ಮಳೆಗಾಲದ ಈ ದಿನಗಳಲ್ಲಿ ಒಂದು ಕಪ್ ಚಹಾ ಜೊತೆ ಸವಿಯಲು ಏನಾದರೂ ಬಿಸಿಬಿಸಿಯಾದ ಖಾದ್ಯ ಇದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಚುಮುಚುಮು ಚಳಿಗೆ ನಾವಿಂದು ರುಚಿರುಚಿಯಾದ ರೆಸಿಪಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಮಾಡೋಕೆ ತುಂಬಾ ಸುಲಭವಾಗಿದೆ ಮಸಾಲಾ ಸ್ವೀಟ್ ಕಾರ್ನ್ ವಡಾ. ಹಾಗಿದ್ರೆ ಗರಿಗರಿಯಾದ ಈ ರೆಸಿಪಿ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಒರಟಾಗಿ ಪುಡಿ ಮಾಡಿದ ಸ್ವೀಟ್ ಕಾರ್ನ್ – 1 ಕಪ್
ಕಡಲೆ ಹಿಟ್ಟು – ಅರ್ಧ ಕಪ್
ಅಕ್ಕಿ ಹಿಟ್ಟು – ಕಾಲು ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – ಕಾಲು ಕಪ್
ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಮ್ – ಕಾಲು ಕಪ್
ಬೆಳ್ಳುಳ್ಳಿ ಪೇಸ್ಟ್ – ಕಾಲು ಟೀಸ್ಪೂನ್
ಮೆಣಸಿನ ಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – ಕಾಲು ಟೀಸ್ಪೂನ್
ನಿಂಬೆ ರಸ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು
ಚಾಟ್ ಮಸಾಲಾ – 1 ಟೀಸ್ಪೂನ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್‌ನಲ್ಲಿ ಕಾರ್ನ್, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಈರುಳ್ಳಿ, ಕ್ಯಾಪ್ಸಿಕಮ್, ಬೆಳ್ಳುಳ್ಳಿ, ಮೆಣಸಿನ ಪುಡಿ, ಅರಿಶಿನ ಪುಡಿ, ನಿಂಬೆ ರಸ ಹಾಗೂ ಉಪ್ಪು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಹಿಟ್ಟಿಗೆ ಸಣ್ಣ ಸಣ್ಣ ವಡಾಗಳ ರೂಪವನ್ನು ನೀಡಿ.
* ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ವಡಾಗಳನ್ನು ಬಿಟ್ಟು, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಎರಡೂ ಬದಿ ಚೆನ್ನಾಗಿ ಹುರಿದುಕೊಳ್ಳಿ.
* ಬಳಿಕ ಅವುಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಕೊನೆಯಲ್ಲಿ ಚಾಟ್ ಮಸಾಲಾವನ್ನು ವಡಾಗಳ ಮೇಲೆ ಸಿಂಪಡಿಸಿ.
* ಇದೀಗ ರುಚಿರುಚಿಯಾದ ಮಸಾಲಾ ಸ್ವೀಟ್ ಕಾರ್ನ್ ವಡಾ ತಯಾರಾಗಿದ್ದು, ನಿಮ್ಮಿಷ್ಟದ ಸಾಸ್‌ನೊಂದಿಗೆ ಸವಿಯಿರಿ.
Advertisement
Web Stories