ಹೂಕೋಸು ಅಥವಾ ಗೋಬಿಯ ಯಾವುದೇ ಖಾದ್ಯವನ್ನು ರುಚಿಕರವಾಗಿ ತಯಾರಿಸಬಹುದು. ಅಡುಗೆ ಮನೆಯಲ್ಲಿ ಹೊಸ ತರಕಾರಿಗಳು ಯಾವುದೂ ಇಲ್ಲ ಎನಿಸಿದರೆ ಈ ತರಕಾರಿಯನ್ನು ಖರೀದಿಸೋದು ಬೆಸ್ಟ್. ಬೇಕೆನಿಸಿದಾಗ ರುಚಿ ರುಚಿಯಾದ ಸ್ನ್ಯಾಕ್ಸ್ ತಯಾರಿಸಲು ಇದು ಪರ್ಫೆಕ್ಟ್ ಆಗಿರುತ್ತದೆ. ನಾವಿಂದು ಸಿಹಿ, ಹುಳಿ, ಮಸಾಲೆಯುಕ್ತ ರುಚಿಕರವಾದ ಗೋಬಿ ಬೈಟ್ಸ್ ಮಾಡೋದು ಹೇಗೆಂದು ತಿಳಿಸಿಕೊಡುತ್ತೇವೆ. ಇದನ್ನು ಸಂಜೆ ವೇಳೆ ಸ್ನ್ಯಾಕ್ಸ್ ಆಗಿ ಸವಿಯಬಹುದು.
Advertisement
ಬೇಕಾಗುವ ಪದಾರ್ಥಗಳು:
ಕತ್ತರಿಸಿ ಶುಚಿಗೊಳಿಸಿದ ಹೂಕೋಸು – 1 (ಸುಮಾರು 500 ಗ್ರಾಂ)
ಎಣ್ಣೆ – 2 ಟೀಸ್ಪೂನ್
ಟೊಮೆಟೊ ಕೆಚಪ್ – 4 ಟೀಸ್ಪೂನ್
ಚಿಲ್ಲಿ ಸಾಸ್ – 2 ಟೀಸ್ಪೂನ್
ಕಂದು ಸಕ್ಕರೆ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಹೆಚ್ಚಿದ ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ ಇದನ್ನೂ ಓದಿ: ಮಕ್ಕಳು ಇಷ್ಟಪಟ್ಟು ತಿನ್ನುವ ರೆಸಿಪಿ – ಕಾರ್ನ್ ಚೀಸ್ ಸ್ಯಾಂಡ್‌ವಿಚ್ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಏರ್ ಫ್ರೈಯರ್ ಅನ್ನು ಪೂರ್ವಭಾವಿಯಾಗಿ 350 ಡಿಗ್ರಿ ಎಫ್‌ಗೆ 5 ನಿಮಿಷಗಳ ಕಾಲ ಕಾಯಿಸಿಕೊಳ್ಳಿ.
* ಕತ್ತರಿಸಿ ಶುಚಿಗೊಳಿಸಿದ ಹೂಕೋಸನ್ನು ಒಂದು ಮಿಕ್ಸಿಂಗ್ ಬೌಲ್‌ಗೆ ಹಾಕಿ ಅದಕ್ಕೆ ಎಣ್ಣೆ ಚಿಮುಕಿಸಿ ಕೈಗಳಿಂದ ಚೆನ್ನಾಗಿ ಲೇಪನವಾಗುವಂತೆ ಮಿಶ್ರಣ ಮಾಡಿ.
* ಈಗ ಹೂಕೋಸನ್ನು ಏರ್ ಫ್ರೈಯರ್‌ನ ಬಾಸ್ಕೆಟ್‌ಗೆ ಹಾಕಿ ಸಮವಾಗಿ ಹರಡಿ. ಹೆಚ್ಚುವರಿ ಹೂಕೋಸು ಇದ್ದರೆ ಬ್ಯಾಚ್‌ಗಳಲ್ಲಿ ಕಾಯಿಸಿಕೊಳ್ಳಬಹುದು.
* ಹೂಕೋಸುಗಳನ್ನು 8 ನಿಮಿಷಗಳ ಕಾಲ ಫ್ರೈ ಮಾಡಿ.
* ಗೋಬಿ ಫ್ರೈ ಆಗುತ್ತಿರುವ ವೇಳೆ ಸಾಸ್ ಅನ್ನು ತಯಾರಿಸಿ. ಅದಕ್ಕಾಗಿ ಒಂದು ಬೌಲ್‌ನಲ್ಲಿ ಕೆಚಪ್, ಚಿಲ್ಲಿ ಸಾಸ್, ಸಕ್ಕರೆ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಹೂಕೋಸು ಭಾಗಶಃ ಬೆಂದಿರುತ್ತದೆ. ಇದನ್ನು ಬೌಲ್‌ಗೆ ಹಾಕಿ ಸಾಸ್‌ನೊಂದಿಗೆ ಚೆನ್ನಾಗಿ ಲೇಪನವಾಗುವವರೆಗೆ ಮಿಶ್ರಣ ಮಾಡಿ.
* ಈಗ ಮತ್ತೆ ಏರ್ ಫ್ರೈಯರ್‌ನ ಬಾಸ್ಕೆಟ್‌ಗೆ ಹೂಕೋಸನ್ನು ಹಾಕಿ, ಹರಡಿ 370 ಡಿಗ್ರಿ ಎಫ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ಬೇಯಿಸಿ. ಸುಮಾರು 8 ನಿಮಿಷಗಳ ನಡುವೆ ಒಮ್ಮೆ ಟಾಸ್ ಮಾಡಿ.
* ಇದೀಗ ಗೋಬಿ ಬೈಟ್ಸ್ ಅನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಚಹಾದ ಸಮಯದಲ್ಲಿ ಗೋಬಿ ಬೈಟ್ಸ್ ಅನ್ನು ಸವಿದು ಆನಂದಿಸಿ. ಇದನ್ನೂ ಓದಿ: ಉಳಿದ ಇಡ್ಲಿಗಳಿಂದ ಮಾಡಿ ಇಡ್ಲಿ ಮಂಚೂರಿಯನ್