಿಡಿ.
* ದೊಡ್ಡ ಕಡಾಯಿಯಲ್ಲಿ ಎಣ್ಣೆ, ಸಾಸಿವೆ, ಒಣ ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆ ಹಾಗೂ ಚಿಟಿಕೆ ಇಂಗ್ ಹಾಕಿ ಹುರಿಯಿರಿ.
* ಮೊದಲೇ ತಯಾರಿಸಿಟ್ಟ ಪೇಸ್ಟ್ ಅನ್ನು ಸೇರಿಸಿ, ಒಂದು ನಿಮಿಷ ಬೇಯಿಸಿ.
* ಈಗ ಟೊಮೆಟೊ, ಅರಿಶಿನ, ಉಪ್ಪು ಮೆಣಸಿನಕಾಯಿ ಸೇರಿಸಿ, ಟೊಮೆಟೊ ಮೃದುವಾಗುವವರೆಗೆ ಸಾಟ್ ಮಾಡಿ.
* ಬಳಿಕ ಹುಣಸೆಹಣ್ಣಿನ ಸಾರ ಮತ್ತು 3 ಕಪ್ ನೀರು ಸೇರಿಸಿ, ಚೆನ್ನಾಗಿ ಬೆರೆಸಿ.
* ಈಗ ಕಡಾಯಿಯನ್ನು ಮುಚ್ಚಿ, ಹಸಿ ಪರಿಮಳ ಹೋಗುವವರೆಗೆ ಸುಮಾರು 8 ನಿಮಿಷ ಕುದಿಸಿ.
* ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ.
* ಈಗ ರುಚಿಕರವಾದ ರಸಂ ತಯಾರಾಗಿದ್ದು, ಬಿಸಿಯಾದ ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ಆರೋಗ್ಯಕರ ಮೆಂತ್ಯ ಸೊಪ್ಪಿನ ಬಾಜಿ ಮಾಡಿ ನೋಡಿ