ಮನೆತುಂಬಾ ಮಕ್ಕಳಿರುವಾಗ ಆಗಾಗ ಸಿಹಿ ತಿಂಡಿ ಮಾಡಲೇಬೇಕಾಗುತ್ತದೆ. ಏಕೆಂದರೆ ಪುಟ್ಟ ಮಕ್ಕಳು ಆಗಾಗ ಸಿಹಿ ತಿಂಡಿಗಳನ್ನು ಕೇಳುತ್ತಾರೆ ಅಲ್ವಾ? ಈ ಸಂದರ್ಭ ಸುಲಭವಾಗಿ ಮಾಡಬಹುದಾದ ಸಿಹಿ ತಿಂಡಿಗಳ ಲಿಸ್ಟ್ ಕೂಡಾ ನಿಮ್ಮಲ್ಲಿ ಇರಬೇಕಾಗುತ್ತದೆ. ನಾವಿಂದು ತುಂಬಾ ರುಚಿಕರವಾದ ಸಿಹಿ ಅನಾನಸ್ ಕೇಸರಿ ಬಾತ್ (Pineapple Kesari Bath)ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಸಿಂಪಲ್ ಆದ ಈ ರೆಸಿಪಿಯನ್ನು ನೀವು ಕೂಡಾ ಮಾಡಿ ಮಕ್ಕಳಿಗೆ ಖಂಡಿತವಾಗಿಯೂ ನೀಡಿ.
Advertisement
ಬೇಕಾಗುವ ಪದಾರ್ಥಗಳು:
ಅನಾನಸ್ ಪ್ಯೂರಿ – 1 ಕಪ್
ಬೆಣ್ಣೆ – 1 ಟೀಸ್ಪೂನ್
ಸಕ್ಕರೆ – 1 ಟೀಸ್ಪೂನ್
ಹಾಲು – 1 ಕಪ್
ರವೆ – 1 ಕಪ್
ಸಕ್ಕರೆ (ಪರ್ಯಾಯ) – 3 ಟೀಸ್ಪೂನ್
ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
ಕೇಸರಿ – ಕೆಲವು ಎಸಳು (2 ಟೀಸ್ಪೂನ್ ಬೆಚ್ಚಗಿನ ಹಾಲಿನಲ್ಲಿ ನೆನೆಸಿಡಿ) ಇದನ್ನೂ ಓದಿ: ಸಿಹಿಯಾದ ಕ್ಯಾರೆಟ್ ಖೀರ್ ಮಾಡುವ ಸಿಂಪಲ್ ವಿಧಾನ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಅನಾನಸ್ ಪ್ಯೂರಿ ಹಾಕಿ, 1 ಟೀಸ್ಪೂನ್ ಸಕ್ಕರೆ ಸೇರಿಸಿ ಮಿಶ್ರಣ ಮಾಡುತ್ತಾ 3-4 ನಿಮಿಷ ಕುದಿಸಿ.
* ಇನ್ನೊಂದು ತವಾ ತೆಗೆದುಕೊಂಡು ಅದಕ್ಕೆ ಬೆಣ್ಣೆ ಹಾಕಿ, ರವೆ ಸೇರಿಸಿ, ಗುಲಾಬಿ ಬಣ್ಣಕ್ಕೆ ತಿರುಗುವವರೆಗೆ ಕೈಯಾಡಿಸುತ್ತಾ ಹುರಿಯಿರಿ.
* ಈಗ ರವೆಗೆ ಹಾಲನ್ನು ಹಾಕಿ, ಅಗತ್ಯವಿದ್ದರೆ ನೀರನ್ನು ಸೇರಿಸಿ ಕಲಸಿಕೊಳ್ಳಿ.
Advertisement
* ಮಿಶ್ರಣ ದಪ್ಪವಾಗುತ್ತಿದ್ದಂತೆ 3 ಟೀಸ್ಪೂನ್ ಸಕ್ಕರೆ ಸೇರಿಸಿ, ಕೈಯಾಡಿಸುವುದನ್ನು ಮುಂದುವರಿಸಿ.
* ಈಗ ಅನಾನಸ್ ಪ್ಯೂರಿಯನ್ನು ಸೇರಿಸಿ, ಮಧ್ಯಮ ಉರಿಯಲ್ಲಿ ಬೇಯಿಸಿ.
* ನೆನೆಸಿಟ್ಟ ಕೇಸರಿ ಹಾಲು ಹಾಗೂ ಏಲಕ್ಕಿ ಪುಡಿಯನ್ನು ಹಾಕಿ, ಮಿಶ್ರಣ ಮಾಡಿ.
* ಕೇಸರಿಬಾತ್ ಅನ್ನು 1-2 ನಿಮಿಷ ಬೇಯಿಸಿ, ಬಳಿಕ ಉರಿಯನ್ನು ಆಫ್ ಮಾಡಿ.
* ಇದೀಗ ಅನಾನಸ್ ಕೇಸರಿಬಾತ್ ತಯಾರಾಗಿದ್ದು, ಸವಿಯಲು ಮಕ್ಕಳಿಗೆ ನೀಡಿ. ಇದನ್ನೂ ಓದಿ: ಮನೆಯಲ್ಲಿ ಸ್ಟ್ರಾಬೆರಿ ಜಾಮ್ ಮಾಡುವುದು ಹೇಗೆ?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k